More

    ಕರೊನಾ ನಿಯಮ ಮರೆತು ಮಾಸ್ಕ್ ಇಲ್ಲದೆ ರಾಂಪ್ ವಾಕ್ ಮಾಡಿದ ಮಹಾರಾಷ್ಟ್ರದ ಮೇಯರ್!

    ಪುಣೆ: ಮಹಾರಾಷ್ಟ್ರದಲ್ಲಿ ಕರೊನಾ ಪ್ರಕರಣಗಳು ಹೆಚ್ಚಿರುವ ಬಗ್ಗೆ ಇಡೀ ದೇಶವೇ ಹೈರಾಣಾಗಿರುವಾಗ, ರಾಜ್ಯದ ಪಿಂಪ್ರಿ-ಚಿಂಚವಾಡ ನಗರದ ಮೇಯರ್ ಉಷಾ ಧೋರೆ, ಮಾಸ್ಕ್ ಇಲ್ಲದೆ ರಾಂಪ್ ವಾಕ್ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ಎನ್​ಸಿಪಿ ಸಂಸದ ಅಮೋಲ್ ಕೋಲ್ಹೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಮೇಯರ್ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಗರಪಾಲಿಕೆಯನ್ನು ಆಗ್ರಹಿಸಿದ್ದಾರೆ.

    ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಕರೊನಾ ಹೊಸ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಪುಣೆಯ ಹೊರಭಾಗಕ್ಕೆ ಸೇರಿದಂತಿರುವ ಪಿಂಪ್ರಿ-ಚಿಂಚವಾಡ ಅವಳಿ ನಗರಗಳ ವ್ಯಾಪ್ತಿಯಲ್ಲಿ ಕೂಡ ಕರೊನಾ ಪಾಸಿಟೀವಿಟಿ ದರವು ಶೇ.5 ರಿಂದ 23 ಕ್ಕೆ ಏರಿದೆ. ದಿನಕ್ಕೆ 1800 ದಿಂದ 2,000 ಕರೊನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಪರೀಕ್ಷೆಗಳ ವರದಿಯನ್ನು 24 ಗಂಟೆಗಳ ಒಳಗೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಕಮಿಷನರ್ ರಾಜೇಶ್ ಪಾಟೀಲ್ ಸೂಚಿಸಿದ್ದಾರೆ.

    ಇದನ್ನೂ ಓದಿ: ಮತ್ತೆ ಹಬ್ಬುತ್ತಿದೆ ಕರೊನಾ… ಮತ್ತೊಬ್ಬ ಸಚಿವರಲ್ಲಿ ಕರೊನಾ ಸೋಂಕು ಪತ್ತೆ !

    ಹೀಗಿರುವಾಗ, ಪಿಂಪ್ರಿ-ಚಿಂಚವಾಡ ನಗರದಲ್ಲಿ ಬಿಜೆಪಿ ಶಾಸಕ ಲಕ್ಷ್ಮಣ್ ಜಗತಾಪ್ ಅವರ ಜನ್ಮದಿನ ಆಚರಿಸಲು ಸೋಮವಾರ (ಫೆಬ್ರವರಿ 22) ಮಿಸ್​ ಪಿಂಪ್ರಿ-ಚಿಂಚವಾಡ್​ ಅಂಡ್ ಮಿಸಸ್ ಪಿಂಪ್ರಿ-ಚಿಂಚವಾಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೋರೆ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಸಾಮಾಜಿಕ ಅಂತರವೂ ಸೇರಿದಂತೆ ಕೋವಿಡ್ ಮುನ್ನೆಚ್ಚರಿಕೆಗಳನ್ನು ನೆರೆದಿದ್ದ ಜನರಾಗಲೀ, ಸೆಲೆಬ್ರಿಟಿಗಳಾಗಲೀ ಪಾಲಿಸಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇನ್ನೂರು ಜನರು ಮಾತ್ರ ಭಾಗವಹಿಸಬೇಕೆಂಬ ನಿಯಮವಿದ್ದರೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ಎನ್​​ಸಿಪಿ ಆರೋಪಿಸಿದೆ.

    “ಕರೊನಾ ಹೆಚ್ಚಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆಯಷ್ಟೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಭೆ ನಡೆಸಿ ಹೆಚ್ಚಿನ ನಿರ್ಬಂಧಗಳನ್ನು ಆದೇಶಿಸಿದ್ದರು. ಈ ನಿರ್ಬಂಧಗಳನ್ನು ಗಾಳಿಗೆ ತೂರಿ ನಡೆದ ಸಮಾರಂಭದಲ್ಲಿ ಫ್ಯಾಶನ್ ಶೋನಲ್ಲಿ ಮೇಯರ್​ ಅವರು ಭಾಗವಹಿಸಿರುವುದು ದುರದೃಷ್ಟಕರ” ಎಂದು ಕೋಲ್ಹೆ ಟ್ವೀಟ್ ಮಾಡಿದ್ದಾರೆ. ಈ ನಿಟ್ಟಿನಲ್ಲಿ, “ಪಿಂಪ್ರಿ-ಚಿಂಚವಾಡ ನಗರಪಾಲಿಕೆಯು, ನಿಯಮಗಳನ್ನು ಉಲ್ಲಂಘಿಸಿದರೆ ಸಾಮಾನ್ಯ ಜನರ ವಿರುದ್ಧ ಕ್ರಮ ಕೈಗೊಳ್ಳುವಂತೆಯೇ ಮೇಯರ್​ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು” ಎಂದು ಕೋಲ್ಹೆ ಹೇಳಿದ್ದಾರೆ.

    ಇದನ್ನೂ ಓದಿ: ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?

    ಮಾಜಿ ಮೇಯರ್ ಮಂಗಳ ಕದಂ, “ಉನ್ನತ ಹುದ್ದೆಯಲ್ಲಿದ್ದುಕೊಂಡು, ನಿಯಮ ಪಾಲಿಸಲು ಮಾದರಿಯಾಗುವ ಬದಲು, ಖಲ್ಲಂಖುಲ್ಲಾ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇನ್ನು ಸಾಮಾನ್ಯ ನಾಗರೀಕರು ನಿಯಮಗಳನ್ನು ಪಾಲಿಸಬೇಕೆಂದು ಹೇಗೆ ಅಪೇಕ್ಷಿಸುವುದು ?” ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ದೆಹಲಿಗೆ ಹೋಗುವ ಪ್ರಯಾಣಿಕರಿಗೆ ಬೇಕು ಕರೊನಾ ನೆಗೆಟೀವ್ ವರದಿ

    ಆಸ್ಪತ್ರೆಯ ಡ್ರೆಸ್ ಚೇಂಜಿಂಗ್ ರೂಮಲ್ಲಿ ಕ್ಯಾಮೆರಾ! ಮೊಬೈಲ್ ಚಾರ್ಜ್​ಗೆ ಹಾಕಿ ರೆಕಾರ್ಡಿಂಗ್!

    ಹೆಚ್ಚು ಹರಡುವ ಹೊಸ ರೂಪ ತಾಳುತ್ತಿದೆ ಕರೊನಾ : ವಹಿಸಿರಿ ಕಟ್ಟೆಚ್ಚರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts