More

    ಕ್ರಿಕೆಟ್​ ಜಗತ್ತಿನಲ್ಲಿ ದೈತ್ಯ ದಾಂಡಿಗ ಕ್ರಿಸ್​ ಗೇಲ್​ ಇತಿಹಾಸ ಸೃಷ್ಟಿಸಿದ ದಿನವಿದು: ಆರ್​ಸಿಬಿ ತಂಡದ ಹೆಮ್ಮೆಯ ದಿನವೂ ಹೌದು

    ನವದೆಹಲಿ: ಮಹಾಮಾರಿ ಕರೊನಾ ವಕ್ಕರಿಸದೇ ಇದ್ದಿದ್ದರೆ ಈ ಸಮಯದಲ್ಲಿ ರಾಷ್ಟ್ರದಲ್ಲಿ ಕ್ರೀಡಾಭಿಮಾನಿಗಳ ಐಪಿಎಲ್​ ಸಂಭ್ರಮ ಮೊಳಗಿರುತ್ತಿತ್ತು. ಆದರೆ, ಕರೊನಾದಿಂದ ಈ ಬಾರಿಯ ಐಪಿಎಲ್​ ನಡೆಯುವುದೇ ಅನುಮಾನವಾಗಿದೆ. ಇದರ ನಡುವೆ ಹಿಂದಿನ ಘಟನೆಗಳನ್ನು ಮೆಲಕು ಹಾಕಿದಾಗ ಐಪಿಎಲ್​ ಇತಿಹಾಸದಲ್ಲಿ ಈ ದಿನ ತುಂಬಾ ವಿಶೇವಾಗಿದೆ. ಅದರಲ್ಲೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಅಭಿಮಾನಿಗಳು ಹೆಮ್ಮೆ ಪಡುವ ದಿನವಿದು.

    ವಿಶ್ವಾದ್ಯಾಂತ ಅಸಂಖ್ಯಾತ ಕ್ರೀಡಾಭಿಮಾನಿಗಳನ್ನು ಹೊಂದಿರುವ ವೆಸ್ಟ್​ಇಂಡೀಸ್​ ದೈತ್ಯ ದಾಂಡಿಗ ಕ್ರಿಸ್​ ಗೇಲ್​ ಆರ್​ಸಿಬಿ ತಂಡದಲ್ಲಿದ್ದಾಗ 2013ರ ಏಪ್ರಿಲ್​ 23ರಂದು ಭರ್ಜರಿ ದಾಖಲೆಯೊಂದನ್ನು ಬರೆದಿದ್ದರು. ಅದೇನೆಂದರೆ ಪುಣೆ ವಾರಿಯರ್ಸ್​ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೇವಲ 30 ಎಸೆತದಲ್ಲಿ ಶತಕ ಸಿಡಿಸಿದ್ದಲ್ಲದೇ 66 ಎಸೆತದಲ್ಲಿ ಅಜೇಯ 175 ರನ್​ ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾವ್ರವಹಿಸಿದ್ದರು. ಇಂದಿಗೂ ಇದು ಐಪಿಎಲ್​ ಇತಿಹಾಸದಲ್ಲಿ ವೈಯಕ್ತಿಕ ಗರಿಷ್ಠ ರನ್​ ಆಗಿಯೇ ಉಳಿದಿದೆ. ಅಲ್ಲದೇ ಕ್ರಿಕೆಟ್​ ಜಗತ್ತಿನ ವೇಗದ ಶತಕವೂ ಆಗಿದೆ.

    ಈ ಪಂದ್ಯದಲ್ಲಿ ಗೇಲ್​ 7 ಡಾಟ್​ ಬಾಲ್​, 4 ಸಿಂಗಲ್​, 8 ಬೌಂಡರಿ ಹಾಗೂ 11 ಸಿಕ್ಸರ್​ ನೆರವಿನೊಂದಿಗೆ 30 ಎಸೆತಗಳಲ್ಲಿ ವೇಗವಾಗಿ ಶತಕ ದಾಖಲಿಸಿದರು. ಒಟ್ಟು 66 ಎಸೆತದಲ್ಲಿ 17 ಸಿಕ್ಸರ್​ ಹಾಗೂ 13 ಬೌಂಡರಿ ನೆರವಿನೊಂದಿಗೆ 175 ರನ್​ ಕಲೆಹಾಕಿದ್ದರು. ಈ ಮೂಲಕ ಆರ್​ಸಿಬಿ 20 ಓವರ್​ನಲ್ಲಿ 5 ವಿಕೆಟ್​ ನಷ್ಟಕ್ಕೆ ದಾಖಲೆಯ 263 ರನ್​ ಕಲೆಹಾಕಿತ್ತು. ಆದರೆ, ಗುರಿ ಬೆನ್ನತ್ತಿದ್ದ ಪುಣೆ 9 ವಿಕೆಟ್​ ನಷ್ಟಕ್ಕೆ 133 ರನ್​ ಗಳಿಸಲಷ್ಟೇ ಶಕ್ತವಾದರು.

    ಐಪಿಎಲ್​ನಲ್ಲಿ ವೇಗವಾಗಿ ಶತಕ ಬಾರಿಸಿದ ಗೇಲ್​, ಆಸ್ಟ್ರೇಲಿಯಾದ ಆ್ಯಂಡ್ರಿವ್​ ಸೈಮಂಡ್ಸ್​ 2004ರಲ್ಲಿ 34 ಎಸೆತದಲ್ಲಿ ಸಾಧಿಸಿದ್ದ ಶತಕ ದಾಖಲೆ ಹಾಗೂ ಪಾಕ್​ ತಂಡದ ಮಾಜಿ ಆಟಗಾರ ಶಾಹೀದ್​ ಅಫ್ರಿದಿ 1996ರಲ್ಲಿ ಶ್ರೀಲಂಕಾ ವಿರುದ್ಧ 37 ಎಸೆತದಲ್ಲಿ ಸಿಡಿಸಿದ್ದ ಶತಕ ದಾಖಲೆಯನ್ನು ಮುರಿದರು. ಅಲ್ಲದೇ, ಐಪಿಎಲ್​ನಲ್ಲಿ ಯೂಸೂಫ್​ ಪಠಾಣ್​ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಗೇಲ್​ ಬರೆದುಕೊಂಡರು. 2010ರ ಆವೃತ್ತಿಯಲ್ಲಿ ಕೋಲ್ಕತ ಪರ ಆಡಿದ್ದ ಪಠಾಣ್​ ಮುಂಬೈ ಇಂಡಿಯನ್ಸ್​ ವಿರುದ್ಧ 37 ಎಸೆತದಲ್ಲಿ ಸೆಂಚುರಿ ಬಾರಿಸಿದ್ದರು. (ಏಜೆನ್ಸೀಸ್​)

    ಇಡೀ ರಾತ್ರಿ ಕಣ್ಣೀರಿಟ್ಟಂತಹ ಅಸಹಾಯಕ ಕ್ಷಣವನ್ನು ಬಹಿರಂಗಪಡಿಸಿದ ಟೀಮ್​ ಇಂಡಿಯಾ ನಾಯಕ ಕೊಹ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts