More

    ನನ್ನಿಂದ ಯಾರಿಗೂ ಮೋಸ ಆಗಲ್ಲ, ದಯವಿಟ್ಟು ನನ್ನ ನಂಬಿ ಎಂದು ಗೋಗರೆದವ ಕಿಡ್ನಿಯನ್ನೇ ಮಾರಾಟಕ್ಕಿಟ್ಟ!

    ಬೆಂಗಳೂರು: ಭ್ರಷ್ಟಾಚಾರ, ಮೋಸ, ವಂಚನೆ, ಸುಲಿಗೆಕೋರರಿಂದ ನಲುಗುತ್ತಿರುವ ಈ ಸಮಾಜದಲ್ಲಿ ಅವಿವಾಹಿತ ಯುವಕನೊಬ್ಬ, ಮನೆ ಕಟ್ಟಲೆಂದು ಎರಡು ಬ್ಯಾಂಕಿನಲ್ಲಿ ಮಾಡಿದ್ದ ಸುಮಾರು 12 ಲಕ್ಷ ರೂ.ಅನ್ನು ಹೇಗಾದರೂ ಮಾಡಿ ತೀರಿಸುತ್ತೇನೆ. ನಾನೀಗ ಕೆಲಸ ಕಳೆದುಕೊಂಡು, ಅನಾರೋಗ್ಯಕ್ಕೀಡಾಗಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದೇನೆ. ತಾಯಿಯ ಆರೋಗ್ಯವೂ ಸರಿ ಇಲ್ಲ. ಬದುಕು ಸಾಗಿಸುವುದೇ ಕಷ್ಟವಾಗಿದೆ. ನನಗೆ ಇಂತಹ ಪರಿಸ್ಥಿತಿ ಬರುತ್ತೆ ಎಂದು ಕನಸಲ್ಲೂ ಎಣಿಸಿರಲಿಲ್ಲ. ನನ್ನಿಂದ ಯಾರಿಗೂ ಮೋಸ ಆಗಲ್ಲ. ದಯವಿಟ್ಟು ಕಾಲಾವಕಾಶ ಕೊಡಿ ಕೆಲಸ ಗಿಟ್ಟಿಸಿಕೊಂಡು ಸಾಲ ತೀರಿಸುತ್ತೇನೆ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾನೆ.

    ಕಷ್ಟ ಹೇಳಿಕೊಂಡು ಸಹಾಯಕ್ಕಾಗಿ ಮನವಿ ಮಾಡುತ್ತಿರುವ ಯುವಕನ ಹೆಸರು ವಿಜಯ್​ ಕುಮಾರ್​ ವಿ. 30 ವರ್ಷದ ಈತ ಬೆಂಗಳೂರಿನ ಹಳೇಗುಡ್ಡದ ಹಳ್ಳಿ ಬಳಿಯ ಜನತಾ ಕಾಲನಿ ನಿವಾಸಿ. ಈತ ಕಳೆದ ದಿಸೆಂಬರ್​ 14ರಂದು ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೂ ಪತ್ರ ಬರೆದಿದ್ದ. ಇದೀಗ ವಿಜಯವಾಣಿ ಪತ್ರಿಕೆಗೂ ಪತ್ರ ಬರೆದಿದ್ದಾನೆ. ಅದರ ಪೂರ್ಣ ವಿವರ ಇಲ್ಲಿದೆ.

    ‘ಮನೆ ಕಟ್ಟಿಕೊಳ್ಳುವ ಉದ್ದೇಶದಿಂದ 2 ಬ್ಯಾಂಕ್​ಗಳಲ್ಲಿ (10-12ಲಕ್ಷ ರೂ.) ಕ್ರೆಡಿಟ್​ ಕಾರ್ಡ್​ ಮತ್ತು ವೈಯಕ್ತಿಕವಾಗಿ ಸಾಲ ಪಡೆದಿದ್ದೆ. ಆ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟವಾಯಿತು. ಈ ನಡುವೆ ಅನಾರೋಗ್ಯಕ್ಕೀಡಾದ ನಾನು ಕೆಲಸ ಬಿಡಬೇಕಾಯಿತು. ಕರೊನಾ ಸಂಕಷ್ಟ ಕಾಲದಲ್ಲಿ ಕೆಲಸವೇ ಸಿಗಲಿಲ್ಲ. ನಿರೋದ್ಯೋಗಿಯಾದ ನಾನು ಕೆಲಸಕ್ಕಾಗಿ ಅಲೆಯುತ್ತಿದ್ದೇನೆ. ನನ್ನ ಅಮ್ಮನಿಗೆ ಥೈರಾಯಿಡ್​ ಇದೆ. ನಮಗೆ ಬೇರೆ ಆದಾಯದ ಮೂಲಗಳಿಲ್ಲ. ಸಾಲ ಕಟ್ಟುವಂತೆ ಬ್ಯಾಂಕ್​ನಿಂದ ಕರೆಗಳು ಬರುತ್ತಲೇ ಇದೆ. ನಾನು ಸಮಯ ಕೇಳುತ್ತಿದ್ದೇನೆ. ಈ ಬಗ್ಗೆ ರಾಷ್ಟ್ರಪತಿ ಅವರಲ್ಲಿ ಕ್ಷಮೆ ಕೋರಿ ಸಹಾಯ ಮಾಡುವಂತೆ ಪತ್ರ ಬರೆದಿದ್ದೆ. ಇದನ್ನು ಪರಿಶೀಲಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ರಾಷ್ಟ್ರಪತಿ ಕಚೇರಿ ಪತ್ರ ಬಂದಿದ್ದು, ರಾಜ್ಯ ಸರ್ಕಾರದಿಂದ ಯಾವುದೇ ಪ್ರಯೋಜನ ಸಿಗಲಿಲ್ಲ’ ಎಂದು ವಿಜಯ್​ ಕುಮಾರ್​ ಹೇಳಿದ್ದಾರೆ. ಇದನ್ನೂ ಓದಿರಿ Video| ಬಿಜೆಪಿ ಮುಖಂಡನ ಬರ್ತ್ ​ಡೇ ಪಾರ್ಟಿಯಲ್ಲಿ ಜನರತ್ತ ಕಂತೆಕಂತೆ ಹಣ ಚೆಲ್ಲಿದ್ರು! ಈ ದೃಶ್ಯ ನೋಡಿದ್ರೆ ಸಿಟ್ಟಿಗೇಳ್ತೀರಿ

    ‘ನಾನೀಗ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನಮ್ಮ ಕ್ಷೇತ್ರದ ಸಂಸದರು ಮತ್ತು ಶಾಸಕರ ಬಳಿ ಸಹಾಯ ಕೇಳಲು ಪ್ರಯತ್ನಿಸಿದೆ. ಅದೂ ಸಾಧ್ಯವಾಗಲಿಲ್ಲ. ಕೊನೆಗೆ ನನ್ನ ಕಿಡ್ನಿ ಮಾರಿಯಾದರೂ ಸಾಲ ತೀರಿಸಬೇಕೆಂದು ನಿರ್ಧರಿಸಿದ್ದೇನೆ. ನನ್ನಿಂದ ಯಾರಿಗಾದರೂ ತೊಂದರೆ ಆಗಿದ್ದರೆ ಕ್ಷಮಿಸಿ. ಈ ಸಮಸ್ಯೆಯಿಂದ ಹೊರಬರಲು ಸಲಹೆ ಕೊಟ್ಟು ಸಹಾಯ ಮಾಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ. (ವಿಜಯ್​ ಕುಮಾರ್​ ಅವರ ಮೊಬೈಲ್​ ನಂಬರ್​: 78922 62406/ 80953 27740)

    Video| ಬಿಜೆಪಿ ಮುಖಂಡನ ಬರ್ತ್ ​ಡೇ ಪಾರ್ಟಿಯಲ್ಲಿ ಜನರತ್ತ ಕಂತೆಕಂತೆ ಹಣ ಚೆಲ್ಲಿದ್ರು! ಈ ದೃಶ್ಯ ನೋಡಿದ್ರೆ ಸಿಟ್ಟಿಗೇಳ್ತೀರಿ

    ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

    ಆಟವಾಡುತ್ತಲೇ ಸಾವಿನ ಹೊಂಡಕ್ಕೆ ಕಾಲಿಟ್ಟ ಮಕ್ಕಳಿಬ್ಬರು ಮರಳಿ ಬರಲೇ ಇಲ್ಲ! ಮುಗಿಲುಮುಟ್ಟಿದ ಆಕ್ರಂದನ

    ಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts