More

  ಇಂಥವರ ಪರ ಬಿಜೆಪಿಯವರು ವಕಾಲತ್ತು ವಹಿಸುತ್ತಾರಂದ್ರೆ ಅದಕ್ಕಿಂತ ಕೆಟ್ಟ ಸಂಗತಿ ಬೇರೆ ಇಲ್ಲ: ದಿನೇಶ್ ಗುಂಡೂರಾವ್

  ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಮೂವರು ಬಜರಂಗದಳ ಕಾರ್ಯಕರ್ತರನ್ನು ಗಡಿಪಾರು ಮಾಡಿರುವ ಕ್ರಮಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇಂದು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

  ಸುದ್ದಿಗಾರರ ಜತೆ ಮಾತನಾಡಿದ ಅವರು, ಅಪರಾಧಿಗಳ ಪರ ಬಿಜೆಪಿಯವರು ಮಾತನಾಡುತ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲ, ಗಡಿಪಾರಾದವರ ಮೇಲೆ ಅನೇಕ ಪ್ರಕರಣಗಳಿವೆ, ಅವರು ಕಾನೂನುಬಾಹಿರ ಚಟುವಟಿಕೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಯಾವುದೇ ಜಾತಿ ಧರ್ಮ ಬರುವುದಿಲ್ಲ. ಇಂಥವರ ಪರ ಬಿಜೆಪಿಯವರು ವಕಾಲತ್ತು ವಹಿಸುತ್ತಾರೆ ಎಂದರೆ ಅದಕ್ಕಿಂತ ಕೆಟ್ಟ ಸಂಗತಿ ಬೇರೆ ಇಲ್ಲ ಎಂದರು.

  ಇದನ್ನೂ ಓದಿ: ಚಿಕಿತ್ಸೆಗೆಂದು ದಾಖಲಾಗಿದ್ದ ಡಾಕ್ಟರ್​ ಬೆಳಗಾಗುವಷ್ಟರಲ್ಲಿ ಇಲ್ಲ!; ಪತ್ನಿಗೆ ಶವ ಸಿಗುವವರೆಗೂ ಆಸ್ಪತ್ರೆಯವರಿಗೆ ವಿಷ್ಯ ಗೊತ್ತಾಗ್ಲಿಲ್ಲ!

  ತಪ್ಪು ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ನಮ್ಮ ಪೊಲೀಸರಿಗೆ ಹೇಳಿದ್ದೇವೆ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಯಾವುದೇ ಪ್ರಸ್ತಾಪ ಇಲ್ಲ. ಗಡಿಪಾರು ನೋಟಿಸ್​ಗೆ ಒಳಗಾದವರು ಅಪರಾಧಿಗಳು, ಅನೇಕ ಪ್ರಕರಣಗಳಲ್ಲಿ ಭಾಗಿಯಾದವರು. ಆ ರೀತಿ 65 ಜನರನ್ನು ಈಗಾಗಲೇ ದಕ್ಷಿಣಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಆ ಪಟ್ಟಿಯನ್ನು ಇವರು ನೋಡಲಿ, ಧರ್ಮಕ್ಕೂ ಇದಕ್ಕೂ ಸಂಬಂಧವಿಲ್ಲ. ಅದಾಗ್ಯೂ ಬಿಜೆಪಿ ಇಂಥವರನ್ನು ಪ್ರೋತ್ಸಾಹಿಸುತ್ತೆ ಅಂದರೆ ಅಪರಾಧಿಗಳಿಗೆ ಬಿಜೆಪಿ ಬೆಂಬಲ ಕೊಡುತ್ತಿದೆ ಎಂದರ್ಥ ಎಂದರು.

  ಇದನ್ನೂ ಓದಿ: ಮೂರೂವರೆ ವರ್ಷದ ಮಗುವನ್ನೂ ಬಿಡದ ದುರುಳ; ನಿತ್ಯ ಶಾಲೆಗೆ ಕರೆದೊಯ್ಯುತ್ತಿದ್ದವನಿಂದಲೇ ದುಷ್ಕೃತ್ಯ

  ಪೊಲೀಸ್ ಇಲಾಖೆಯಲ್ಲಿ ನಮ್ಮ ಯಾವುದೇ ಹಸ್ತಕ್ಷೇಪ ಇಲ್ಲ. ಡ್ರಗ್ ಮಾಫಿಯಾ, ನೈತಿಕ ಪೊಲೀಸ್​ಗಿರಿ ವಿರುದ್ಧ ಕ್ರಮ ತೆಗೆದುಕೊಳ್ಳುತ್ತ ಇದ್ದಾರೆ. ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ನಾಯಕರು ವಾತಾವರಣ ಕೆಡಿಸುತ್ತಿದ್ದಾರೆ ಎಂದೂ ದಿನೇಶ್​ ಗುಂಡೂರಾವ್ ಆರೋಪಿಸಿದರು.

  ಎಕ್ಸಾಂ ದಿನವೇ ವಿದ್ಯಾರ್ಥಿ ಸಾವು ಪ್ರಕರಣದ ಇನ್ನೊಂದು ಮುಖ: ಏಕೈಕ ಪುತ್ರನನ್ನು ಕಳೆದುಕೊಂಡ ತಾಯಿಯ ಪ್ರಶ್ನೆಗಳಿವು..

  ಬೆಂಗಳೂರಲ್ಲಿ ಇದೇ ಭಾನುವಾರ ಕುಂದಾಪ್ರ ಕನ್ನಡ ಹಬ್ಬ: ಸಿಎಂ ಉಪಸ್ಥಿತಿ, ಸಂಭ್ರಮಕ್ಕೆ ಸ್ಟಾರ್ ಕಳೆ

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts