More

    ಇವರಿನ್ನು ಶಂಕಿತ ಉಗ್ರರು, ಫೆ. 27ರಂದು ಶಿಕ್ಷೆ ಪ್ರಕಟ: ಹಿಂದು ಮುಖಂಡರ ಹತ್ಯೆಗೆ ಸ್ಕೆಚ್, ಮತೀಯ ಗಲಭೆಗೆ ಸಂಚು ಪ್ರಕರಣ

    ಬೆಂಗಳೂರು: ಜೈಲಿನಲ್ಲಿ ಇದ್ದುಕೊಂಡೇ ಲಷ್ಕರ್ ಇ ತೋಯಿಬಾ ಉಗ್ರ ಸಂಘಟನೆ ಬಲವರ್ಧನೆಗೆ ಹಣ ಸಂಗ್ರಹ ಮತ್ತು ನೇಮಕಾತಿ ಮಾಡುತ್ತಿದ್ದ ಮೂವರು ಶಂಕಿತರನ್ನು ಅಪರಾಧಿಗಳೆಂದು ವಿಶೇಷ ಕೋರ್ಟ್ ಘೋಷಣೆ ಮಾಡಿದೆ.

    ಮೈಸೂರು ಜಿಲ್ಲೆ ಟಿಪ್ಪುನಗರದ ಸೈಯದ್ ಅಬ್ದುಲ್ ರೆಹಮಾನ್ ಅಲಿಯಾಸ್ ಅಬ್ದುಲ್ ರೆಹಮಾನ್ (25), ಪಾಕಿಸ್ಥಾನದ ಕರಾಚಿ ಮೂಲದ ಮೊಹಮದ್ ಪಹಾದ್ ಹೈ ಅಲಿಯಾಸ್ ಮೊಹಮದ್ ಖೋಯಾ (30) ಮತ್ತು ಬೆಂಗಳೂರಿನ ಲಕ್ಕಸಂದ್ರದ ಅಪ್ಸರ್ ಪಾಷಾ ಅಲಿಯಾಸ್ ಖಷೀರುದ್ದೀನ್ (32) ಬಂಧಿತ ಉಗ್ರರರು. ಫೆ.23ರಂದು ವಿಶೇಷ ನ್ಯಾಯಾಲಯ, ಮೂವರು ಶಂಕಿತರನ್ನು ಅಪರಾಧಿಗಳೆಂದು ಘೋಷಣೆ ಮಾಡಿದ್ದು, 27ಕ್ಕೆ ತೀರ್ಪು ಪ್ರಕಟಣೆ ಮಾಡಲಿದೆ.

    ಪಾಕಿಸ್ತಾನದ ಮೊಹಮದ್, ಕೇರಳದ ಕೋಜಿಕೋಡ್ ಪ್ರಕರಣದಲ್ಲಿ 8 ವರ್ಷ ಮತ್ತು ಮೈಸೂರಿನ ವಿಜಯನಗರ ಪೊಲೀಸ್ ಠಾಣೆ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಅದೇ ರೀತಿ ಭಾರತೀಯ ವಿಜ್ಞಾನ ಸಂಸ್ಥೆ ಮೇಲಿನ ದಾಳಿ ಪ್ರಕರಣದಲ್ಲಿ ಅಪ್ಸರ್ ಪಾಷಾ, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಇದರ ನಡುವೆ ಕೊಲೆ, ದರೋಡೆ, ಕಳ್ಳತನ ಕೇಸಿನಲ್ಲಿ 2011ರಲ್ಲಿ ಜೈಲು ಸೇರಿದ್ದ ಅಬ್ದುಲ್ ರೆಹಮಾನ್‌ಗೂ ಪಾಕ್ ಪ್ರಜೆ ಮತ್ತು ಅಪ್ಸರ್‌ಗೆ ಪರಿಚಯವಾಗಿತ್ತು. ಅಲ್ಲಿಂದ ಮೂವರು ಸೇರಿ ದೇಶದಲ್ಲಿ ಲಷ್ಕರ್ ಇ ತೋಯಿಬಾ ಉಗ್ರ ಸಂಘಟನೆಗೆ ಒಳಸಂಚು ರೂಪಿಸಿದ್ದರು.

    ಇದನ್ನೂ ಓದಿ: ಮಂಡ್ಯದಲ್ಲಿ ಭೀಕರ ಮರ್ಡರ್​: ರುಂಡ ಕತ್ತರಿಸಿ, ಶವ ಪೀಸ್ ಪೀಸ್ ಮಾಡಿ ನಾಲೆಗೆಸೆದ ಹಂತಕರು

    ಅಮಾಯಕ ಯುವಕರಿಗೆ ಉಗ್ರ ಸಂಘಟನೆಗೆ ಸೇರಲು ಪ್ರೇರೆಪಿಸಿ ಭಯೋತ್ಪಾದಕ ಚಟುವಟಿಕೆಗೆ ಸಕ್ರಿಯ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಮತ್ತು ಹಿಂದು ಸಂಘಟನೆ ಮುಖ್ಯಸ್ಥರ ಹತ್ಯೆಗೆ ಸಂಚು ರೂಪಿಸಿದ್ದರು. ಮತೀಯ ಗಲಭೆ ಉಂಟು ಮಾಡಲು ಹಣ, ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಿಂದ ಪಡೆಯುತ್ತಿರುವ ಖಚಿತ ಮಾಹಿತಿ ಲಭ್ಯವಾಗಿತ್ತು.

    ಇದನ್ನೂ ಓದಿ: ರಾಜಧಾನಿಯಲ್ಲಿ ಬಿಬಿಎಂಪಿ ಖಾತಾ ಆಂದೋಲನ, ಆಸ್ತಿವಂತರಿಗೆ ಸದವಕಾಶ: ಎಂದಿನಿಂದ, ಎಲ್ಲೆಲ್ಲಿ?; ಇಲ್ಲಿದೆ ವಿವರ

    ಸಿಸಿಬಿಯ ಅಂದಿನ ಇನ್‌ಸ್ಪೆಕ್ಟರ್ ಕೆ.ಸಿ.ಅಶೋಕನ್ ನೇತೃತ್ವದ ತಂಡಕ್ಕೆ ಜೈಲಿನಲ್ಲಿ ಉಗ್ರರ ಸಂಪರ್ಕದಿಂದ ಕೃತ್ಯ ಎಸಗಲು ಸಜ್ಜಾಗಿರುವ ಇವರ ಮಾಹಿತಿ ಲಭ್ಯವಾಗಿತ್ತು. ಬಂಧಿತನಿಂದ 1 ರಿವಾಲ್ವಾರ್, 4 ಜೀವಂತ ಗುಂಡು, 2 ಮೊಬೈಲ್​ಫೋನ್​, ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಿದ ಸಿಸಿಬಿ ಅಧಿಕಾರಿಗಳು ಆಡುಗೋಡಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ತನಿಖೆ ಪೂರ್ಣಗೊಳಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಮೂವರನ್ನು ಅಪರಾಧಿಗಳೆಂದು ಘೋಷಣೆ ಮಾಡಿದೆ. ಶಿಕ್ಷೆ ಪ್ರಕಟಣೆಗೆ ದಿನಾಂಕ ನಿಗದಿ ಮಾಡಿದೆ. ಸರ್ಕಾರಿ ಅಭಿಯೋಜಕ ಸಿ.ಎ. ರವೀಂದ್ರ ವಾದ ಮಂಡಿಸಿದ್ದರು.

    ಬೇರೆ ಜಿಲ್ಲೆಗೆ ವರ್ಗಾವಣೆ; ಮೊಬೈಲ್​ಫೋನ್​ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಪೊಲೀಸ್ ಕಾನ್​ಸ್ಟೆಬಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts