More

    ರಾಜ್ಯದಲ್ಲಿ ಪ್ರತಿನಿತ್ಯ 2 ಸಾವಿರ ಮೆವಾ ವಿದ್ಯುತ್ ಕೊರತೆ

    ಬೆಂಗಳೂರು:
    ರಾಜ್ಯದಲ್ಲಿ ಪವನ ವಿದ್ಯುತ್ ಮತ್ತು ಸೋಲಾರ್ ವಿದ್ಯುತ್ ಉತ್ಪಾದನೆ ತೀವ್ರವಾಗಿ ಕುಸಿದಿರುವುದರಿಂದ ವಿದ್ಯುತ್ ಬೇಡಿಕೆ ನಿಭಾಯಿಸಲು ಇಂಧನ ಇಲಾಖೆ ಹರಸಾಹಸ ಮಾಡುತ್ತಿದೆ.
    ಹವಮಾನ ವೈಪರಿತ್ಯದಿಂದ ಬೇಡಿಕೆಯಲ್ಲಿ ಸರಾಸರಿ 2 ಸಾವಿರ ಮೆವಾ ಕೊರತೆ ಎದುರಾಗಿದ್ದು, ಇದನ್ನು ನಿಭಾಯಿಸಲು ಪವರ್ ಕಟ್ ಅನಿವಾರ್ಯವಾಗಿದೆ. ರೈತರಿಗೆ 7 ಗಂಟೆ ವಿದ್ಯುತ್ ಬದಲಿಗೆ 2 ಗಂಟೆ ಕಡಿತ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಆಗಾಗ್ಗೆ ವಿದ್ಯುತ್ ವ್ಯತ್ಯಯ ಮಾಡಲಾಗುತ್ತಿದೆ.
    ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ತುರ್ತು ಕ್ರಮ ಕೈಗೊಂಡಿರುವ ಇಂಧನ ಇಲಾಖೆ ಹಲವು ಉಪಕ್ರಮಗಳನ್ನು ೋಷಿಸಿದೆ.
    ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಭಿತನ ಸಾಧಿಸಿದ ರಾಜ್ಯಕ್ಕೆ ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಜಲ ವಿದ್ಯುತ್‌ನಿಂದ ವಾರ್ಷಿಕ 3 ಸಾವಿರ ದಶಲಕ್ಷ ಯುನಿಟ್ ವಿದ್ಯುತ್ ಕೊರತೆ ಬಾದಿಸುತ್ತಿದೆ.
    ಕಳೆದ ವರ್ಷ 12 ಸಾವಿರ ಮೆವಾ ವಿದ್ಯುತ್ ಬೇಡಿಕೆಯೇ ಗರಿಷ್ಠವಾಗಿತ್ತು. ಆದರೆ, ಈ ವರ್ಷ ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ವಿದ್ಯುತ್ ಬೇಡಿಕೆ 16 ಸಾವಿರ ಮೆವಾ ದಾಟಿ ಹೋಗಿರುವುದು ಸಮಸ್ಯೆಗೆ ಮೂಲ ಕಾರಣ. ಬೇಸಿಗೆಯಲ್ಲಿದ್ದು ವಿದ್ಯುತ್ ಬೇಡಿಕೆ, ಮಳೆಗಾಲದಲ್ಲಿಯೇ ಬಂದಿರುವುದು ರಾಜ್ಯಕ್ಕೆ ದೊಡ್ಡ ಸವಾಲಾಗಿದೆ.

    ಬೇಡಿಕೆ ಹೆಚ್ಚಲು ಕಾರಣವೇನು?
    ಸಕಲಾದಲ್ಲಿ ಮಳೆ ಬೀಳದ ಕಾರಣ ರೈತರು ಹೆಚ್ಚಾಗಿ ಪಂಪ್‌ಸೆಟ್ ಬಳಸಲಾರಂಭಿಸಿದ್ದಾರೆ. ಆ ಕಾರಣದಿಂದ ವಿದ್ಯುತ್ ಬೇಡಿಕೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಇಂದನ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

    ಪವನ ಮತ್ತು ಸೋಲಾರ್ ವಿದ್ಯುತ್
    ವಿದ್ಯುತ್ ಉತ್ಪಾದನೆಯಲ್ಲಿ ಪವನ ವಿದ್ಯುತ್ ಪಾಲು ಶೇ.17ರಷ್ಟು (5250 ಮೆವಾ)ಇದ್ದರೆ, ಸೋಲಾರ್ ವಿದ್ಯುತ್ ಶೇ.25ರಷ್ಟು (8073 ಮೆವಾ)ಉತ್ಪಾದನೆ ಸಾಮರ್ಥ್ಯವನ್ನು ಹೊಂದಿದೆ. ಶೇ.42ರಷ್ಟು ಪ್ರಮಾಣ ವಿದ್ಯುತ್ ಈ ಎರಡು ಮೂಲಗಳಿಂದಲೇ ರಾಜ್ಯಕ್ಕೆ ಲಭ್ಯವಾಗುತಿತ್ತು. ಪವನ ವಿದ್ಯುತ್‌ನಿಂದ ಲಭ್ಯವಾಗುತ್ತಿರುವುದು 500 ಮೆವಾ ಮಾತ್ರ. ಸೋಲಾರ್ ವಿದ್ಯುತ್ ಸಮಸ್ಯೆಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ.

    ಜಲ ಮತ್ತು ಉಷ್ಣ ವಿದ್ಯುತ್
    ಜಲಾಶಯಗಳು ಭರ್ತಿಯಾಗಿದ್ದರೆ ಈ ಪ್ರಮಾಣದಲ್ಲಿ ವಿದ್ಯುತ್ ಸಮಸ್ಯೆ ಬಾದಿಸುತ್ತಿರಲಿಲ್ಲ. ಅಗ್ಗದ ದರದಲ್ಲಿ ವಿದ್ಯುತ್ ಲಭ್ಯವಾಗುತ್ತಿತ್ತು. ಬಹುತೇಕ ಎಲ್ಲಾ ಜಲಾಶಯಗಳು ಶೇ.50ರಷ್ಟು ತುಂಬದೆ ಸಮಸ್ಯೆಯಾಗಿದೆ. ಇನ್ನು ಉಷ್ಣ ವಿದ್ಯುತ್‌ಗೆ ಕಲ್ಲಿದ್ದಿಲಿನ ಕೊರತೆ ಬಾದಿಸುತ್ತಲೇ ಇದೆ. ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಪಡೆಯಲು ಕೇಂದ್ರದ ಅನುಮತಿ ಸಿಕ್ಕಿಲ್ಲ. ಇರುವ ಕಲ್ಲಿದ್ದಲು ಸರಬರಾಜಿನಲ್ಲಿಯೇ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ.

    ಪರಿಸ್ಥಿತಿ ನಿಭಾಯಿಸಲು
    ಹಲವು ಉಪಕ್ರಮಗಳು

    *ಪ್ರತಿದಿನ ನಿರಂತರವಾಗಿ ಹೆಚ್ಚಾಗುತ್ತಿರುವ ಬೇಡಿಕೆಯನ್ನು ಸರಿದೂಗಿಸಲು ಈಅ ಮತ್ತು ್ಕ ವಿದ್ಯುತ್ ಖರೀದಿ ಮಾಡಲು ಕ್ರಮ ಕೈಗೊಂಡಿದೆ.
    *ಉತ್ತರ ಪ್ರದೇಶದಿಂದ ಪ್ರತಿನಿತ್ಯ ಸ್ವಾಪಿಂಗ್ ಮೂಲಕ 300 ರಿಂದ 600 ಮೆವಾ ವಿದ್ಯುತ್ ಪಡೆಯಲು ಮಾತುಕತೆ ನಡೆಸಲಾಗಿದೆ. ಅ.23ರಿಂದ ಮೇ24 ತನಕ ಈ ವಿದ್ಯುತ್ ಪಡೆಯಲಾಗುವುದು. ಈ ರೀತಿ ಪಡೆದ ವಿದ್ಯುತ್‌ನ್ನು ಮುಂದಿನ ಜೂನ್ 24ರಿಂದ ಸೆ.24 ರೊಳಗೆ ಹಿಂದಿರುಗಿಸಲು ಒಡಂಬಡಿಕೆ ನಡೆದಿದೆ.
    *ವಿದ್ಯುತ್ ಖರೀದಿ ಮಾಡಲು ಕೆಇಆರ್‌ಸಿಯಿಂದಅನುಮತಿಯನ್ನು ಪಡೆದಿದ್ದು, ಇಅ ಆಧಾರದ ಮೇಲೆ ಅಲ್ಪಾವಧಿ ಟೆಂಡರ್ ಕಡೆಯಲು ಕ್ರಮ ವಹಿಸಲಾಗಿದೆ. 1250 ಮೆವಾ ವಿದ್ಯುತ್‌ನ್ನು ್ಕಇ ಆಧಾರದ ಮೇಲೆ, 250 ಮೆವಾ ವಿದ್ಯುತ್‌ನ್ನು ್ಕ ಆಧಾರದ ಮೇಲೆ ಖರೀದಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.

    • ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಕಾರಣ ಮಿತವಾಗಿ ಜೂನ್ ತನಕ ಬಳಕೆ ಮಾಡಬೇಕಾಗಿದೆ. ಆದ್ದರಿಂದ 14 ದಶಲಕ್ಷ ಯುನಿಟ್ ಗಿಂತಲೂ ಕಡಿಮೆ ಉತ್ಪಾದನೆ ಮಾಡುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೆಕ್ಷನ್ 11 ಆದೇಶ ಹೊರಡಿಸಿದ್ದು, ಎಲ್ಲಾ ಮೂಲಗಳಿಂದ ಬರುವ ವಿದ್ಯುತ್ ಘಟಕಗಳ ಉತ್ಪಾದನೆಯನ್ನು ರಾಜ್ಯದ ಬೇಡಿಕೆ ನೀಗಿಸಿಕೊಳ್ಳಲು ಕ್ರಮ ವಹಿಸಲಾಗಿದೆ.

    *ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಬೇಡಿಕೆ ನಿರ್ವಹಣೆಗಾಗಿ ಎಸ್ಕಾಂಗಳ ಎಂಡಿಗಳ ಸಮನ್ವಯದೊಂದಿಗೆ ಪ್ರತಿ ಜಿಲ್ಲೆಯಲ್ಲಿ ವಿದ್ಯುತ್ ಸರಬರಾಜನ್ನು ಮೇಲ್ವಿಚಾರಣೆ ಮಾಡಲು ಪ್ರತಿ ಜಿಲ್ಲೆಗೆ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೇಣಿಯ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ನೋಡಲ್ ಅಧಿಕಾರಿಗಳು 220 ಕೆವಿ ಮತ್ತು ಅದರ ಡೌನ್ಸ್ಟ್ರೀಮ್ ಸ್ಟೇಷನ್‌ಗಳಿಗೆ ನಿಗದಿಪಡಿಸಿದ ವಿದ್ಯುತ್ ಸರಬರಾಜನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲಾ ವರ್ಗದ ಗ್ರಾಹಕರಿಗೆ ಸಮಾನ ವಿದ್ಯುತ್ ಪೂರೈಕೆಯನ್ನು ಒದಗಿಸಲಾಗಿದೆಯೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲಿದ್ದಾರೆ.
    ಗೌರವ್ ಗುಪ್ತ,ಐಎಎಸ್, ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ

    *ಈಇಇ ಕೇಂದ್ರಗಳು ಖಔಈಇ ಸಹಕಾರದೊಂದಿಗೆ ಈಗ ತಲೆದೋರಿರುವ ಬಿಕ್ಕಟ್ಟುನ್ನು ಬಗೆಹರಿಸಿ, ಗ್ರಾಹಕರಿಗೆ ವಿದ್ಯುತ್ ಸರಬರಾಜು ಖಚಿತಪಡಿಸಲು ಕ್ರಮವಿಡಲಾಗಿದೆ. ಅನಿವಾರ್ಯವಲ್ಲದೆ ಲೋಡ್‌ಗಳನ್ನು ಸೂಕ್ಷ್ಮ ಮಾಹಿತಿಯೊಂದಿಗೆ ಕಡಿಮೆ ಮಾಡುವುದು, ರೈತರಿಗೆ ಅಡಚಣೆ ಆಗದಂತೆ ವಿದ್ಯುತ್ ಸರಬರಾಜು ಮಾಡಲು ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts