More

    ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳಲಿದ್ದಾರೆ ಈ ಐಎಎಸ್​ ಅಧಿಕಾರಿ!

    ನಾಯ್ಡಾ : ಉತ್ತರ ಪ್ರದೇಶದ ನಾಯ್ಡಾದ ಜಿಲ್ಲಾ ಮ್ಯಾಜಿಸ್ಟ್ರೇಟ್​(ಡಿಎಂ) ಸುಹಾಸ್​ ಎಲ್​.ವೈ. ಅವರು ಅಂತರರಾಷ್ಟ್ರೀಯ ಮಟ್ಟದ ಪ್ಯಾರಾ-ಬ್ಯಾಂಡ್ಮಿಂಟನ್ ಆಟಗಾರರೂ ಆಗಿದ್ದಾರೆ. ತಮ್ಮ ಆಟದ ಕೌಶಲ್ಯದಿಂದಾಗಿ ಮುಂದಿನ ತಿಂಗಳು ಜಪಾನಿನ ಟೋಕಿಯೋದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್​ಗೆ ಆಯ್ಕೆಯಾಗಿದ್ದಾರೆ.

    ಐಎಎಸ್​ ಅಧಿಕಾರಿಯೊಬ್ಬರು ಪ್ಯಾರಾಲಿಂಪಿಕ್ಸ್​ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವುದು ಇದು ಮೊದಲನೇ ಬಾರಿ. 2007 ರ ಬ್ಯಾಚ್​ನ ಐಎಎಸ್​ ಅಧಿಕಾರಿಯಾದ ಸುಹಾಸ್​ ಪ್ರಯಾಗ್​ರಾಜ್​ ಸೇರಿದಂತೆ ಯುಪಿಯ ಹಲವು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಒಂದು ವರ್ಷದಿಂದ ನಾಯ್ಡಾದ ಡಿಎಂ ಆಗಿ ಜಿಲ್ಲೆಯ ಕೋವಿಡ್​ ವಿರುದ್ಧದ ಸಮರದ ನೇತೃತ್ವ ವಹಿಸಿದ್ದಾರೆ.

    ಇದನ್ನೂ ಓದಿ: ಒಲಂಪಿಕ್ಸ್​ಗೆ ಹೊರಟಿತು ಆಟಗಾರರ ತಂಡ; ಇಂದು ದೆಹಲಿಯಲ್ಲಿ ಬೀಳ್ಕೊಡುಗೆ

    2019-20 ರಲ್ಲಿ ಅವರು ಭಾಗವಹಿಸಿದ ಪಂದ್ಯಾವಳಿಗಳಲ್ಲಿ ಮೂರು ಚಿನ್ನ, 2 ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರು. ಮೆನ್ಸ್​ ಸಿಂಗಲ್ಸ್​ನಲ್ಲಿ ಮೂರನೇ ರಾಂಕ್​ ಗಳಿಸಿದ ಅವರ ಸಾಧನೆಯ ಆಧಾರದ ಮೇಲೆ ಅವರನ್ನು ಪ್ಯಾರಾಲಿಂಪಿಕ್ಸ್​ಗೆ ಆಯ್ಕೆ ಮಾಡಲಾಗಿದೆ. ಬ್ಯಾಡ್ಮಿಂಟನ್ ವರ್ಲ್ಡ್​ ಫೆಡರೇಶನ್​ನ ಆಹ್ವಾನದ ಮೇರೆಗೆ, ಟೋಕಿಯೋದಲ್ಲಿ ಒಲಂಪಿಕ್ಸ್ ಕ್ರೀಡಾಕೂಟದ ನಂತರ ನಡೆಯಲಿರುವ, ವಿಶೇಷ ಚೇತನರ ಕ್ರೀಡಾಕೂಟವಾದ ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

    “ದೇಶವನ್ನು ಪ್ರತಿನಿಧಿಸುವುದು ಗೌರವದ ವಿಷಯ ಮತ್ತು ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗವಹಿಸುತ್ತಿರುವುದು ನನ್ನ ಕನಸು ನನಸಾದ ಹಾಗಿದೆ” ಎಂದು ಹೇಳಿರುವ ಸುಹಾಸ್​, ತಮ್ಮ ಕರ್ತವ್ಯದ ಜೊತೆಯಲ್ಲೇ ಕ್ರೀಡಾಕೂಟದಲ್ಲಿ ಭಾಗವಹಿಸಲು ನಿತ್ಯ ಅಭ್ಯಾಸದಲ್ಲಿ ತೊಡಗಿದ್ದಾರಂತೆ. ಒಂದು ವಾರದಷ್ಟು ಕಾಲ ಮಾತ್ರ ಪ್ಯಾರಾಲಿಂಪಿಕ್ಸ್​​ಗಾಗಿ ತೆರಳಲಿದ್ದು, ಅದು ತಮ್ಮ ಆಡಳಿತಾತ್ಮಕ ಕರ್ತವ್ಯಗಳಿಗೆ ಹೆಚ್ಚು ಅಡ್ಡಿ ಉಂಟುಮಾಡುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್)

    ಭಾರತೀಯ ನೌಕಾ ದಳಕ್ಕೆ ಮಲ್ಟಿ-ರೋಲ್ ಹೆಲಿಕಾಪ್ಟರ್​ಗಳ ಸೇರ್ಪಡೆ

    ಜೀರ್ಣಶಕ್ತಿ ಹೆಚ್ಚಿಸಿ ಉಸಿರಾಟ ಸುಗಮವಾಗಿಸುತ್ತೆ, ವಜ್ರಾಸನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts