More

    ಬೆಂಗಳೂರು ನಿವಾಸಿಗಳೇ, ನಿಮ್ಮ ವಾಟ್ಸ್​​ಆ್ಯಪ್​ಗೆ ಈ ಮೆಸೇಜ್​ ಬಂದಿದೆಯಾ? ಒಮ್ಮೆ ಈ ಸುದ್ದಿಯನ್ನು ಓದಿಕೊಂಡು ಬಿಡಿ..ಸುಮ್ಮನೆ ಯಾಮಾರಬೇಡಿ…

    “ಬೆಂಗಳೂರು ನಿವಾಸಿಗಳಲ್ಲಿ ಒಂದು ಮನವಿ, ಇಂದು (ಮಾರ್ಚ್​ 18) ರಾತ್ರಿ 10 ಗಂಟೆಯ ನಂತರ, ನಾಳೆ ಮುಂಜಾನೆ 5ಗಂಟೆವರೆಗೆ ಯಾರೂ ಮನೆಗಳಿಂದ ಹೊರಗೆ ಬರಬೇಡಿ. ಕರೊನಾ ವೈರಸ್​ ನಿರ್ಮೂಲನೆಗಾಗಿ ಇಡೀ ಬೆಂಗಳೂರಿನಲ್ಲಿ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಹಾಗಾಗಿ ಎಲ್ಲರೂ ಮನೆಯೊಳಗೇ ಇರಿ… ಈ ಮಾಹಿತಿಯನ್ನು ಸಾಧ್ಯವಾದಷ್ಟು ಶೇರ್​ ಮಾಡಿ, ಬೆಂಗಳೂರು ನಿವಾಸಿಗಳಿಗೆ ತಿಳಿಸಿ…. ”
    (Hello, every one in Bangalore: It is a request not to come out of your house after 10 pm tonight till tomorrow 5 am…. As their will be spraying medicine in the air in order to kill the COVID-19!! Share this information to all your friends,relatives and your families only in Bangalore…
    Thank you!)

    ಈ ಮೆಸೇಜ್​ ನಿಮ್ಮ ವಾಟ್ಸ್​​ಆ್ಯಪ್​ಗೆ ಬಂದಿದ್ದರೆ, ನೀವು ಫೇಸ್​ಬುಕ್​, ಟ್ವಿಟರ್​ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಓದಿದ್ದರೆ ದಯವಿಟ್ಟು ಅದನ್ನು ನಂಬಬೇಡಿ. ಯಾಕೆಂದರೆ ಇದು ಅಕ್ಷರಶಃ ಸುಳ್ಳು.

    ಇದು ಬಿಬಿಎಂಪಿಯಿಂದಾಗಲೀ, ಸರ್ಕಾರದಿಂದಾಗಲೀ ಬಂದ ಅಧಿಕೃತ ಮಾಹಿತಿ ಅಲ್ಲ. ಬೇರೆ ಯಾರೋ ಕರೊನಾ ವೈರಸ್​ ಹೆಸರಲ್ಲಿ ರೂಮರ್​ ಹಬ್ಬಿಸುತ್ತಿದ್ದಾರೆ. ವಾಟ್ಸ್​ಆ್ಯಪ್​ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈರಲ್ ಆಗುತ್ತಿರುವ ಈ ಮೆಸೇಜ್​ ಬಗ್ಗೆ ಬಿಬಿಎಂಪಿ ಮೇಯರ್​ ಗೌತಮ್​ ಕುಮಾರ್ ಜೈನ್​ ಅವರೇ ಸ್ಪಷ್ಟನೆ ನೀಡಿದ್ದಾರೆ. ಇಂತಹ ಸೂಚನೆಗಳನ್ನು ನಾವು ಕೊಟ್ಟಿಲ್ಲ ಎಂದು ಫೇಸ್​ಬುಕ್​, ಟ್ವಿಟರ್​ನಲ್ಲಿ ಪೋಸ್ಟ್ ಹಾಕಿದ್ದಾರೆ.

    ಬಿಬಿಎಂಪಿ ಬೆಂಗಳೂರು ನಗರದಲ್ಲಿ ರಾತ್ರಿ 10 ಗಂಟೆ ನಂತರ ಯಾವುದೇ ಔಷಧಿಯನ್ನೂ ಸಿಂಪಡಿಸುತ್ತಿಲ್ಲ. ಹೊರಗೆ ಬರಬೇಡಿ ಎಂಬಂತಹ ಸೂಚನೆಗಳನ್ನು ಪಾಲಿಕೆ ನೀಡಿಲ್ಲ. ವದಂತಿಗಳನ್ನು ನಂಬಬೇಡಿ. ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಗೆ 104ಕ್ಕೆ ಕರೆ ಮಾಡಿ. ನಿಮಗೆಲ್ಲ ಸಹಾಯ ಮಾಡಲು ನಮಗೆ ನೀವು ಸಹಕರಿಸಿ..ಎಂದು ಬಿಬಿಎಂಪಿ ಮೇಯರ್​ ಗೌತಮ್​ ಕುಮಾರ್​ ಹೇಳಿದ್ದಾರೆ.

    ಇನ್ನು ಬಿಬಿಎಂಪಿ ಆಯುಕ್ತ ಬಿ.ಎಚ್​.ಅನಿಲ್ ಕುಮಾರ್​ ಅವರೂ ಸಹ ಟ್ವೀಟ್ ಮಾಡಿದ್ದು, ನಾಗರಿಕರೇ ದಯವಿಟ್ಟು ವಾಟ್ಸ್​ಆ್ಯಪ್​ನಂತಹ ಸೋಷಿಯಲ್​ ಮೀಡಿಯಾಗಳಲ್ಲಿ ಹರಿದಾಡುವ ವದಂತಿಗಳಿಗೆ ಕಿವಿಗೊಡಬೇಡಿ. ಯಾವುದೇ ಔಷಧಿಗಳನ್ನು ಸಿಂಪಡಿಸಲು ಬಿಬಿಎಂಪಿ ಯೋಜನೆ ಹಾಕಿಕೊಂಡಿಲ್ಲ. ಸದ್ಯಕ್ಕೆ ರೂಮರ್​ಗಳಿಂದ ದೂರ ಉಳಿಯುವುದೇ ಒಂದು ಒಳ್ಳೆಯ ಔಷಧಿ ಎಂದಿದ್ದಾರೆ.

    ಬೆಂಗಳೂರು ನಿವಾಸಿಗಳೇ, ನಿಮ್ಮ ವಾಟ್ಸ್​​ಆ್ಯಪ್​ಗೆ ಈ ಮೆಸೇಜ್​ ಬಂದಿದೆಯಾ? ಒಮ್ಮೆ ಈ ಸುದ್ದಿಯನ್ನು ಓದಿಕೊಂಡು ಬಿಡಿ..ಸುಮ್ಮನೆ ಯಾಮಾರಬೇಡಿ...

    ಯೆಸ್​ ಬ್ಯಾಂಕ್​ ಗ್ರಾಹಕರಿಗೆ ಶುಭ ಸುದ್ದಿ; ಬ್ಯಾಂಕ್​ನ ಎಲ್ಲ ಸೇವೆಗಳೂ ಪ್ರಾರಂಭ, ಹಿರಿಯ ನಾಗರಿಕ ಗ್ರಾಹಕರಿಗೆ ಸಮಯ ಮಿತಿ ಹೆಚ್ಚಳ

    ಕರೊನಾದೊಂದಿಗೆ ಕಾಡುತ್ತಿವೆ ಇನ್ನೂ ಕೆಲವು ಕಾಯಿಲೆಗಳು; ಬೀದರ್​ನಲ್ಲಿ 20ಕ್ಕೂ ಅಧಿಕ ಮಂದಿಗೆ ಚಿಕೂನ್​ಗುನ್ಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts