More

    ಈ ದೇಶದಲ್ಲಿ ಇನ್ಮುಂದೆ ಮಕ್ಕಳ ಫೋಟೋಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಬಾರದಂತೆ!

    ಫ್ರಾನ್ಸ್: ಖಾಸಗಿತನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಕ್ಕಳ ಫೋಟೋಗಳನ್ನು ಹೆತ್ತವರು ಹಂಚಿಕೊಳ್ಳಬಾರದು ಎಂದು ಹೊಸ ಕಾನೂನನ್ನು ಫ್ರಾನ್ಸ್​ ದೇಶ ಜಾರಿಗೊಳಿಸಿದೆ. ಒಂದು ವೇಳೆ ನಿಯಮ ಮುರಿದರೆ ಹೆತ್ತವರ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಸೂಚನೆ ನೀಡಿದೆ. ಇದನ್ನೂ ಓದಿ: ನಡು ರಸ್ತೆಯಲ್ಲಿ ಯುವಕನನ್ನು ಹತ್ಯೆಗೈದ ಹಂತಕರು; ಪ್ರೀತಿಸಿ ವಿವಾಹವಾಗಿದ್ದೇ ಜೀವ ತೆಗೆಯಲು ಕಾರಣವಾ?

    ಫ್ರೆಂಚ್ ನ್ಯಾಶನಲ್ ಅಸೆಂಬ್ಲಿಯು ಸರ್ವಾನುಮತದಿಂದ ಅನುಮೋದಿಸಿದ ಕಾನೂನಿನ ಅಡಿಯಲ್ಲಿ, ದೇಶದಲ್ಲಿ ಹೆತ್ತವರು ಅನುಮತಿಯಿಲ್ಲದೆ ತಮ್ಮ ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಫ್ರಾನ್ಸ್‌ನ ರಾಷ್ಟ್ರೀಯ ಅಸೆಂಬ್ಲಿ ಈಗಾಗಲೇ ಅಂಗೀಕರಿಸಿದ ಮಸೂದೆಯನ್ನು ನಿಷೇಧಿಸುವ ಅಧಿಕಾರವನ್ನು ನ್ಯಾಯಾಲಯಗಳಿಗೆ ನೀಡಿದೆ ಎಂದು ವರದಿಯಾಗಿದೆ.

    ಮಕ್ಕಳ ಫೋಟೋಗಳಿಗೆ ಪಾಲಕರು ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಮಗುವಿನ ವಯಸ್ಸು ಮತ್ತು ಪ್ರಬುದ್ಧತೆಯ ಮಟ್ಟವನ್ನುಆಧರಿಸಿ ಫೋಟೋಗಳನ್ನು ಹಂಚಿಕೊಳ್ಳಬಹುದಾಗಿದೆ. ಈ ಕಾನೂನಿನಿಂದ ಮಕ್ಕಳ ಫೋಟೋಗಳನ್ನು ಅಶ್ಲೀಲತೆಗೆ ದುರುಪಯೋಗಪಡಿಸಿಕೊಳ್ಳುವುದನ್ನು ನಿಯಂತ್ರಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. (ಏಜೆನ್ಸೀಸ್) ಇದನ್ನೂ ಓದಿ: ಹಿಂದುತ್ವದ ಬಗ್ಗೆ ಅವಹೇಳನ; ನಟ ಚೇತನ್ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts