More

    ನಿಮ್ಮ ಕಣ್ಣಿಗೊಂದು ಸವಾಲ್:​ ಚಿತ್ರದಲ್ಲಿರೋ ಭಾರಿ ಗಾತ್ರದ ಹೆಬ್ಬಾವು ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!

    ನವದೆಹಲಿ: ಚಿತ್ರದಲ್ಲಿ ಹಾವನ್ನು ಗುರುತಿಸಿ ಎಂಬ ನೂರಾರು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹರಿದಾಡುತ್ತಿರುತ್ತವೆ. ಹಾವುಗಳೇ ಹಾಗೇ ಆಹಾರಕ್ಕಾಗಿ ಸಂಚು ಹಾಕುವಾಗ ಯಾರಿಗೂ ಗೊತ್ತಾಗದಂತೆ ಅವಿತು ಕುಳಿತುಬಿಡುತ್ತವೆ. ಅದನ್ನು ತಿಳಿಯದೇ ಹಾವನ್ನು ತುಳಿದು ಕಚ್ಚಿಸಿಕೊಂಡವರಿಗೂ ಕಡಿಮೆಯೇನಿಲ್ಲ. ಸಾವಿಗೀಡಾದವರು ಸಹ ಇದ್ದಾರೆ. ಹೀಗಿದ್ದರೂ ಚಿತ್ರಗಳಲ್ಲಿ ಹಾವು ಪತ್ತೆ ಹಚ್ಚುವ ಟಾಸ್ಕ್​ ಮಾತ್ರ ನೆಟ್ಟಿಗರಿಗೆ ಮಜಾ ಕೊಡುವುದಂತೂ ಸುಳ್ಳಲ್ಲ.

    ಇದನ್ನೂ ಓದಿ: ಕೈಕಾಲುಗಳಿಲ್ಲದೇ ಹೆಣ್ಣು ಮಗುವಿನ ಜನನ: ತಾಯಿ, ವೈದ್ಯರಿಗೆ ಕಾದಿತ್ತು ಮತ್ತೊಂದು ಅಚ್ಚರಿ!

    ಹೌದು, ಇತ್ತೀಚೆಗೆ ಆಸ್ಪ್ರೇಲಿಯಾ ಮೂಲದ ಸ್ನೇಕ್​ ಕ್ಯಾಚಿಂಗ್​ ಸರ್ವೀಸ್​ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಒಂದು ಫೋಟೋವನ್ನು ಅಪ್​ಲೋಡ್​ ಮಾಡಿ, ಅದರಲ್ಲಿರುವ ಬೃಹತ್​ ಗಾತ್ರದ ಹೆಬ್ಬಾವನ್ನು ಪತ್ತೆ ಹಚ್ಚಿ ಎಂದು ನೆಟ್ಟಿಗರಿಗೆ ಸವಾಲು ಹಾಕಿದ್ದಾರೆ. ಕಳೆದ ವಾರ ಬ್ರಿಸ್ಬೇನ್‌ನ ಪಶ್ಚಿಮ ಕೋರಿಂಡಾದಲ್ಲಿ 8 ಅಡಿಯ ಹೆಬ್ಬಾವನ್ನು ಹಿಡಿಯಲಾಗಿದೆ.

    Spot the snake time! Some suburban yards are just purpose built for snakes.

    Posted by Snake Catchers Brisbane, Ipswich, Logan & Gold Coast 0413 028 081 on Wednesday, June 17, 2020

    ಮನೆಯೊಂದರ ಹಿತ್ತಲಲ್ಲಿ ಹೆಬ್ಬಾವು ಅವಿತು ಕುಳಿತಿದೆ. ಇದಕ್ಕೆ ಸಂಬಂಧಿಸಿದ ಫೋಟೋವನ್ನು ಪೋಸ್ಟ್​ ಮಾಡಿ ಹಾವನ್ನು ಪತ್ತೆ ಹಚ್ಚುವಂತೆ ನೆಟ್ಟಿಗರಿಗೆ ಟಾಸ್ಟ್​ ಕೊಡಲಾಗಿದೆ. ಇದಕ್ಕೆ ನಾವೇನು ಕಡಿಮೆ ಇಲ್ಲ ಎಂಬಂತೆ ಅನೇಕ ನೆಟ್ಟಿಗರು ಚಿತ್ರಕ್ಕೆ ರೌಂಡ್​ ಮಾರ್ಕ್​ ಮಾಡಿ ಹಾವನ್ನು ಪತ್ತೆ ಹಚ್ಚಿರುವುದಾಗಿ ಕಾಮೆಂಟ್​ ಬಾಕ್ಸ್​​ನಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ನಿಮಗೂ ಗೊತ್ತಿದ್ದರೆ ನೀವೂ ಸಹ ಕಾಮೆಂಟ್​ ಮಾಡಬಹುದು. (ಏಜೆನ್ಸೀಸ್​)

    ಇದನ್ನೂ ಓದಿ: ಯುವತಿಯನ್ನು ನಂಬಿಸಿ ದ್ರೋಹವೆಸಗಿದ ಪೊಲೀಸ್​ ಕಾನ್ಸ್​ಟೇಬಲ್ ಬಂಧನ​

    Posted by Natalie Brown on Wednesday, June 17, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts