More

    ಶವಸಂಸ್ಕಾರಕ್ಕೆ ಏನೂ ಸಮಸ್ಯೆ ಇಲ್ಲ, ಸುಡಲಿಕ್ಕೆ 4 ಎಕರೆ ಜಾಗದಲ್ಲಿ ವ್ಯವಸ್ಥೆ ಮಾಡಿದ್ದೇವೆ: ಸಚಿವ ವಿ. ಸೋಮಣ್ಣ

    ಕೊಡಗು: ಆಡಳಿತ ಪಕ್ಷ ಹಾಗೂ ಸರ್ಕಾರದ ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವ ವಿ.ಸೋಮಣ್ಣ, ಅವರ ಆರೋಪವನ್ನು ತಳ್ಳಿ ಹಾಕಿದ್ದಾರೆ. ಸರ್ಕಾರ ಸರಿಯಾಗಿ ಕೋವಿಡ್ ಪರಿಸ್ಥಿತಿ ನಿರ್ವಹಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಆದರೆ ಅವರು ಅಂದುಕೊಂಡ ಹಾಗೆ ನಾವಿಲ್ಲ, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದರು.

    ನಮಗೆ ಸಾಮಾನ್ಯ ಜನರ ಜೀವ ಮುಖ್ಯ. ಸಿದ್ದರಾಮಯ್ಯ ವಾಸ್ತವಾಂಶ ತಿಳಿದುಕೊಂಡು ಮಾತಾಡಲಿ. ಏನೋ ಒಂದು ಹೇಳಬೇಕು, ಅದಕ್ಕೆ ಹೇಳುತ್ತಾರೆ. ಆದರೆ ಇಂಥ ಸಂದರ್ಭದಲ್ಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು. ವಿರೋಧ ಪಕ್ಷ, ಆಡಳಿತ ಪಕ್ಷ ನಾಣ್ಯದ ಎರಡು ಮುಖಗಳ ಥರ ಕೆಲಸ ಮಾಡಬೇಕು. ಹಾಗಿದ್ದರೂ ವಿರೋಧ ಪಕ್ಷಗಳು ಅದನ್ನು ನಿಭಾಯಿಸುತ್ತಿಲ್ಲ ಎಂದಿರುವ ಸೋಮಣ್ಣ, ಪರಿಸ್ಥಿತಿ ನಿರ್ವಹಣೆಗೆ ಸಿದ್ದರಾಮಯ್ಯ ಸಲಹೆ ಕೊಡಲಿ, ಒಳ್ಳೆಯ ಸಲಹೆಗಳನ್ನು ಸ್ವೀಕರಿಸುತ್ತೇವೆ ಎಂದರು.

    ಇದನ್ನೂ ಓದಿ: ಕಸ ಹಾಕುವ ಜಾಗವೇ ಮಸಣ; ಹೆಣ ಸುಡಲು ಸ್ಥಳವಿಲ್ಲದೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ! 

    ರಾಜಧಾನಿಯಲ್ಲಿ ಶವಸಂಸ್ಕಾರಕ್ಕೆ ಸಮಸ್ಯೆ ಆಗಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ಬೆಂಗಳೂರಿನಲ್ಲಿ ಎಲ್ಲವೂ ಒಂದು ಹಂತಕ್ಕೆ ಬಂದು ನಿಂತಿದೆ. ನಾಲ್ಕು ಎಕರೆ ಜಾಗದಲ್ಲಿ ಸುಡುವುದಕ್ಕೆ ವ್ಯವಸ್ಥೆ ಮಾಡಿದ್ದೇವೆ. ಏಕಕಾಲಕ್ಕೆ 50 ಶವಗಳ ಸಂಸ್ಕಾರಕ್ಕೆ ಸ್ಥಳಾವಕಾಶ ಮಾಡಲಾಗಿದೆ ಎಂದು ವಸತಿ ಸಚಿವ ಸೋಮಣ್ಣ ಮಡಿಕೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

    ಉಸಿರುಗಟ್ಟಿ ನರಳಾಡಿದ ಕೋವಿಡ್​ ಸೋಂಕಿತ; ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಂಡ ಸಿಬ್ಬಂದಿ

    ಪ್ರಿಯಕರನನ್ನು ಹುಡುಕಿಕೊಂಡು ರಾತ್ರಿಯೇ ಆತನ ಮನೆಗೆ ಹೋದ ಪ್ರೇಯಸಿ; ಆ ನಂತರ ನಡೆದಿದ್ದಂತೂ ಬೆಚ್ಚಿಬೀಳಿಸುವಂಥದ್ದು!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts