More

    ಒಮ್ಮೆ ಗುಣವಾದವರಲ್ಲಿ ಮತ್ತೆ ಕರೊನಾ ಸೋಂಕು ಪತ್ತೆಯಾಗಬಹುದು; ಏಕೆಂದರೆ…

    ನವದೆಹಲಿ: ಕೋವಿಡ್​-19 ಪಾಸಿಟಿವ್ ಬಂದು ಸೋಂಕುಮುಕ್ತರಾದವರು ಮತ್ತೆ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ಹಾಗಂತ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​ (ಐಸಿಎಂಆರ್​) ಮಾಹಿತಿ ನೀಡಿದೆ. ಮರುಸೋಂಕಿನ ವ್ಯಾಖ್ಯಾನದ ಬಗ್ಗೆ ಗೊಂದಲಗಳಿದ್ದರೂ ಪುನಃ ಸೋಂಕು ತಗುಲುವ ಸಾಧ್ಯತೆ ಇದೆ ಎಂಬುದಾಗಿ ಐಸಿಎಂಆರ್ ಹೇಳಿದೆ.

    ಸೆಂಟರ್ ಫಾರ್ ಡಿಸೀಸ್​ ಕಂಟ್ರೋಲ್​ ಪ್ರಕಾರ, ಸೋಂಕುಮುಕ್ತವಾದ ವ್ಯಕ್ತಿ ಪುನಃ 90 ದಿನಗಳ ಒಳಗೆ ಮತ್ತೆ ಸೋಂಕಿಗೆ ಒಳಗಾದರೆ ಅದನ್ನು ಮರುಸೋಂಕು ಎನ್ನಲಾಗುತ್ತದೆ. ಅದಾಗ್ಯೂ ಮರುಸೋಂಕಿಗೆ ಬೇರೆ ಬೇರೆ ಕಟಾಫ್​ ಪೀರಿಯಡ್​ಗಳಿದ್ದರೂ ನಾವು ಸದ್ಯ 100 ದಿನಗಳನ್ನು ಕಟಾಫ್​ ಆಗಿ ಪರಿಗಣಿಸುತ್ತಿದ್ದೇವೆ. ಈ ಹಿಂದೆ ಒಮ್ಮೆ ಗುಣವಾದವರಲ್ಲಿ ಮತ್ತೆ ಸೋಂಕು ಕಂಡುಬಂದ ಬಗ್ಗೆ ಕೇಂದ್ರ ಆರೋಗ್ಯ ಸಚಿವರೇ ಹೇಳಿದ್ದರೂ ಅದನ್ನು ಮರುಸೋಂಕು ಎಂದು ಪರಿಗಣಿಸದೆ ಮಿಸ್​ ಕ್ಲಾಸಿಫೈಡ್ ಎಂದು ಪರಿಗಣಿಸಲಾಗಿದೆ ಎಂಬುದಾಗಿ ಐಸಿಎಂಆರ್​ನ ಡೈರೆಕ್ಟರ್ ಜನರಲ್​ ಬಲರಾಂ ಭಾರ್ಗವ ತಿಳಿಸಿದ್ದಾರೆ.

    ವೈರಸ್​ ಇನ್ನೂ ಹೊಸದಾಗಿರುವುದರಿಂದ ಅದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಒಮ್ಮೆ ಆ್ಯಂಟಿಬಾಡೀಸ್​ ಪ್ರಮಾಣ ದೇಹದಲ್ಲಿ ಕ್ಷೀಣಿಸುತ್ತಿದ್ದಂತೆ ಮತ್ತೆ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಸೋಂಕುಮುಕ್ತರಾದ ಮೇಲೂ ಮಾಸ್ಕ್​ ಧರಿಸುವುದನ್ನು ನಿಲ್ಲಿಸಬಾರದು. ಜತೆಗೆ ಕರೊನಾ ಹರಡುವಿಕೆ ತಡೆ ಹಿನ್ನೆಲೆಯಲ್ಲಿ ಪಾಲಿಸಬೇಕಾದ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಬೇಕು ಎಂಬುದಾಗಿ ಅವರು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts