More

    ಜಮ್ಮುವಿನಲ್ಲಿ ತಿಮ್ಮಪ್ಪನ ದೇವಾಲಯ ! 25 ಹೆಕ್ಟೇರ್ ಭೂಮಿ ಮಂಜೂರು

    ಜಮ್ಮು : ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡುವಂತೆ ಇನ್ನು ಮುಂದೆ ಹಿಮಾವೃತ ಜಮ್ಮು-ಕಾಶ್ಮೀರದಲ್ಲೂ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡುವ ಅವಕಾಶ ಜನರಿಗೆ ಒದಗಲಿದೆ. ಮಾತಾ ವೈಷ್ಣೋ ದೇವಿ ದೇವಾಲಯ ಮತ್ತು ಅಮರನಾಥ ದೇವಸ್ಥಾನದೊಂದಿಗೆ ಇದೀಗ ಮತ್ತೊಂದು ತೀರ್ಥ ಸ್ಥಳದ ನಿರ್ಮಾಣಕ್ಕೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸಜ್ಜಾಗಿದೆ. ಏಕೆಂದರೆ, ಜಮ್ಮುವಿನಲ್ಲಿ 25 ಹೆಕ್ಟೇರ್ ಭೂಮಿಯನ್ನು ದೇವಾಲಯ ಮತ್ತು ಸಂಬಂಧಿತ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ತಿರುಮಲ ತಿರುಪತಿ ದೇವಸ್ತಾನಂ ಟ್ರಸ್ಟ್​(ಟಿಟಿಡಿ)ಗೆ ನೀಡಲಾಗುತ್ತಿದೆ.

    ತಮಿಳುನಾಡು ಸರ್ಕಾರ ಸ್ಥಾಪಿಸಿರುವ ಚಾರಿಟಬಲ್ ಸಂಸ್ಥೆಯಾದ ಟಿಟಿಡಿ, ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವಲಯಗಳಲ್ಲಿ ಕಾರ್ಯೋನ್ಮುಖವಾಗಿದೆ. ಈ ಸಂಸ್ಥೆಗೆ ದೇವಾಲಯ ನಿರ್ಮಾಣ ಮಾಡುವುದಕ್ಕಾಗಿ 40 ವರ್ಷಗಳ ಅವಧಿಗೆ 25 ಹೆಕ್ಟೇರ್ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡುವ ಪ್ರಸ್ತಾಪಕ್ಕೆ ಇಂದು ಜಮ್ಮು-ಕಾಶ್ಮೀರ ಆಡಳಿತ ಮಂಡಳಿ ಅನುಮೋದನೆ ನೀಡಿತು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.

    ಇದನ್ನೂ ಓದಿ: ಬಿಸಿಲಿನ ಝಳ- ಉತ್ತರ ಕರ್ನಾಟಕ ತತ್ತರ: ಇನ್ನೂ ಬರಲಿವೆ ಭಯಾನಕ ದಿನಗಳು

    ಗುತ್ತಿಗೆಗೆ ಪಡೆದ ಸುಮಾರು 25 ಹೆಕ್ಟೇರ್ ಭೂಮಿಯಲ್ಲಿ ದೇವಾಲಯದೊಂದಿಗೆ ಯಾತ್ರಾರ್ಥಿಗಳಿಗೆ ವಿವಿಧ ಸೌಲಭ್ಯಗಳ ಸಂಕೀರ್ಣ, ವೇದಪಾಠಶಾಲೆ, ಆಧ್ಯಾತ್ಮಿಕ / ಧ್ಯಾನ ಕೇಂದ್ರ, ಕಚೇರಿ, ವಸತಿ ನಿಲಯಗಳು ಮತ್ತು ಪಾರ್ಕಿಂಗ್ ಪ್ರದೇಶವೂ ನಿರ್ಮಾಣವಾಗಲಿದೆ. ಭವಿಷ್ಯದಲ್ಲಿ ಇದು ವೈದ್ಯಕೀಯ ಮತ್ತು ಶೈಕ್ಷಣಿಕ ಸೌಲಭ್ಯಗಳಿಗೂ ಕೇಂದ್ರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ನಿರ್ಮಾಣ ಕಾರ್ಯದ ಮೂಲಕ ಪ್ರದೇಶದ ಪ್ರವಾಸೀ ಮೌಲ್ಯವನ್ನು ಹೆಚ್ಚಿಸಬಹುದು. ವಿಶೇಷವಾಗಿ, ದೇವಾಲಯಗಳ ನಗರ ಎಂದು ಕರೆಯಲ್ಪಡುವ ಜಮ್ಮು ನಗರಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರೆ ಮಾಡುವಂತಾಗುತ್ತದೆ. ಅದರಿಂದಾಗಿ ಆರ್ಥಿಕ ಚಟುವಟಿಕೆಗಳೂ ಹೆಚ್ಚಾಗುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)

    ಈ ತರಕಾರಿಯ ಬೆಲೆ ಕೇಳಿದರೆ ತಲೆ ಸುತ್ತುವುದು ಗ್ಯಾರಂಟಿ !

    ಕರೊನಾ ಕಟ್ಟೆಚ್ಚರದಲ್ಲಿ ಕುಂಭ ಮೇಳ : ಹರಿದ್ವಾರದಲ್ಲಿ ಇಂದಿನಿಂದ ಆರಂಭ

    ಕಾವೇರಿ ನದಿಯಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದವರ ಬಂಧನ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts