More

    ಟ್ವಿಟರ್​ ಫಾಲೋವರ್ಸ್​ಗಾಗಿಯೇ 9 ಮಿಲಿಯನ್​ ಡಾಲರ್​ ಖರ್ಚು ಮಾಡುವ ಜಪಾನೀಸ್​ ಬಿಲಿಯನೇರ್​!

    ಟೋಕಿಯೊ: ಹೆಚ್ಚಿನ ಶ್ರಮವಹಿಸದೇ ಹಣ ಸಂಪಾದಿಸಬೇಕೆಂಬುದು ಹಲವರ ಆಸೆಯಾಗಿದ್ದು, ಅಂತಹವರಿಗೆ ಈ ಸ್ಟೋರಿ ಇಷ್ಟವಾಗದೇ ಇರದು. ಏಕೆಂದರೆ ಜಪಾನ್​ನ ಬಿಲಿಯನೇರ್ ಟ್ವಿಟರ್​ಗಾಗಿಯೇ ಬರೋಬ್ಬರಿ 9 ಮಿಲಿಯನ್​ ಡಾಲರ್​ ಖರ್ಚು ಮಾಡುತ್ತಿದ್ದಾರೆ. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 63 ಕೋಟಿ ರೂ. ಆಗಿದೆ. ಈ ಹಣದಲ್ಲಿ ನೀವೂ ಪಾಲುದಾರರಾಗಬೇಕೆ ಹಾಗದರೆ ನೀವು ಮಾಡಬೇಕಾಗಿರುವುದಿಷ್ಟೇ…

    ಜಪಾನಿಸ್​ ಬಿಲಿಯನೇರ್​ ಯುಸಾಕು ಮೀಜಾವಾ, ಜನರಲ್ಲಿನ ಸಂತೋಷಕ್ಕೆ ಇದು ಕಾರಣವಾಗಲಿದೆಯೇ ಎಂಬ ‘ಸಾಮಾಜಿಕ ಪ್ರಯೋಗ’ದ ಒಂದು ಭಾಗವಾಗಿ ತನ್ನ ಟ್ವಿಟರ್​ ಫಾಲೋವರ್ಸ್​ಗಳಿಗೆ 9 ಮಿಲಿಯನ್​ ಡಾಲರ್​ ನೀಡುವುದಾಗಿ ಘೋಷಿಸಿದ್ದಾರೆ.

    ಉಚಿತವಾಗಿ ಹಣವನ್ನು ಸಂಪಾದಿಸಲು ಜನರು ಮಾಡಬೇಕಾಗಿರುವುದಿಷ್ಟೇ ಹೊಸ ವರ್ಷದ ಸಂದರ್ಭದಲ್ಲಿ ಮೀಜಾವಾ ಮಾಡುವ ಟ್ವೀಟ್​​ಗಳನ್ನು ರೀಟ್ವೀಟ್​ ಮಾಡಬೇಕು. ಈ ಕಾರ್ಯವನ್ನು ಮೀಜಾವ ಪ್ರತಿ ವರ್ಷವೂ ಮಾಡುತ್ತಾರೆ. ಅದರಂತೆ ಈ ವರ್ಷವೂ ಮಾಡಿದ್ದು, ಜನವರಿ 7ರವರೆಗೆ ಗಡುವು ನೀಡಲಾಗಿತ್ತು. ಈ ಚಟುವಟಿಕೆಯಲ್ಲಿ ಸುಮಾರು 40 ಲಕ್ಷ ಮಂದಿ ಭಾಗಿಯಾಗಿದ್ದರು. ಅದರಲ್ಲಿ 1000 ಅದೃಷ್ಟಶಾಲಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಿದ್ದು, ಪ್ರತಿಯೊಬ್ಬರಿಗೂ ತಲಾ 9000 (6,38,919 ರೂ.) ಡಾಲರ್ ನೀಡಲಾಗುವುದು.​

    2019ರ ಜನವರಿಯಲ್ಲೂ ಮಿಜಾವಾ ಇದೇ ಚಟುವಟಿಕೆ ಮಾಡಿದ್ದರು. 100 ಟ್ವಿಟರ್​ ಬಳಕೆದಾರರಿಗೆ 9,14,000 ಡಾಲರ್​ ನೀಡಿದ್ದರು. ಮೀಜಾವಾ ಅವರ ಟ್ವೀಟ್​ 4.68 ಮಿಲಿಯನ್ಸ್​ ಬಾರಿ ರೀಟ್ವೀಟ್​ ಆಗಿ, ದಾಖಲೆ ಬರೆದಿತ್ತು.

    ಇದನ್ನು ಹೊರತು ಪಡಿಸಿದರೆ ಮೀಜಾವಾ ಅವರು ಚಂದ್ರನಲ್ಲಿಗೆ ಪ್ರವಾಸ ಹೋಗಲು ಎಲಾನ್​ ಮಸ್ಕ್​ ಸ್ಪೇಎಕ್ಸ್​ನಲ್ಲಿ ಸೀಟ್​ ಒಂದನ್ನು ಕಾಯ್ದಿರಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts