More

    ಸರ್ಕಾರ-ಆರ್‌ಬಿಐ ತಿಕ್ಕಾಟವಿಲ್ಲ

    ಉಡುಪಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ಇಲ್ಲ ಎಂದು ಆರ್‌ಬಿಐ ನಿರ್ದೇಶಕ ಸತೀಶ್ ಮರಾಠೆ ಹೇಳಿದರು.

    ಶನಿವಾರ ನಗರದಲ್ಲಿ ಮಾಧ್ಯಮ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಊಹಾಪೋಹಗಳು ಮಾಧ್ಯಮಗಳ ವೈಭ ವೀಕರಣ. ಆರ್‌ಬಿಐ ಬ್ರಿಟಿಷ್ ಸರ್ಕಾರದ ಕಾಲದಲ್ಲಿ ಸ್ಥಾಪನೆಯಾದ ವ್ಯವಸ್ಥೆ. ಇದು ಭಾರತ ಸರ್ಕಾರದ ಅಧೀನ ಸಂಸ್ಥೆ. ಇಲ್ಲಿ ಸಂಘರ್ಷ ಸಾಧ್ಯವೇ ಇಲ್ಲ, ಆರ್‌ಬಿಐಗೆ ಹೊಸ ದಿಕ್ಕನ್ನು ನೀಡಲಾಗುತ್ತಿದ್ದು, ಆಡಳಿತ ಯಂತ್ರದ ಬದಲಾವಣೆಗೆ ಪ್ರಯತ್ನ ನಡೆದಿದೆ ಎಂದರು.

    ದೇಶದಲ್ಲಿ ವಿತ್ತೀಯ ಸೇರ್ಪಡೆ ಪ್ರಕ್ರಿಯೆ ಮತ್ತಷ್ಟು ಆಗಬೇಕಿದ್ದು, ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದ ಭಾಗದಲ್ಲಿ ಸಣ್ಣ ಬ್ಯಾಂಕ್‌ಗಳು ಕಾರ್ಯ ನಿರ್ವಹಣೆ ಇನ್ನಷ್ಟು ಅಗತ್ಯವಾಗಿದೆ. ಭವಿಷ್ಯದಲ್ಲಿ ಆಹಾರ ಉತ್ಪಾದನೆ ವಲಯದಲ್ಲಿ ಅತ್ಯಧಿಕ ಬೇಡಿಕೆ ಸೃಷ್ಟಿಯಾಗಲಿದೆ. ಇದಕ್ಕೆ ಅನುಗುಣವಾಗಿ ಕೃಷಿ ಉತ್ಪನ್ನಗಳ ಸಮರ್ಥ ಬಳಕೆ ಆಗಬೇಕಿರುವುದು ನಮ್ಮ ಮುಂದಿನ ಸವಾಲು. ಸಹಕಾರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಷನ್ ಡಾಕ್ಯುಮೆಂಟ್ ಸಹ ರಚಿಸಲಾಗಿದೆ. ಇನ್ನು ಐದು ವರ್ಷಗಳಲ್ಲಿ ಭಾರತ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಜಗತ್ತಿನ ಗಮನ ಸೆಳೆಯಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts