More

    ನೀರು ಅತ್ಯಮೂಲ್ಯವೆಂದು ಈ ಮಂಗಗಳಿಗೆ ಗೊತ್ತು; ಇವುಗಳಿಗೆ ಟ್ಯಾಂಕ್​ ಆಸರೆ; ಕುಡಿದ ಬಳಿಕ ನಳ ಬಂದ್ ಮಾಡ್ತವೆ!

    ಕುಂದಾಣ: ನೀರು ಅತ್ಯಮೂಲ್ಯವೆಂದು ಗೊತ್ತಿದ್ದೂ ಮನುಷ್ಯರು ನೀರನ್ನು ಮಿತವಾಗಿ ಬಳಸುವುದಿಲ್ಲ. ಕೊಳಾಯಿಯಲ್ಲಿ ನೀರು ಬರುತ್ತಿದ್ದರೆ ಬೇಕಾಬಿಟ್ಟಿ ಬಳಸುವುದು, ನಲ್ಲಿಯಲ್ಲಿ ನೀರು ಸೋರಿಕೆಯಾಗುತ್ತಿದ್ದರೂ ತಲೆಕೆಡಿಸಿಕೊಳ್ಳದಿರುವುದು ದಿನನಿತ್ಯ ಕಂಡುಬರುತ್ತದೆ. ಅದೇ ನೀರು ಖಾಲಿಯಾದರೆ ನೀರಿಗಾಗಿ ಪರದಾಡುವುದು, ಖಾಲಿ ಕೊಡ ಹಿಡಿದು ಪ್ರತಿಭಟಿಸುವುದು ಸಾಮಾನ್ಯ ಸಂಗತಿಗಳಾಗಿವೆ. ಇಂಥ ಜನರ ನಡುವೆ ಕುಂದಾಣದ ಮಂಗಗಳು ನೀರು ಅತ್ಯಮೂಲ್ಯವೆಂಬುದನ್ನು ತೋರಿಸಿಕೊಡುತ್ತಿವೆ, ಮಂಗಗಳ ನಾಗರಿಕತೆಗೆ ಜನರೇ ನಾಚಿಕೊಳ್ಳಬೇಕಿದೆ.

    ಹೌದು! ಬೆಂಗಳೂರು ಹೊರವಲಯದ ದೇವನಹಳ್ಳಿ ಸಮೀಪದ ಕುಂದಾಣ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಕೈ ತೊಳೆಯಲು ನೀರಿನ ಟ್ಯಾಂಕ್​ ಅಳವಡಿಸಲಾಗಿದೆ. ಈ ವ್ಯವಸ್ಥೆಯನ್ನು ಸ್ಥಳೀಯರು, ಎಷ್ಟರಮಟ್ಟಿಗೆ ಉಪಯೋಗಿಸುತ್ತಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಮಂಗಗಳು ಮಾತ್ರ ಸಮಪರ್ಕವಾಗಿ ಬಳಸಿಕೊಂಡಿವೆ. ಮರಗಳಲ್ಲಿ ಜಿಗಿಯುತ್ತ ಅಂತಿದಿತ್ತ ಓಡಾಡುವ ಮಂಗಗಳು ಬಾಯಾರಿಕೆಯಾದಾಗ ಗ್ರಾಮ ಪಂಚಾಯಿತಿ ಕಟ್ಟಡದ ಮೇಲೆ ಚಂಗನೆ ಜಿಗಿದು ಕೆಳಕ್ಕಿಳಿದು ಟ್ಯಾಂಕ್​​ಗೆ ಅಳವಡಿಸಿರುವ ಟ್ಯಾಪ್ ತಿರುಗಿಸಿ ನೀರು ಕುಡಿಯುತ್ತವೆ.

    ಆದರೆ ನೀರು ಕುಡಿದ ನಂತರ ಕೊಳಾಯಿ ಬಂದ್ ಮಾಡುವುದನ್ನು ಮರೆಯುವುದಿಲ್ಲ. ಯಾವುದೇ ಕೋತಿಯಾದರೂ ನೀರು ಕುಡಿದ ಬಳಿಕ ಶಿಸ್ತಾಗಿ ಕೊಳಾಯಿ ಬಂದ್ ಮಾಡಿ ನೀರು ನಿಂತಿದ್ದನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ಅಲ್ಲಿಂದ ತೆರಳುತ್ತದೆ. ನೀರು ಅತ್ಯಮೂಲ್ಯ ಎಂಬುದನ್ನು ಕುಂದಾಣ ಭಾಗದ ಕೋತಿಗಳು ಚೆನ್ನಾಗಿ ಅರಿತಿವೆ. ಈ ದೃಶ್ಯ ಈ ಭಾಗದ ಸುತ್ತಮುತ್ತಲ ಜನರ ಗಮನ ಸೆಳೆಯುತ್ತಿದೆ.

    Photo-Video | ಕೊನೆಯ ದಿನಗಳಲ್ಲಿ ಹೀಗಿದ್ದರು ಲತಾ ಮಂಗೇಶ್ಕರ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts