More

    ಈ ಭಾರತೀಯ ಕಂಪನಿ ಒಂದು ದಿನದ ಇಂಟರ್ನ್‌ಶಿಪ್​​​​​​​​​​ಗೆ ನೀಡಲಿದೆ 3 ಲಕ್ಷ ರೂ.

    ಬೆಂಗಳೂರು: ಬ್ರಿಟಾನಿಯಾ ಅದ್ಭುತ ಇಂಟರ್ನ್‌ಶಿಪ್ ಆಫರ್ ನೀಡಿದೆ. ಈ ಇಂಟರ್ನ್‌ಶಿಪ್ ಒಂದು ದಿನಕ್ಕೆ ಮಾತ್ರ. ಇಂಟರ್ನ್‌ಶಿಪ್ ಮಾಡಲು ಒಂದು ದಿನಕ್ಕೆ 3 ಲಕ್ಷ ರೂ.ಕೊಡಲಿದೆ. ಬಿಸ್ಕತ್ತುಗಳು ಮತ್ತು ಇತರ ಆಹಾರ ಉತ್ಪನ್ನಗಳನ್ನು ತಯಾರಿಸುವ ಬ್ರಿಟಾನಿಯಾದಲ್ಲಿ ನಿಮ್ಮ ಇಂಟರ್ನ್‌ಶಿಪ್ ಸಮಯದಲ್ಲಿ ನೀವು ಕೇವಲ ಒಂದು ಸಣ್ಣ ಕೆಲಸವನ್ನು ಮಾಡಬೇಕಾಗುತ್ತದೆ. ಅದು ‘ಕ್ರೊಸೆಂಟ್’ ಪದವನ್ನು ತಪ್ಪಾಗಿ ಉಚ್ಚರಿಸುವ ಜನರಿಗೆ ಸರಿಯಾದ ಉಚ್ಚಾರಣೆಯನ್ನು ಕಲಿಸುವುದು.

    ಕಂಪನಿಯು ಮಾರ್ಚ್ 4 ರಿಂದ ‘ಕ್ರೊಸೆಂಟ್ ಉಚ್ಚಾರಣೆ ಪರಿಣಿತ’ (Croissant pronunciation expert)ಇಂಟರ್ನ್‌ಗಾಗಿ ಅರ್ಜಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಈ ಇಂಟರ್ನ್ ಮಾಡಬೇಕಾಗಿರುವವರು ಕ್ರೋಸೆಂಟ್ ಅನ್ನು ತಪ್ಪಾಗಿ ಉಚ್ಚರಿಸುವ ಜನರಿಗೆ ಈ ಪದವನ್ನು ಹೇಗೆ ಉಚ್ಚರಿಸಬೇಕು ಎಂದು ಹೇಳುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 10 ಅಂದರೆ ಭಾನುವಾರ. ಒಂದು ದಿನದ ಇಂಟರ್ನ್‌ಗೆ ನೀವು 3 ಲಕ್ಷ ರೂಪಾಯಿಗಳನ್ನು ಪಡೆಯಲು ಬಯಸಿದರೆ, ಅರ್ಜಿ ಸಲ್ಲಿಸಲು ಕೇವಲ ಒಂದು ದಿನ ಮಾತ್ರ ಉಳಿದಿದೆ.
    ‘ಕ್ರೊಸೆಂಟ್’ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಫ್ರೆಂಚ್ ಪೇಸ್ಟ್ರಿ. ಆದರೆ ಭಾರತದಲ್ಲಿ ಕೆಲವೇ ಜನರು ಈ ಪೇಸ್ಟ್ರಿಯನ್ನು ಸರಿಯಾಗಿ ಉಚ್ಚರಿಸಲು ಸಮರ್ಥರಾಗಿದ್ದಾರೆ. ಆದ್ದರಿಂದ, ಬ್ರಿಟಾನಿಯಾ ಈ ಇಂಟರ್ನ್‌ಶಿಪ್ ಆಫರ್ ನೀಡಿದ್ದು, ನೀವು ಇಂಟರ್ನ್‌ಶಿಪ್‌ಗೆ ಆಯ್ಕೆಯಾದರೆ ಕಂಪನಿಯು ನಿಮಗೆ ದಿನಕ್ಕೆ 3 ಲಕ್ಷ ರೂ. ನೀಡಲಿದೆ.

    ಅರ್ಜಿ ಸಲ್ಲಿಸುವ ವಿಧಾನ 
    18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯರು ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ಕಂಪನಿಯ ಅಧಿಕೃತ WhatsApp ಖಾತೆಗಳಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಮತ್ತು ಇನ್ಸ್ಟಾಗ್ರಾಂನಲ್ಲಿ ಎರಡು ಹಂತಗಳನ್ನು ಪೂರ್ಣಗೊಳಿಸಲು ಅಭ್ಯರ್ಥಿಗಳನ್ನು ಕೇಳಲಾಗುತ್ತದೆ. ಅದಕ್ಕಾಗಿ ನೀವು ಬ್ರಿಟಾನಿಯಾ ಕ್ರೊಸೆಂಟ್‌ನ ಇನ್‌ಸ್ಟಾಗ್ರಾಮ್ ಅನ್ನು ಸಹ ಫಾಲೋ ಮಾಡಬೇಕಾಗುತ್ತದೆ. ಜತೆಗೆ ಇಂಟರ್ನ್‌ಶಿಪ್‌ಗೆ ಏಕೆ ಆಯ್ಕೆ ಮಾಡಿಕೊಳ್ಳಬೇಕು ಎಂದು ನೇಮಕಾತಿ ಪೋಸ್ಟ್‌ನ ಕಾಮೆಂಟ್‌ನಲ್ಲಿ ಬರೆಯಬೇಕಾಗುತ್ತದೆ.

    ಕಾಂಗ್ರೆಸ್​​​​ಗೆ ಶಾಕ್ ಮೇಲೆ ಶಾಕ್! ಗಾಂಧಿ ಕುಟುಂಬದ ಆಪ್ತ ಸುರೇಶ್ ಪಚೌರಿ ಬಿಜೆಪಿ ಸೇರ್ಪಡೆ

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts