More

    ನಿಧಿ ಆಸೆಗೆ ಕಂಬ ಕಿತ್ತು ನೆಲ ಅಗೆದ ಕಳ್ಳರು

    ಹಿರೇಕೆರೂರ: ನಿಧಿ ಆಸೆಗಾಗಿ ದೇವಸ್ಥಾನದ ಆವರಣದಲ್ಲಿದ್ದ ಪುರಾತನ ಕಲ್ಲಿನ ಕಂಬ ಕಿತ್ತು ಗುಂಡಿ ತೆಗೆದ ಘಟನೆ ತಾಲೂಕಿನ ಚನ್ನಳ್ಳಿ ರಸ್ತೆಯಲ್ಲಿನ ಮುಗಳಿಹಳ್ಳಿ ಬಸವೇಶ್ವರ ದೇವಸ್ಥಾನದ ಬಳಿ ಗುರುವಾರ ಮಧ್ಯರಾತ್ರಿ ನಡೆದಿದೆ.

    ನಿಧಿ ಕಳ್ಳರು ದೇವಸ್ಥಾನದ ಆವರಣದಲ್ಲಿದ್ದ ಕಪ್ಪು ಕಲ್ಲನ್ನು ಕಿತ್ತು 6 ಅಡಿ ಗುಂಡಿ ತೆಗೆದು, ನಂತರ ಮಣ್ಣು ಮತ್ತು ನೀರು ಹಾಕಿ ಅರ್ಧದಷ್ಟು ಮುಚ್ಚಿ ಹಾಕಿದ್ದಾರೆ. ಆದರೆ, ನಿಧಿ ಸಿಕ್ಕಿದೆಯಾ ಅಥವಾ ಇಲ್ಲ ಎಂಬುದು ಗೊತ್ತಾಗಿಲ್ಲ.

    ದೇವಸ್ಥಾನದ ಆವರಣದಲ್ಲಿ ಪುರಾತನ ಕಪ್ಪು ಕಲ್ಲಿನ ಕಂಬಗಳಿವೆ. ಈ ಹಿಂದೆ ಇಲ್ಲಿ ಒಂದು ಪುಟ್ಟ ಗ್ರಾಮವಿತ್ತು. ಕಾಲ ಕ್ರಮೇಣ ನಾನಾ ಕಾಯಿಲೆ ಹಾಗೂ ಬೆಂಕಿ ಅವಘಡದಿಂದ ಗ್ರಾಮ ಅವನತಿ ಕಂಡಿದೆ. ಭಯದ ವಾತಾವರಣದಿಂದ ಇಲ್ಲಿ ಯಾರೂ ವಾಸಿಸದೆ ಪಕ್ಕದ ಚನ್ನಳ್ಳಿ, ಕಡೇನಂದಿಹಳ್ಳಿ, ಮುಗಳಿಹಳ್ಳಿ ಪ್ಲಾಟ್, ದೂದಿಹಳ್ಳಿ ಗ್ರಾಮಗಳಿಗೆ ವಲಸೆ ಹೋಗಿದ್ದಾರೆ. ಪೂರ್ವಜರು ಇಲ್ಲಿಂದ ಹೋಗುವಾಗ ನಿಧಿ ಸಂಪತ್ತಿನ ಗುರುತಿಗಾಗಿ ಈ ಕಲ್ಲಿನ ಕಂಬ ನೆಟ್ಟಿರಬಹುದು. ಹೀಗಾಗಿ ದೇವಸ್ಥಾನ ಸುತ್ತಲೂ ಈಗಲೂ ಕಪ್ಪು ಕಲ್ಲಿನ ಕಂಬಗಳಿದ್ದು, ಅದರ ಮೇಲೆ ಚಿಹ್ನೆ ಕೆತ್ತಲಾಗಿದೆ. ಇಲ್ಲಿನ ಸ್ಥಳದ ಸುತ್ತಲು ಸಂಶೋಧನೆ ನಡೆಸಿದರೆ ಸೂಕ್ತ ಮಾಹಿತಿ ಲಭ್ಯವಾಗಲಿದೆ ಎಂದು ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ, ಶಿಕ್ಷಕ ಶಿವಾನಂದ ಅಂಗಡಿ ‘ವಿಜಯವಾಣಿ’ಗೆ ತಿಳಿಸಿದರು.

    ನಿಧಿಕಳ್ಳರು ಮುಂದೆ ದೇವಸ್ಥಾನ ಹಾಳು ಮಾಡಬಹುದು. ಕೂಡಲೆ ಪೊಲೀಸ್ ಇಲಾಖೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts