More

    ರಸ್ತೆ ಮೇಲೆ ಮೊಬೈಲ್ ನೋಡುತ್ತಾ ನಡೆಯುವವರಿಗೆ ಇನ್ನಿಲ್ಲ ಟೆನ್ಶನ್! ನಿಮಗೂ ಬರಲಿದೆ ಮೂರನೇ ಕಣ್ಣು!

    ಲಂಡನ್: ಈಗಿನ ಯುವಕರಿಗಂತೂ ಮೊಬೈಲ್ ಹುಚ್ಚು ಹೆಚ್ಚೇ ಇದೆ ಎನ್ನಬಹುದು. ರಸ್ತೆ ಮೇಲೆ ನಡೆದುಕೊಂಡು ಹೋಗುವಾಗಲೇ ತಲೆ ಬಗ್ಗಿಸಿಕೊಂಡು ಮೊಬೈಲ್ ನೋಡುತ್ತಲೇ ಹೋಗುತ್ತಾರೆ. ಈ ರೀತಿ ಮಾಡುವುದರಿಂದ ಎಷ್ಟೋ ಬಾರಿ ಎದುರಿಗಿದ್ದ ಲೈಟ್ ಕಂಬಕ್ಕೋ ಅಥವಾ ಇನ್ನೇನಕ್ಕೋ ತಲೆ ಹೊಡೆಸಿಕೊಂಡಿರುವುದೂ ಇದೆ. ಇನ್ನು ಮುಂದೆ ಆ ಟೆನ್ಶನ್ ನಿಮಗಿರುವುದಿಲ್ಲ. ಏಕೆಂದರೆ ಶಿವನಿಗೆ ಮೂರನೇ ಕಣ್ಣಿರುವಂತೆ ಮನುಷ್ಯನಿಗೂ ಮೂರನೇ ಕಣ್ಣು ಕೊಟ್ಟು, ಅಪಾಯದಿಂದ ಪಾರು ಮಾಡಲು ಸಿದ್ಧವಾಗಿದೆ ಆ ಒಂದು ತಂಡ.

    ಹೌದು! ಶಿವನ ಮೂರನೇ ಕಣ್ಣಿನಂತೆ ನಿಮಗೂ ಮೂರನೇ ಕಣ್ಣು ಬರಲಿದೆ. ನಿಮ್ಮೆರೆಡು ಕಣ್ಣು ಮೊಬೈಲ್ ನೋಡುತ್ತಿದ್ದರೆ ಇನ್ನೊಂದು ಕಣ್ಣು ರಸ್ತೆ ನೋಡುತ್ತಿರುತ್ತದೆ. ಎಲ್ಲಾದರೂ ಏನಕ್ಕಾದರೂ ನೀವು ಹೊಡೆಸಿಕೊಳ್ಳುತ್ತೀರಿ ಎಂದೆನಿಸಿದರೆ ತಕ್ಷಣ ಸದ್ದು ಮಾಡಿ ನಿಮ್ಮನ್ನು ಎಚ್ಚರಿಸಿಬಿಡುತ್ತದೆ ಆ ಕಣ್ಣು.

    ಇಂತದ್ದೊಂದು ಮೂರನೇ ಕಣ್ಣನ್ನು ದಕ್ಷಿಣ ಕೋರಿಯಾದ 28 ವರ್ಷದ ಡಿಸೈನರ್ ಪೆಂಗ್ ಮಿನ್-ವೂಕ್ ರಚಿಸಿದ್ದಾನೆ. ಅದಕ್ಕೆ ಥರ್ಡ್​ ಐ ಎನ್ನುವ ಹೆಸರನ್ನು ಇಡಲಾಗಿದೆ. ತಲೆಯನ್ನು ಬಗ್ಗಿಸಿದಾಕ್ಷಣ ಆ್ಯಕ್ಟಿವ್ ಆಗುವಂತಹ ಸೆನ್ಸಾರ್​ ಒಂದನ್ನು ಅದರಲ್ಲಿ ಅಳವಡಿಸಲಾಗಿದೆ. ನೀವು ಮೊಬೈಲ್ ನೋಡುತ್ತಾ ನಡೆಯುತ್ತಿರುವಾಗ ಯಾವುದೇ ವಸ್ತು ಇನ್ನೊಂದು ಮೀಟರ್​ನಲ್ಲಿ ನಿಮಗೆ ಅಡ್ಡವಾಗಲಿದೆ ಎಂದಾಕ್ಷಣ ಆ ಸೆನ್ಸಾರ್​ ಸದ್ದು ಮಾಡಿ ನಿಮಗೆ ಎಚ್ಚರಿಕೆ ನೀಡುತ್ತದೆ. ಫೋನ್​ನ್ನು ಅತಿ ಹೆಚ್ಚು ಬಳಸುವವರಿಗೆ ಮಿನ್-ವೂಕ್ ಫೋನೋ ಸೇಪಿಯೆನ್ಸ್ ಎಂದು ಕರೆದಿದ್ದು, ಅವರಿಗಾಗಿಯೇ ಈ ವಿಶೇಷ ಕಣ್ಣನ್ನು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

    ರೈಲ್ವೆ ನಿಲ್ದಾಣದ ಮೇಲೇ ಫೈವ್​ ಸ್ಟಾರ್ ಹೋಟೆಲ್! ವಿನೂತನ ನಿರ್ಮಾಣಕ್ಕೆ ದೇಶದ ಮೆಚ್ಚುಗೆ

    ನನಗೆ ನಾಯಿ ಕಚ್ಚಿದ್ರೆ ಸ್ಕ್ರಾಲಿಂಗ್ ಸುದ್ದಿ, ಅದೇ ನಾಯಿಗೆ ದರ್ಶನ್ ಕಚ್ಚಿದ್ರೆ ಬ್ರೇಕಿಂಗ್ ನ್ಯೂಸ್​: ಇಂದ್ರಜಿತ್​ಗೆ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts