More

    ಆಲೋಚನೆ ಸಕಾರಾತ್ಮಕವಾಗಿರಲಿ

    ಅಥಣಿ: ಒಳ್ಳೆಯ ಆಲೋಚನೆಗೆ ಸಾವಿಲ್ಲ. ಸಕಾರಾತ್ಮಕ ಆಲೋಚನೆಗಳು ಬದುಕಿನ ಉಸಿರಾಗಬೇಕು. ಸಕಾರಾತ್ಮಕ ಧೋರಣೆ ತಾಳುವ ವ್ಯಕ್ತಿಗಳು ಸಮಾಜದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯಲು ಸಾಧ್ಯವೆಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿದರು.

    ಬುಧವಾರ ಸಂಜೆ ಪಟ್ಟಣದ ಶೆಟ್ಟರಮಠದಲ್ಲಿ ಹಮ್ಮಿಕೊಂಡಿದ್ದ ಲಿಂ.ಮರುಳಸಿದ್ದ ಶಿವಯೋಗಿಗಳ 128ನೇ ಪುಣ್ಯಸ್ಮರಣೋತ್ಸವ ಕಾರ್ಯ ಕ್ರಮದಲ್ಲಿ ಮಾತನಾಡಿ, ಕರೊನಾ ಮಹಾಮಾರಿ ಹೋಗಲಾಡಿಸಲು ಜನರು ಭಯಪಡುವ ಅಗತ್ಯವಿಲ್ಲ. ಧೈರ್ಯದಿಂದ ಸರ್ಕಾರದ ನಿಯಮ ಪಾಲಿಸಿದರೆ ಸೋಂಕಿನಿಂದ ಪಾರಾಗಬಹುದು ಎಂದರು.

    ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಭಕ್ತರು ಪ್ರೀತಿ, ಸಹಕಾರ, ವಿಶ್ವಾಸದಿಂದ ಬದುಕನ್ನು ನಡೆಸಬೇಕು ಎಂದು ಸಲಹೆ ನೀಡಿದರು. ವೈದ್ಯ ಡಾ.ಮಲ್ಲಿಕಾರ್ಜುನ ಹಂಜಿ ಮಾತನಾಡಿ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿಯವರ ವಚನಗಳಲ್ಲಿರುವ ಮೌಲ್ಯವನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಮಗೆಲ್ಲ ಬೆಳಕಾಗಿರುವ ಲಿಂ.ಮರುಳಸಿದ್ದ ಶಿವಯೋಗಿಗಳು ಸಿದ್ದಿಪುರುಷರಾಗಿ ಹಲವಾರು ಮಠಾಧೀಶರಿಗೆ ದಾರಿದೀಪವಾಗಿದ್ದಾರೆ ಎಂದರು. ಸಿಪಿಐ ಶಂಕರಗೌಡ ಬಸನಗೌಡರ ಮಾತನಾಡಿದರು ಕರೊನಾ ಸೇನಾನಿಗಳಾದ ಡಿವೈಎಸ್‌ಪಿ ಎಸ್.ವಿ.ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ರಾಜು ಬುರ್ಲಿ, ಎಂ.ಎಸ್‌ಕವಲಾಪುರ, ಕುಮಾರ ಹಾಡಕಾರ, ಡಾ.ಎಂ.ಜಿ. ಹಂಜಿ, ಡಾ.ಪ್ರಕಾಶ ಸಾವಡಕರ, ರಾಮನಗೌಡ ಪಾಟೀಲ, ದೀಪಕ ಬುರ್ಲಿ ಅವರನ್ನು ಸನ್ಮಾನಿಸಲಾಯಿತು. ಬಾಬುರಾವ ಮಹಾರಾಜರು, ಪ್ರಕಾಶ ಮಹಾಜನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts