More

    ಮುನಿರತ್ನ ಸೇರ್ಪಡೆ ಪ್ರಶ್ನೆಯೇ ಬಂದಿಲ್ಲ

    ಬೆಂಗಳೂರು: ರಾಜರಾಜೇಶ್ವರಿನಗರದಲ್ಲಿ ನಮ್ಮ ಪಕ್ಷದ ನೆಲೆಗಟ್ಟಿದೆ. ಪಕ್ಷದ ಗೌರವ ಉಳಿಸುವ ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

    ಶಿರಾ ಮಾತ್ರವಲ್ಲದೆ ರಾಜರಾಜೇಶ್ವರಿನಗರ ಕ್ಷೇತ್ರವನ್ನೂ ಗಂಭೀರವಾಗಿ ಪರಿಗಣಿಸಿದ್ದೇವೆ. ಮುನಿರತ್ನ ಜೆಡಿಎಸ್ ಸೇರ್ಪಡೆ ಪ್ರಶ್ನೆಯೇ ಬಂದಿಲ್ಲ. ಆ ಬಗ್ಗೆ ಯಾರೂ ನನ್ನ ಜತೆ ಚರ್ಚೆ ಮಾಡಿಲ್ಲ. ನಮ್ಮ ಪಕ್ಷದಲ್ಲಿ ಮೂವರು ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ಒಬ್ಬರನ್ನು ಅಂತಿಮಗೊಳಿಸಲಾಗುವುದು. ಅವರು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಜೆಡಿಎಸ್​ನಲ್ಲಿ ಲೈಮ್ೈಟ್​ಗೆ ಬಂದವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಲ್ಕೆರೆ ರವಿ ಪತ್ನಿಗೆ 4 ವರ್ಷ ಜಿ.ಪಂ. ಅಧ್ಯಕ್ಷೆ ಸ್ಥಾನಮಾನ ಕೊಟ್ಟು ಬೆಳೆಸಿದ್ದು ನಾವು. ಈಗ ಅವರು ಕಾಂಗ್ರೆಸ್​ಗೆ ತಮ್ಮ ಸಾಮರ್ಥ್ಯ ಧಾರೆ ಎರೆಯಲು ಹೋಗಿದ್ದಾರೆ ಎಂದು ಲೇವಡಿ ಮಾಡಿದರು.

    ರೈತಪರ ಕಾಳಜಿ: ಕಾಂಗ್ರೆಸ್​ನ ಕಾರ್ಯ ಕರ್ತರಿಗೆ ಹಸಿರು ಹಾಲು ಹಾಕಿಸಿ ಮಂಡ್ಯದಲ್ಲಿ ರೈತ ಸಮಾವೇಶ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಯಾವ ಕಾಂಗ್ರೆಸ್ ನಾಯಕರೂ ಅವರ ಕುಟುಂಬಗಳ ಬಳಿ ಹೋಗಲಿಲ್ಲ. ಜೆಡಿಎಸ್ ಹೋಗಿ ಪರಿಹಾರ ನೀಡಿತ್ತು. ನಮ್ಮದು ರೈತರ ಪರ ಕಾಳಜಿ ಇರುವ ಪಕ್ಷ ಎಂದು ಹೇಳಿದರು.

    ಸಿದ್ದರಾಮಯ್ಯ ರೈತರ ಸಾಲ ಮನ್ನಾ ಘೊಷಣೆ ಮಾಡಿದರೂ ಅರ್ಹ ಫಲಾನುಭವಿಗಳಿಗೆ ತಲುಪ ಲಿಲ್ಲ. ಈ ಬಗ್ಗೆ ನಾನು ಯಾರಿಗೆ ಬೇಕಾದರೂ ಚಾಲೆಂಜ್ ಮಾಡುವೆ. ಅದೇ ರೀತಿ ನನ್ನ ಕಾಲದಲ್ಲಿ ಸಾಲ ಮನ್ನಾ ದುರುಪಯೋಗ ಆಗಿದ್ದರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಸವಾಲು ಹಾಕಿದರು.

    ರಾಜಕೀಯ ಜಂಜಾಟಗಳ ನಡುವೆಯೂ ನಾನು ಆರಾಮವಾಗಿದ್ದೇನೆ. ‘ಅಶೋಕ ಚಕ್ರವರ್ತಿ’, ‘ಚಂದ್ರಗುಪ್ತ’ ಮತ್ತಿತರ ಧಾರಾವಾಹಿ ನೋಡಿಕೊಂಡಿದ್ದೇನೆ. ಸ್ವಾರ್ಥ ಬಯಸಿ ಹೋಗುವವರನ್ನು ಧರ್ಮವು ಕೈಹಿಡಿಯುವುದಿಲ್ಲ ಎಂದು ಶ್ರೀಕೃಷ್ಣ ಪರಮಾತ್ಮನೇ ಹೇಳಿದ್ದಾನೆ.

    | ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

    ಪಕ್ಷ ಬಿಡುವವರಿಗೆ ಸನ್ಮಾನ ಮಾಡುವೆ!

    ಎರಡು, ಮೂರು ಬಾರಿ ನಮ್ಮ ಶಾಸಕರಿಗೆ ಬಲೆ ಬೀಸಿದ್ದರು ಎಂಬುದು ಗೊತ್ತಿದೆ. ಮೂವರು ಪಕ್ಷ ಬಿಟ್ಟು ಹೋದರು, ಪಕ್ಷವೇನು ಮುಳುಗಿ ಹೋಯಿತೆ? ಪಕ್ಷ ಬಿಡುವವರು ಈಗಲೇ ರಾಜೀನಾಮೆ ಕೊಟ್ಟು ಹೋಗಲಿ. ಬೇಕಿದ್ದರೆ ನಾನೇ ಸನ್ಮಾನ ಮಾಡಿ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಕಳುಹಿಸಿ ಕೊಡುತ್ತೇನೆ ಎಂದು ಪರೋಕ್ಷವಾಗಿ ಜಿ.ಟಿ. ದೇವೇಗೌಡರಿಗೆ ಕುಮಾರಸ್ವಾಮಿ ಟಾಂಗ್ ಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts