More

    ಕರೊನಾದೊಂದಿಗೆ ಕಾಡುತ್ತಿವೆ ಇನ್ನೂ ಕೆಲವು ಕಾಯಿಲೆಗಳು; ಬೀದರ್​ನಲ್ಲಿ 20ಕ್ಕೂ ಅಧಿಕ ಮಂದಿಗೆ ಚಿಕೂನ್​ಗುನ್ಯಾ

    ಬೀದರ್​: ಸದ್ಯ ರಾಜ್ಯದಲ್ಲಿ ಜನರೆಲ್ಲ ಕರೊನಾ ವೈರಸ್ ಬಗ್ಗೆ ಹೆಚ್ಚಿನ ಗಮನ ವಹಿಸಿ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದರೊಂದಿಗೆ ಇನ್ನೂ ಕೆಲವು ಕಾಯಿಲೆಗಳು ವಕ್ಕರಿಸಿಕೊಂಡಿವೆ.

    ಒಂದೆಡೆ ಹಕ್ಕಿಜ್ವರ ದಾಂಗುಡಿ ಇಟ್ಟರೆ, ಮಲೆನಾಡು ಭಾಗದಲ್ಲಿ ಮಂಗನಕಾಯಿಲೆ ಜೀವ ಹಿಂಡುತ್ತಿದೆ. ಈ ಮಧ್ಯೆ ಬೀದರ್​ನಲ್ಲಿ ಚಿಕೂನ್​ ಗುನ್ಯಾ ವಕ್ಕರಿಸಿಕೊಂಡಿದೆ.

    ಬೀದರ್​ನ ಔರಾ ತಾಲೂಕಿನ ನಾಗೂರ ಗ್ರಾಮದಲ್ಲಿ ಸುಮಾರು 20 ಜನರಲ್ಲಿ ಚಿಕೂನ್​ ಗುನ್ಯಾ ಕಾಣಿಸಿಕೊಂಡಿದ್ದು, ಕೈಕಾಲು ನೋವು, ಜ್ವರ, ತಲೆನೋವಿನಿಂದ ಜನರು ಬಳಲುತ್ತಿದ್ದಾರೆ.

    ಸದ್ಯ ಸರ್ಕಾರ, ಆರೋಗ್ಯ ಇಲಾಖೆಗಳೆಲ್ಲ ಕರೊನಾ ನಿಯಂತ್ರಣ, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಲ್ಲಿ ಬಿಜಿಯಾಗಿದ್ದರೆ, ಮಧ್ಯದಲ್ಲಿ ಹಕ್ಕಿಜ್ವರ, ಮಂಗನಕಾಯಿಲೆ, ಚಿಕೂನ್​ಗುನ್ಯಾದಂತಹ ರೋಗಗಳು ಬಂದು ಆತಂಕ ಮೂಡಿಸಿವೆ. (ದಿಗ್ವಿಜಯ ನ್ಯೂಸ್​)

    ಸೆಂಟ್​ ಬಳಸುವವರ ಬಳಿಯಿದೆ ವಿಶೇಷ ಶಕ್ತಿ; ಅದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts