More

    7ನೇ ತರಗತಿಯಲ್ಲಿ ಟಿಪ್ಪು ಪಠ್ಯ ಇಲ್ಲ

    ಬೆಂಗಳೂರು: ಶೈಕ್ಷಣಿಕ ಅವಧಿ ಕಡಿತವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕಡಿತ ಮಾಡಿರುವ ಶೇ.30 ಪಠ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ ಟಿಪ್ಪು ಸುಲ್ತಾನ್ ಪಠ್ಯ ಕೂಡ ಸೇರಿದೆ. ಅರ್ಥಾತ್, ಕೆಲವು ತರಗತಿಯಲ್ಲಿದ್ದ ಟಿಪು್ಪ ಸುಲ್ತಾನ್ ಕುರಿತ ಅಧ್ಯಯನಗಳನ್ನು ತೆಗೆದು ಹಾಕಲಾಗಿದೆ. ಅದೇ ರೀತಿ ಈ ಹಿಂದೆ ನಿಗದಿ ಪಡಿಸಿದ್ದ ಬೋಧನಾ ಅವಧಿಯನ್ನೂ ಕಡಿತ ಮಾಡಿದೆ.

    ರಾಜ್ಯ ಪಠ್ಯಪುಸ್ತಕ ಸಂಘವು ಶೈಕ್ಷಣಿಕ ಅವಧಿಯನ್ನು 120 ದಿನಗಳಿಗೆ ಲೆಕ್ಕಹಾಕಿ ಕಡಿತ ಮಾಡಿ ಶಿಕ್ಷಕರಿಗೆ ಅಧ್ಯಯನಗಳ ಮಾಹಿತಿ, ನಿಗದಿಯಾಗಿದ್ದ ಅವಧಿ, ಮಿತಗೊಳಿಸಿರುವ ಅವಧಿ, ಲಭ್ಯವಾಗಿರುವ ಅವಧಿ, ಮಿತಿಗೊಳಿಸಿರುವ ಅಂಶಗಳು, ಮಿತಿಗೊಳಿಸಿರುವ ಕಾರಣ, ಪರ್ಯಾಯ ಕಲಿಕೆಗೆ ಸೂಚನೆಗಳು ಎಲ್ಲ ಮಾಹಿತಿಯನ್ನು ನೀಡಿದೆ. ಆ ಪ್ರಕಾರವಾಗಿ ಮೈಸೂರು ರಾಜ್ಯದ ಟಿಪ್ಪು ಸುಲ್ತಾನ್ ಪಠ್ಯವನ್ನು 7ನೇ ತರಗತಿಯಲ್ಲಿ ಕಡಿತ ಮಾಡಲಾಗಿದ್ದು, 6 ಮತ್ತು 10ನೇ ತರಗತಿಯಲ್ಲಿ ಉಳಿಸಿಕೊಳ್ಳಲಾಗಿದೆ. 1ರಿಂದ 10ನೇ ತರಗತಿವರೆಗೆ ಒಂದು ಪಾಠವನ್ನು ಒಂದು ಬಾರಿ ಮಾತ್ರ ಓದುವಂತೆ ನೋಡಿಕೊಳ್ಳಲಾಗಿದೆ.

    ವರದಿಗೆ ವಿರುದ್ಧ: ಮೊದಲಿನಿಂದಲೂ ಟಿಪು್ಪ ಪಠ್ಯದ ಬಗ್ಗೆ ಪರ ವಿರೋಧಗಳು ಚರ್ಚೆ ನಡೆಯುತ್ತಲೇ ಇದ್ದವು. ಆನಂತರ ಸರ್ಕಾರ ಸಮಿತಿ ರಚನೆ ಮಾಡಿತ್ತು. ಸಮಿತಿಯು ಸರ್ಕಾರಕ್ಕೆ ್ಞೕಡಿದ ವರದಿಯಲ್ಲಿ ಪಠ್ಯ ಉಳಿಸಿಕೊಳ್ಳುವುದು ಸೂಕ್ತ ಎಂದು ಹೇಳಿತ್ತು. ಇದನ್ನು ಸರ್ಕಾರ ಸಹ ಒಪ್ಪಿಕೊಂಡಿತ್ತು.

    ಕಡಿತ ಮಾಡಿರುವ ಪ್ರಮುಖ ಪಠ್ಯಗಳು: ದಲಿತ ಚಳವಳಿ, ಕರ್ನಾಟಕ ವಿಮೋಚನಾ ಚಳವಳಿ, ಪಂಚಾಯತ್ ರಾಜ್ ಕಾಯ್ದೆ, ಊಳಿಗಮಾನ್ಯ ಪದ್ಧತಿ.

    ಸೆಪ್ಟಂಬರ್​ನಲ್ಲಿ ಶಾಲೆ ಆರಂಭಿಸಿ ಏಪ್ರಿಲ್ ನಲ್ಲಿ ಪರೀಕ್ಷೆ ಮಾಡಿದರೂ ಸಾಕಷ್ಟು ಶಾಲಾ ಅವಧಿ ದೊರೆಯುತ್ತದೆ. ಅನವಶ್ಯಕವಾಗಿ ಏಕೆ ಮುಖ್ಯ ವಿಷಯಗಳನ್ನು ಕಡಿತ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ.

    |ವಿ.ಪಿ.ನಿರಂಜನಾರಾಧ್ಯ ಶಿಕ್ಷಣ ತಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts