More

    ಇವೆರಡು ನಗರಗಳು ವಿಶ್ವದಲ್ಲೇ ಅತ್ಯಂತ ದುಬಾರಿ-ನ್ಯೂಯಾರ್ಕ್, ಹಾಂಗ್​ಕಾಂಗ್​, ಜಿನೀವಾವನ್ನೂ ಮೀರಿಸಿದ ಆ ನಗರಗಳು ಯಾವುವು?

    ಸಿಂಗಾಪುರ: ಸಿಂಗಾಪುರ ಮತ್ತು ಜ್ಯೂರಿಚ್ ವಿಶ್ವದ ಅತ್ಯಂತ ದುಬಾರಿ ನಗರಗಳಾಗಿ ಈ ವರ್ಷ ಗುರುತಿಸಿಕೊಂಡಿವೆ. ಜಿನೀವಾ, ನ್ಯೂಯಾರ್ಕ್ ಮತ್ತು ಹಾಂಗ್ ಕಾಂಗ್ ನಂತರದ ಸ್ಥಾನದಲ್ಲಿವೆ ಎಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ಗುರುವಾರ ಹೇಳಿದೆ.

    ಇದನ್ನೂ ಓದಿ: ಸೇನೆಗೆ ಹೆಚ್ಚಿನ ಫೈಟರ್ ಜೆಟ್‌ಗಳು- 97 ತೇಜಸ್ ಸ್ವಾಧೀನಕ್ಕೆ ಅನುಮತಿ – 1.1 ಲಕ್ಷ ಕೋಟಿ ರೂ. ಒಪ್ಪಂದ
    ಸಿಂಗಾಪುರವು ಕಳೆದ ಹನ್ನೊಂದು ವರ್ಷಗಳಲ್ಲಿ ಹಲವಾರು ವರ್ಗಗಳಲ್ಲಿ ದುಬಾರಿ ಜೀವನ ಶೈಲಿಯಿಂದ ಒಂಬತ್ತನೇ ಬಾರಿಗೆ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

    ಕಾರ್ ಗಳ ಬಳಕೆ ಮೇಲೆ ಹೆಚ್ಚು ತೆರಿಗೆ ಮತ್ತು ಕಟ್ಟುನಿಟ್ಟಾದ ಕ್ರಮಗಳನ್ನು ಸಿಂಗಾಪುರ ಸರ್ಕಾರ ಜಾರಿಗೊಳಿಸಿದ್ದು, ವಿಶ್ವದ ದುಬಾರಿ ಸಾರಿಗೆಯನ್ನು ಹೊಂದಿದೆ. ಬಟ್ಟೆ, ದಿನಸಿ ಮತ್ತು ಮದ್ಯಸಾರಕ್ಕೆ ಇದು ಅತ್ಯಂತ ದುಬಾರಿಯಾಗಿದೆ.

    ಎರಡನೇ ಸ್ಥಾನದಲ್ಲಿರುವ ಜ್ಯೂರಿಚ್‌ನ ದುಬಾರಿ ಜೀವನ ಸ್ವಿಸ್ ಫ್ರಾಂಕ್‌ನ ಬಲವನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ದಿನಸಿ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಮತ್ತು ಮನರಂಜನೆಗಾಗಿ ಹೆಚ್ಚಿನ ಬೆಲೆ ತೆರಬೇಕಾಗಿದೆ ಎಂದು ಅದು ಹೇಳಿದೆ.
    ಜಿನೀವಾ ಮತ್ತು ನ್ಯೂಯಾರ್ಕ್ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡು ಸಮನಾಗಿದ್ದರೆ, ಹಾಂಗ್ ಕಾಂಗ್ ಐದನೇ ಮತ್ತು ಲಾಸ್ ಏಂಜಲೀಸ್ ಆರನೇ ಸ್ಥಾನದಲ್ಲಿದೆ.

    ಏಷ್ಯಾವು ಇತರ ಪ್ರದೇಶಗಳಿಗೆ ಹೋಲಿಸಿದರೆ ಸರಾಸರಿ ಕಡಿಮೆ ಬೆಲೆ ಏರಿಕೆಯನ್ನು ಕಾಣುತ್ತಿದೆ ಎಂದು ಅದು ಹೇಳಿದೆ.
    ಚೀನಾದ ನಗರಗಳು ತನ್ನ ಶ್ರೇಯಾಂಕದಲ್ಲಿ ಕುಸಿದಿವೆ. ನಾನ್ಜಿಂಗ್, ವುಕ್ಸಿ, ಡೇಲಿಯನ್ ಮತ್ತು ಬೀಜಿಂಗ್ – ಜಪಾನ್‌ನ ಒಸಾಕಾ ಮತ್ತು ಟೋಕಿಯೊ ಜತೆಗೆ ಹೋಲಿಸಿದರೆ ಕಡಿಮೆ ವೆಚ್ಚದ ನಗರಗಳಾಗಿ ಗುರ್ತಿಸಿಕೊಂಡಿವೆ.

    7 ಅಡಿ 9 ಇಂಚು ಉದ್ದನೆಯ ಕೂದಲಿನಿಂದ ಗಿನ್ನಿಸ್ ದಾಖಲೆ ಬರೆದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts