More

    ಒಮ್ಮೆ ಕಚ್ಚಿದರೆ 100 ಮಂದಿ ಸಾವು! ಇದು ಜಗತ್ತಿನ ಅತಿ ಡೇಂಜರಸ್​ ಹಾವು, ಇದರ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

    ಸಿಡ್ನಿ: ವಿಷಕಾರಿ ಹಾವುಗಳ ಬಗ್ಗೆ ಮಾತನಾಡುವಾಗ ನಮ್ಮ ತಲೆಗೆ ಮೊದಲಿಗೆ ಬರುವುದು ನಾಗರಹಾವು, ಕಾಳಿಂಗ ಸರ್ಪ ಹಾಗೂ ಕೊಳಕ ಮಂಡಲ ಮಾತ್ರ. ಆದರೆ, ಇವುಗಳಿಗಿಂತಲೂ ಅತ್ಯಂತ ಅಪಾಯಕಾರಿ ಹಾವಿನ ಬಗ್ಗೆ ನೀವು ಎಂದಾದರು ಕೇಳಿದ್ದೀರಾ? ಜಗತ್ತಿನಲ್ಲಿ ಎಷ್ಟೊಂದು ಡೇಂಜರಸ್ ಹಾವಿದೆ​ ಗೊತ್ತಾ? ಒಂದೇ ಕಡಿತದಲ್ಲಿ 100 ಮಂದಿಯನ್ನು ಕೊಲ್ಲುವ ಶಕ್ತಿ ಇದೆ ಎಂದರೆ ನೀವು ನಂಬುತ್ತೀರಾ? ಈ ಸ್ಟೋರಿ ಓದಿದ ಮೇಲೆ ನೀವು ನಂಬಲೇಬೇಕು.

    ‘ಇನ್​ಲ್ಯಾಂಡ್​ ತೈಪಾನ್​’ ಇದನ್ನು ಜಗತ್ತಿನ ಅತ್ಯಂತ ವಿಷಕಾರಿ ಹಾಗೂ ಅಪಾಯಕಾರಿ ಹಾವು ಎಂದು ಗುರುತಿಸಲಾಗಿದೆ. ಇದು ಕೇವಲ ಆಸ್ಟ್ರೇಲಿಯಾದಲ್ಲಿ ಮಾತ್ರ ಕಂಡು ಬರುತ್ತದೆ. ಈ ಹಾವು ಇಷ್ಟೊಂದು ಡೇಂಜರಸ್​ ಏಕೆಂದರೆ, ಒಂದು ಬಾರಿ ಕಚ್ಚಿದರೆ, 110 ಮಿಲಿಗ್ರಾಂ ವಿಷ ಹೊರ ಬರುತ್ತದೆ. ಬ್ರಿಸ್ಟೋಲ್​ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಇನ್​ಲ್ಯಾಂಡ್​ ತೈಪಾನ್​ ಒಮ್ಮೆ ಕಡಿದರೆ, ಬರೋಬ್ಬರಿ 100 ಮಂದಿ ಅಥವಾ 2.5 ಮಿಲಿಯನ್​ ಇಲಿಗಳು ಸಾಯುವಷ್ಟು ಶಕ್ತಿ ಅದರ ವಿಷದಲ್ಲಿದೆ.

    ಸಂಶೋಧಕರ ಪ್ರಕಾರ ಈ ಹಾವು ಜಗತ್ತಿನ ಎಲ್ಲ ಕಡೆಗಳಲ್ಲಿಯೂ ಕಂಡು ಬರುವುದಿಲ್ಲ. ಕೇವಲ ಆಸ್ಟ್ರೇಲಿಯಾ ನೆಲದಲ್ಲಿ ಮಾತ್ರ ಇವು ವಾಸಿಸುತ್ತವೆ. ದಟ್ಟ ಕಾಡಿನ ನಡುವೆ ಇವು ಸಂಚರಿಸುತ್ತಿರುತ್ತವೆ. ಆದರೆ, ಇವು ಹಗಲು ವೇಳೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಇದು ಸುಮಾರು 1.8 ಮೀಟರ್​ ಉದ್ದ ಬೆಳೆಯುತ್ತದೆ. ಹಾವಿನ ವಿಷದ ಕೊಂಡಿಗಳು 3.5 ರಿಂದ 6.2 ಮಿಲಿ ಮೀಟರ್​ ಉದ್ದ ಇರಲಿವೆ.

    ಕಾಲಕ್ಕೆ ತಕ್ಕಂತೆ ಅಥವಾ ಆಯಾ ಋತುಗಳಲ್ಲಿ ಇನ್​ಲ್ಯಾಂಡ್​ ತೈಪಾನ್​ ಹಾವು ತನ್ನ ಚರ್ಮದ ಬಣ್ಣವನ್ನು ಬದಲಾಯಿಸುತ್ತದೆ. ಚಳಿಗಾದಲ್ಲಿ ಕಡು ಕಂದು ಬಣ್ಣದಲ್ಲಿದ್ದರೆ, ಬೇಸಿಗೆಯಲ್ಲಿ ತಿಳಿ ಕಂದು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಹಾವಿನ ಪ್ರಮುಖ ಆಹಾರ ಯಾವುವೆಂದರೆ, ಕಪ್ಪೆಗಳು ಮತ್ತು ಕೋಳಿಗಳು.

    ಬೆಳಗಿನ ಜಾವದಲ್ಲಿ ಈ ಹಾವು ತುಂಬಾ ಚಟುವಟಿಕೆಯಿಂದ ಕೂಡಿರುತ್ತದೆಯಂತೆ. ಈ ಹಾವು ಆಳವಾದ ಮಣ್ಣಿನ ಬಿರುಕುಗಳು ಮತ್ತು ಪ್ರಾಣಿಗಳ ಬಿಲಗಳಲ್ಲಿ ಇರುತ್ತದೆ. ಜಗತ್ತಿನಲ್ಲಿ 600 ವಿಷಕಾರಿ ಹಾವುಗಳ ಜಾತಿಗಳಿದ್ದರೆ, ಅವುಗಳಲ್ಲಿ ಕೇವಲ 200 ಹಾವುಗಳು ಮಾತ್ರ ಮನುಷ್ಯರನ್ನು ಕೊಲ್ಲುತ್ತವೆ ಅಥವಾ ಗಂಭೀರವಾಗಿ ಗಾಯಗೊಳಿಸುತ್ತವೆ. (ಏಜೆನ್ಸೀಸ್​)

    ಅಂಬಿಕಾ ಟು ಪ್ರಿಯಾ ಭವಾನಿ ಶಂಕರ್​… ಏನಿದು ಫಾರ್ಮ್​ಹೌಸ್​ ರಹಸ್ಯ? ಸಂಚಲನ ಸೃಷ್ಟಿಸಿದ ನಟನ ಹೇಳಿಕೆ

    ಬೇರೆಯವರ ಜತೆ ಮಲಗಿ ಸಂಪಾದಿಸುವ ಪತ್ನಿ, ಅದೇ ದುಡ್ಡಿಂದ ಬದುಕು ನಡೆಸುವ ಗಂಡ! ಭಾರತದಲ್ಲಿದೆ ಈ ವಿಚಿತ್ರ ಆಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts