More

    ಶಿವಮೊಗ್ಗಕ್ಕೆ ಭಯೋತ್ಪಾದನೆ ನಂಟು ಇದೇ ಮೊದಲೇನಲ್ಲ!

    ತೀರ್ಥಹಳ್ಳಿ: ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರ ಸಂಘಟನೆಯನ್ನು ಬಲಗೊಳಿಸಲು ರೂಪಿಸಲಾಗಿದ್ದ ತಂಡದಲ್ಲಿ ಇಲ್ಲಿನ ಯುವಕನೊಬ್ಬ ಇರುವುದು ಬಹಿರಂಗವಾಗುತ್ತಿದ್ದಂತೆ ಭಯೋತ್ಪಾದನೆ ಚಟುವಟಿಕೆ ಜತೆ ಶಿವಮೊಗ್ಗ ಹೊಂದಿರುವ ನಂಟಿನ ಕುರಿತು ಚರ್ಚೆಗಳು ಆರಂಭವಾಗಿವೆ.

    ತೀರ್ಥಹಳ್ಳಿ ಗ್ರಾಮಾಂತರದ ಮೀನುಮಾರುಕಟ್ಟೆ ಸಮೀಪದ ನಿವಾಸಿ ಅಬ್ದುಲ್ ಮತೀನ್ ಅಹ್ಮದ್ ತಾಹಾ (26) ಎಂಬಾತನೇ ಈಗ ಹೊಸದಾಗಿ ಬೆಳಕಿಗೆ ಬಂದಿರುವ ಶಂಕಿತ ಉಗ್ರ. ಈತನ ಸುಳಿವು ನೀಡಿದವರಿಗೆ ಎನ್‌ಐಎ ಈಗಾಗಲೇ 3 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದೆ.

    ಆದರೆ, ಶಿವಮೊಗ್ಗ ಜಿಲ್ಲೆಗೆ ಭಯೋತ್ಪಾದನೆಯ ನಂಟು ಇದೇ ಮೊದಲಲ್ಲ. ನೆರೆಯ ಕರಾವಳಿ, ಪಕ್ಕದ ಕೇರಳಕ್ಕೆ ರಹದಾರಿಯಾದ್ದರಿಂದ ಮಲೆನಾಡು ಭಯೋತ್ಪಾದಕರ ಸ್ಲೀಪಿಂಗ್ ಸೆಲ್‌ನಂತೆ ಬಳಕೆಯಾಗುತ್ತ ಬಂದಿದೆ. ಇದಕ್ಕೆ ನಿದರ್ಶನ ಕೆ.ಪಿ. ಶಬ್ಬೀರ್ ಹಾಗೂ ಯಾಸೀನ್ ಭಟ್ಕಳ್ ಪ್ರಕರಣಗಳು.

    ಇದನ್ನೂ ಓದಿ   ಉಗ್ರಗಾಮಿ ಸಂಘಟನೆಯಲ್ಲಿ ತೀರ್ಥಹಳ್ಳಿ ಯುವಕ: ಪಾಲಕರಿಗೆ ಬರಸಿಡಿಲು

    2012ರಲ್ಲಿ ಲಷ್ಕರ್-ಏ-ತಯ್ಬ ಸಂಘಟನೆಯ ದಕ್ಷಿಣ ಭಾರತದ ಕಮಾಂಡರ್ ಕೆ.ಪಿ.ಶಬ್ಬೀರ್ ಶಿವಮೊಗ್ಗ ಹೃದಯ ಭಾಗದಲ್ಲೇ ಕೆಲ ಕಾಲ ನೆಲೆಸಿದ್ದ. ಕೇರಳ ಪೊಲೀಸರು ಆತನನ್ನು ಬಂಧಿಸಿ ಕರೆದೊಯ್ಯುವವರೆಗೆ ಯಾರಿಗೂ ಆತನ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.

    ಕೊಯಮತ್ತೂರು ಸರಣಿ ಸ್ಫೋಟ, ಬೆಂಗಳೂರು ಸರಣಿ ಸ್ಫೋಟ, ಆಭರಣ ಅಂಗಡಿ ಮಾಲೀಕನ ಕೊಲೆ ಹೀಗೆ ಹತ್ತು ಹಲವು ಪ್ರಕರಣದ ಆರೋಪಿ, ಬಾಂಬ್ ತಯಾರಿಕೆಯಲ್ಲಿ ನಿಷ್ಣಾತನಾಗಿದ್ದ ಶಬ್ಬೀರ್‌ನ ಪೂರ್ವಾಶ್ರಮ ಬಯಲಾಗಿದ್ದು ಆತನ ಬಂಧನದ ನಂತರವೇ.

    ಯಾಸೀನ್ ಭಟ್ಕಳ್ ಕಾರಸ್ಥಾನ
    2013ರಲ್ಲಿ ಸೆರೆ ಸಿಕ್ಕ ಉಗ್ರ ಯಾಸೀನ್ ಭಟ್ಕಳ್‌ಗೆ ಮಲೆನಾಡಿನ ನಂಟಿತ್ತು. ಒಂದು ಕಾಲದಲ್ಲಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ತನ್ನ ಕಾರಸ್ಥಾನವನ್ನು ಮಾಡಿಕೊಂಡವನು ಯಾಸೀನ್.

    ಯಾಸೀನ್ ಕೆಲವೊಮ್ಮೆ ಮಲೆನಾಡನ್ನು ಅಡಗುತಾಣವನ್ನಾಗಿಸಿಕೊಂಡರೆ ಮತ್ತೊಮ್ಮೆ ಇಲ್ಲೇ ಕುಳಿತು ವಿಧ್ವಂಸಕ ಕೃತ್ಯಕ್ಕೆ ಮುನ್ನುಡಿ ಬರೆದಿದ್ದ. 2008ರಲ್ಲಿ ಬೆಂಗಳೂರು ಸರಣಿ ಸ್ಫೋಟ ನಡೆಸಿದ ಬಳಿಕ ಯಾಸೀನ್ ತಲೆಮರೆಸಿಕೊಳ್ಳಲು ಆಯ್ಕೆ ಮಾಡಿಕೊಂಡಿದ್ದು ಕೊಪ್ಪ ತಾಲೂಕಿನ ವಿಠಲಮಕ್ಕಿ ಹಾಗೂ ಎನ್.ಆರ್.ಪುರ ತಾಲೂಕಿನ ಹಕ್ಲುಮನೆ ಗ್ರಾಮವನ್ನು.

    ಇದನ್ನೂ ಓದಿ   ಸರ್ಕಾರಕ್ಕೆ ಹತ್ತೇ ದಿನಗಳಲ್ಲಿ 1200 ಕೋಟಿ ರೂ. ‘ಕೊಡುಗೆ’ ಕೊಟ್ಟ ಕುಡುಕರು!

    ಅಲ್ಲಿ ಬಾಡಿಗೆ ಮನೆ ಪಡೆದಿದ್ದ ಭಟ್ಕಳ್, ಬಾಂಬ್‌ಗಳನ್ನು ಸಿದ್ಧಪಡಿಸತೊಡಗಿದ್ದ. ಯಾವಾಗ ಪೊಲೀಸರು ತನ್ನ ಬೆನ್ನು ಬಿದ್ದಿದ್ದಾರೆಂಬುದು ಖಚಿತವಾಯಿತೋ ಆಗ ಆತ ತೆರಳಿದ್ದು ಶಿಕಾರಿಪುರಕ್ಕೆ. ಅಲ್ಲಿ ತೈರೋಜ್ ಎಂಬುವನ ಸ್ನೇಹ ಗಳಿಸಿದ.

    ಅವರ ಮನೆಯಲ್ಲೇ ಕೆಲ ಕಾಲ ಕಳೆದಿದ್ದ. ಗುಜರಾತ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಕಯಾಮುದ್ದೀನ್ ಕಪಾಡಿಯಾ, ಶಿಕಾರಿಪುರದಲ್ಲಿ ಯಾಸೀನ್ ಆಶ್ರಯ ಪಡೆದ ವಿಷಯ ಬಾಯಿಬಿಟ್ಟ ನಂತರ ಪೊಲೀಸರು ಎಚ್ಚೆತ್ತುಕೊಂಡರು. ಗುಜರಾತ್ ಪೊಲೀಸರು, ಕಾರವಾರ ಹಾಗೂ ಶಿವಮೊಗ್ಗ ಕೋಟೆ ಠಾಣೆ ಪೊಲೀಸರ ಸಹಾಯ ಪಡೆದು ಶಿಕಾರಿಪುರಕ್ಕೆ ತೆರಳಿ ತನಿಖೆ ನಡೆಸಿದರೆ ಯಾಸೀನ್ ಅದಾಗಲೇ ಪರಾರಿಯಾಗಿದ್ದ.

    ರೈತರು, ಕಾರ್ಮಿಕರಿಗೆ ಕೇಂದ್ರದಿಂದ ಎರಡನೇ ದಿನದ ಕೊಡುಗೆ: ಯಡಿಯೂರಪ್ಪ ಏನಂತಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts