More

    ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ

    ಕೋಲಾರ: ರಾಜ್ಯದ ಇತರ ಹಾಲು ಒಕ್ಕೂಟಗಳಲ್ಲಿ ಹಾಲಿನ ಬೆಲೆ ಕಡಿಮೆ ವಾಡಿದ್ದರೂ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ದರ ಇಳಿಕೆ ಇಲ್ಲ. ಈಗಿರುವ ಹಾಲಿನ ದರವನ್ನೇ ಮುಂದುವರಿಸುವುದಲ್ಲದೆ ಹಾಲು ಉತ್ಪಾದಕರಿಗೆ ಇತರ ಡೇರಿಗಳಿಗಿಂತ ಹೆಚ್ಚಿನ ಸೌಲಭ್ಯ ನೀಡಲಾಗುತ್ತಿದೆ ಎಂದು ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದ್ದಾರೆ.

    ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಾಲು ಉತ್ಪಾದಕರಿಗೆ ಪ್ರತಿ ಲೀ. ಹಾಲಿಗೆ ರೂ.34.40 ಗಳಂತೆ ದರ ಪಾವತಿಸಿ ರಾಜ್ಯ ಸರ್ಕಾರದ ಪ್ರೋತ್ಸಾಹಧನ 5 ರೂ. ಸೇರಿ ಒಟ್ಟು 39.40 ರೂಪಾಯಿ ಪಾವತಿ ವಾಡಲಾಗುತ್ತಿದೆ. ಅತಿ ಹೆಚ್ಚು ದರ ಪಾವತಿ ವಾಡುತ್ತಿರುವ ಒಕ್ಕೂಟಗಳಲ್ಲಿ ಕೋಲಾರ ಒಕ್ಕೂಟವೂ ಒಂದಾಗಿದೆ ಎಂದರು. ಜಿಲ್ಲೆಯಲ್ಲಿರುವ ಭೀಕರ ಬರಗಾಲದಲ್ಲಿಯೂ 1,928 ಪ್ರಾಥಮಿಕ ಹಾಲು ಉತ್ಪಾದಕ ಸಹಕಾರ ಸಂಗಳಿಂದ ದಿನವಹಿ ಸರಾಸರಿ 10 ಲಕ್ಷ ಲೀಟರ್.ಗೂ ಮೇಲ್ಪಟ್ಟು ಹಾಲು ಶೇಖರಣೆಯಾಗುತ್ತಿದೆ. ಕಳೆದ ಸಾಲಿಗೆ ಹೋಲಿಸಿದಾಗ ಶೇ.8.5 ಪ್ರಗತಿ ಕಂಡುಬಂದಿದೆ. ಅವಳಿ ಜಿಲ್ಲೆಯ ರೈತರ ಜೀವನಾಡಿಯಾಗಿ ಕೆಲಸ ನಿರ್ವಹಿಸುವಲ್ಲಿ ಒಕ್ಕೂಟವು ಪ್ರಮುಖ ಪಾತ್ರವಹಿಸುತ್ತಿದೆ ಎಂದರು.
    ತಾಂತ್ರಿಕ ಸೌಲಭ್ಯ
    ಹೈನೋದ್ಯಮದಲ್ಲಿ ತೊಡಗಿರುವ ರೈತಾಪಿ ವರ್ಗದವರಿಗೆ ಕಾಲಕಾಲಕ್ಕೆ ಅವಶ್ಯವಿರುವ ತಾಂತ್ರಿಕ ಸೌಲಭ್ಯಗಳನ್ನು ನೀಡುವಲ್ಲಿ ಒಕ್ಕೂಟ ಮುಂಚೂಣಿಯಲ್ಲಿದೆ. ಪ್ರಸ್ತುತ ಬರಗಾಲ ಪರಿಸ್ಥಿತಿಯಲ್ಲಿ ರಾಸುಗಳಿಗೆ ಮೇವಿನ ಕೊರತೆ ನೀಗಿಸಲು ಯೋಜನೆಗಳನ್ನು ರೂಪಿಸಿ ನೀರಾವರಿ ಹೊಂದಿರುವ ರೈತರಿಗೆ ಶೇ.50 ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ಪ್ರತಿ ಎಕರೆಗೆ 3,000 ರೂ.ಗಳ ಪ್ರೋತ್ಸಾಹಧನ ಪಾವತಿಸುವ ರಾಜ್ಯದ ಏಕೈಕ ಒಕ್ಕೂಟ ಇದಾಗಿದೆ ಎಂದರು.
    ಈಗಾಗಲೇ 2,000 ಎಕರೆಗೆ ಬಹುವಾರ್ಷಿಕ ಮೇವಿನ ಬೆಳೆ ಬೀಜಗಳನ್ನು ಮತ್ತು ಸೂಪರ್ ನೇಪಿಯರ್ ಹುಲ್ಲಿನ ಕಡ್ಡಿಗಳನ್ನು ವಿತರಿಸಲಾಗಿದೆ. ರಸಮೇವು ಟಕಗಳ ನಿರ್ವಾಣಕ್ಕೆ ಪ್ರತಿ ಟಕಕ್ಕೆ 15,000 ರೂ.ಗಳ ಅನುದಾನ ಹಾಗೂ ಶೇ.50ರ ರಿಯಾಯಿತಿ ದರದಲ್ಲಿ ರಸಮೇವು ಚೀಲಗಳನ್ನು ವಿತರಣೆ ವಾಡಲಾಗುತ್ತಿದೆ. ಶೇ.50ರ ರಿಯಾಯಿತಿ ದರದಲ್ಲಿ 20,000 ರಾಸುಗಳಿಗೆ ರಬ್ಬರ್ ವ್ಯಾಟ್, ಹೈನುಗಾರರಿಗೆ 650 ಮೇವು ಕತ್ತರಿಸುವ ಯಂತ್ರಗಳು ಮತ್ತು 850 ಹಾಲು ಕರೆಯುವ ಯಂತ್ರಗಳನ್ನು ವಿತರಿಸಲು ಕ್ರಮಜರುಗಿಸಲಾಗುತ್ತಿದೆ ಎಂದರು.
    ಒಕ್ಕೂಟದ ವ್ಯಾಪ್ತಿಯಲ್ಲಿ 370 ಬಿ.ಎಂ.ಸಿ. ಟಕಗಳನ್ನು ಅಳವಡಿಸಲಾಗಿದೆ. ಪ್ರಸ್ತುತ 10 ಲಕ್ಷ ಲೀ.ಹಾಲನ್ನು ಬಿ.ಎಂ.ಸಿ. ಮುಖೇನ ಶೇಖರಣೆ ವಾಡಿ ಸರಬರಾಜು ವಾಡಲಾಗುತ್ತ್ತಿದೆ. ಬಿಎಂಸಿ ಟಕಗಳ ಸಿವಿಲ್ ಕಾಮಗಾರಿಗಾಗಿ ಪ್ರತಿ ಸಂಕ್ಕೆ 1 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಡಿಸೇಲ್ ಮತ್ತು ವಿದ್ಯುತ್ ವೆಚ್ಚಗಳನ್ನು ಕಡಿತಗೊಳಿಸುವ ಸಲುವಾಗಿ ಒಕ್ಕೂಟ ಮತ್ತು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಗಳ ಸಹಯೋಗದೊಂದಿಗೆ ರಾಜ್ಯದಲ್ಲೇ ಪ್ರಪ್ರಥಮವಾಗಿ 10 ಕಿ.ವಾಟ್ ಸಾಮರ್ಥ್ಯದ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲು ಕ್ರಮವಹಿಸಲಾಗಿದೆ. ಒಕ್ಕೂಟದ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಗಳ ನೂತನ ಕಟ್ಟಡ ನಿರ್ವಾಣಕ್ಕೆ 3 ಲಕ್ಷ ರೂ.ಗಳ ಅನುದಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
    ಒಕ್ಕೂಟದ ಹೊಸ ಯೋಜನೆಗಳು
    ಕೋಮುಲ್ ಡೇರಿ ಆವರಣದಲ್ಲಿ ನೂತನವಾಗಿ 200 ಕೋಟಿ ರೂ. ವೆಚ್ಚದಲ್ಲಿ ಎಂ.ವಿ.ಕೆ. ಗೋಲ್ಡನ್ ಡೇರಿ ನಿರ್ವಾಣ ಕಾಮಗಾರಿ ಪ್ರಗತಿಯಲ್ಲಿದೆ. ಒಕ್ಕೂಟದ ಮುಖ್ಯಡೇರಿಯ ವಿದ್ಯುತ್ ವೆಚ್ಚಗಳನ್ನು ಕಡಿತ ವಾಡುವ ನಿಟ್ಟಿನಲ್ಲಿ ಹೊಳಲಿ ಗ್ರಾಮದಲ್ಲಿ ರಾಜ್ಯಸರ್ಕಾರವು ಒಕ್ಕೂಟಕ್ಕೆ ಮಂಜೂರು ವಾಡಿರುವ 50 ಎಕರೆ ಜಾಗದಲ್ಲಿ 60 ಕೋಟಿ ರೂ. ವೆಚ್ಚದಲ್ಲಿ 12 ಮೆಗಾ ವಾಟ್ ಸಾಮರ್ಥ್ಯದ ಸೋಲಾರ್ ಪ್ಯಾನಲ್ ಅಳವಡಿಕೆ ಕಾರ್ಯಕ್ಕೆ ಡಿಪಿಆರ್ ತಯಾರಾಗಿದ್ದು, ಶ್ರೀ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಚಿಂತಾಮಣಿ ಶೀತಲ ಕೇಂದ್ರದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಐಸ್‌ಕ್ರೀಮ್ ಟಕ ನಿರ್ವಾಣ ವಾಡಲು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ನಂಜೇಗೌಡ ತಿಳಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts