More

    ಗ್ರಾಮೀಣ ಪ್ರತಿಭೆಗಳಿಗೆ ಅವಕಾಶಗಳೇ ಇಲ್ಲ

    ಹೊಸನಗರ: ಇಂದಿನ ದಿನಗಳಲ್ಲಿ ಯುವಜನ ಮೇಳಗಳು ಮಹತ್ವ ಕಳೆದುಕೊಂಡಿದ್ದು, ಇದರಿಂದ ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಇಲ್ಲದಂತಾಗಿದೆ. ಪ್ರತಿಭಾವಂತರಿಗೆ ಹೆಚ್ಚಿನ ವೇದಿಕೆ ಕಲ್ಪಿಸುವಂತಾಗಬೇಕು ಎಂದು ನಿವೃತ್ತ ಪ್ರಾಚಾರ್ಯೆ ಸಂಗೀತ ವಿದುಷಿ ಶೀಲಾ ರಾಮನ್ ಹೇಳಿದರು.

    ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಾರಣಗಿರಿಯ ಶ್ರೀಸಿದ್ಧಿವಿನಾಯಕ ಸಭಾಭವನದಲ್ಲಿ ನಡೆದ ಸಂಸ್ಕೃತಿ ಉತ್ಸವ 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
    ಶಾಲೆಗಳಲ್ಲಿ ನಡೆಯುತ್ತಿದ್ದಂತಹ ವಾರ್ಷಿಕೋತ್ಸವಗಳೂ ಈಗ ನಡೆಯುತ್ತಿಲ್ಲ. ಊರಿನ ಯಾವುದೇ ಯುವಕ, ಯುವತಿ ಮಂಡಳಿಗಳ ವಾರ್ಷಿಕೋತ್ಸವವೂ ನಡೆಯುತ್ತಿಲ್ಲ. ಇದರಿಂದಾಗಿ ಸಾಂಸ್ಕೃತಿಕ ಲೋಕಕ್ಕೆ ಧಕ್ಕೆ ಉಂಟಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಭಾರತಿ ಟ್ರಸ್ಟ್ ನಡೆಸಿದ ಸಾಂಸ್ಕೃತಿಕ ಉತ್ಸವ ಸಮಯೋಚಿತವಾಗಿದೆ. ಸುರಿಯುವ ಮಳೆಯಲ್ಲೂ 250ಕ್ಕೂ ಹೆಚ್ಚು ಜನ ಸ್ಪರ್ಧಾಳುಗಳು ಹಾಗೂ ಅಷ್ಟೇ ಪ್ರಮಾಣದ ಪ್ರೇಕ್ಷಕರು ಭಾಗವಹಿಸಿದ್ದು ಜನರಲ್ಲಿರುವ ಹಸಿವನ್ನು ವ್ಯಕ್ತಪಡಿಸುತ್ತದೆ ಎಂದರು.
    ಗಾಯಕ ಸುರೇಶ್ ಕುಮಾರ್, ನಿವೃತ್ತ ಸೈನಿಕ ಕೆ.ಪಿ.ಕೃಷ್ಣಮೂರ್ತಿ, ಕಲಾವಿದ ಮತ್ತಿಮನೆ ರಾಮಚಂದ್ರ, ಸಂಗೀತ ಶಿಕ್ಷಕಿ ಗಾಯತ್ರಿ ನಾಗರಾಜ್, ರಾಷ್ಟೊçÃತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ, ನಿವೃತ್ತ ಉಪನ್ಯಾಸಕ ಗಣೇಶ್ ಐತಾಳ್, ಗ್ರಾಮಭಾರತಿ ಅಧ್ಯಕ್ಷ ಎನ್.ಡಿ. ನಾಗೇಂದ್ರರಾವ್, ಕಾರ್ಯದರ್ಶಿ ಹನಿಯ ರವಿ ಮತ್ತಿತರಿದ್ದರು.
    ಬೆಳಗ್ಗೆಯಿಂದ ಸಂಜೆಯವರೆಗೆ ಎರಡು ವೇದಿಕೆಗಳಲ್ಲಿ ಭಾವಗೀತೆ, ಜಾನಪದ ಗೀತೆ, ಕರ್ನಾಟಕ ಶಾಸ್ತಿçÃಯ ಸಂಗೀತ, ಸಮೂಹ ಗಾಯನ, ಭಜನೆ, ಜಾನಪದ ನೃತ್ಯ, ಕೋಲಾಟ ಮುಂತಾದ ಕಾರ್ಯಕ್ರಮಗಳು ಜನಮನ ರಂಜಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts