More

    ಮಂಗಳವಾರ ಭಾರತ್ ಬಂದ್​; ಆದರೆ ಇವರಿಗೆ ಮಾತ್ರ ವಿನಾಯಿತಿ…

    ನವದೆಹಲಿ: ಕಗ್ಗಂಟಾಗುತ್ತಲೇ ಬಂದಿರುವ ರೈತರ ಪ್ರತಿಭಟನೆ ಭಾರತ್ ಬಂದ್ ಆಗುವ ಮಟ್ಟಕ್ಕೆ ಬಂದಿದ್ದು, ಮಂಗಳವಾರ ದೇಶಾದ್ಯಂತ ಬಂದ್ ನಡೆಸಲು ರೈತ ಸಂಘಟನೆಗಳು ಸಜ್ಜಾಗಿವೆ. ಈಗಾಗಲೇ ರೈತ ಪ್ರತಿಭಟನೆಯ ತೀವ್ರತೆಯನ್ನು ಕಂಡಿರುವ ದೇಶದ ಜನತೆ ಬಂದ್​ ದಿನದ ಬಗ್ಗೆ ಒಂದಷ್ಟು ಚಿಂತೆಯಲ್ಲಿದ್ದಾರೆ. ಆದರೆ ಅಂದು ಒಂದು ವರ್ಗಕ್ಕೆ ಮಾತ್ರ ರೈತರು ವಿನಾಯಿತಿ ನೀಡಿದ್ದಾರೆ.

    ದೇಶದ ಸುಮಾರು 40 ರೈತಸಂಘಟನೆಗಳು ಜತೆಯಾಗಿ ಮಂಗಳವಾರದ ಭಾರತ್ ಬಂದ್​ಗೆ ಭಾನುವಾರ ಕರೆ ನೀಡಿದ್ದಾರೆ. ರೈತರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವಂತೆ ರೈತ ಮುಖಂಡರಾದ ಬಲ್​ದೇವ್ ಸಿಂಗ್ ನಿಹಾಲ್​, ಅಶೋಕ್​ ಧಾನ್ವ್ಲೆ, ಯೋಗೇಂದ್ರ ಯಾದವ್ ಮುಂತಾದವರು ಭಾರತ್ ಬಂದ್​ಗೆ ಕರೆ ನೀಡಿದ್ದಾರೆ. ಶನಿವಾರದ ಮಾತುಕತೆ ಫಲಪ್ರದವಾಗಿಲ್ಲ. ಅಲ್ಲದೆ ಸರ್ಕಾರ ರೈತರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ನಾವು ಭಾರತ್ ಬಂದ್​ಗೆ ಕರೆ ನೀಡುತ್ತಿರುವುದಾಗಿ ರೈತ ಮುಖಂಡರು ಹೇಳಿಕೊಂಡಿದ್ದಾರೆ.

    ದೆಹಲಿ, ಪಂಜಾಬ್​, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ಚಂಡೀಗಢ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು ಹಾಗೂ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳ ರೈತ ಸಂಘಟನೆಗಳು ಈ ಬಂದ್​ಗೆ ಬೆಂಬಲ ಘೋಷಿಸಿವೆ. ಮಂಗಳವಾರ ಬೆಳಗ್ಗೆಯಿಂದಲೇ ಎಲ್ಲ ಅಂಗಡಿ-ಮುಂಗಟ್ಟುಗಳು ಮುಚ್ಚಿರಲಿದ್ದು, ಸಾರಿಗೆ ಸಂಪರ್ಕಗಳು ಸ್ಥಗಿತಗೊಂಡಿರಲಿವೆ. ಮಧ್ಯಾಹ್ನದ ನಂತರ ಸಾರಿಗೆ ವ್ಯವಸ್ಥೆ ಆರಂಭಗೊಂಡರೂ ಅಂಗಡಿ-ಮುಂಗಟ್ಟುಗಳು ಮುಚ್ಚಿರಲಿವೆ. ಆದರೆ ಮದುವೆ ಸಮಾರಂಭಗಳಿಗೆ ಭಾರತ್ ಬಂದ್​ನಿಂದ ವಿನಾಯಿತಿ ಇರಲಿದೆ, ಅಂದು ನಡೆಯಲಿರುವ ಮದುವೆಗಳಿಗೆ ರೈತರು ಅಡ್ಡಿ ಮಾಡುವುದಿಲ್ಲ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್​)

    ಕೋವಿಡ್ ನಿಯಮ ಉಲ್ಲಂಘನೆಗೆ 1 ಲಕ್ಷ ರೂ.ವರೆಗೆ ದಂಡ: ಮಾಲೀಕರು, ಆಯೋಜಕರೇ ಭರಿಸಬೇಕು

    ಕರೊನಾ ಲಸಿಕೆ ಇವರಿಗೇ ಮೊದಲು ಬೇಕಂತೆ; ಪ್ರಧಾನಿಗೆ ಪತ್ರ ಬರೆದು ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts