More

    ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಂದು ಬಾಲ್ ಬಾಯ್, ಇಂದು ಪಾಕ್ ತಂಡದ ನಾಯಕ!

    ಲಾಹೋರ್: ದಕ್ಷಿಣ ಆಫ್ರಿಕಾ ತಂಡ ಇದೀಗ ಪಾಕಿಸ್ತಾನ ಪ್ರವಾಸ ಕೈಗೊಂಡು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುವ ಸಿದ್ಧತೆಯಲ್ಲಿದೆ. ಇದೇ ದಕ್ಷಿಣ ಆಫ್ರಿಕಾ ತಂಡ 2007ರಲ್ಲಿ ಕೊನೆಯದಾಗಿ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಆಗ ಲಾಹೋರ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಬಾಲಕನೊಬ್ಬ ಬೌಂಡರಿ ಗೆರೆ ದಾಟಿ ಬಂದ ಚೆಂಡನ್ನು ಹೆಕ್ಕಿಕೊಡುವ ಬಾಲ್ ಬಾಯ್ ಕೆಲಸ ನಿರ್ವಹಿಸಿದ್ದ. ಇದೀಗ ಅದೇ ಬಾಲಕ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾನೆ. ಆ ಹುಡುಗನೇ ಬಾಬರ್ ಅಜಮ್!

    ಹೌದು, ಇದೀಗ ಪಾಕಿಸ್ತಾನ ತಂಡವನ್ನು ಎಲ್ಲ ಮಾದರಿಯ ಕ್ರಿಕೆಟ್ ಪ್ರಕಾರದಲ್ಲಿ ಮುನ್ನಡೆಸುತ್ತಿರುವ ಬಾಬರ್ ಅಜಮ್, ಬಾಲ್ ಬಾಯ್ ಆಗಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ 2007ರಲ್ಲಿ ಲಾಹೋರ್‌ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್, ಆಗಿನ ನಾಯಕ ಇಂಜಮಾಮ್ ಉಲ್ ಹಕ್‌ಗೆ ವಿದಾಯ ಪಂದ್ಯವೂ ಆಗಿತ್ತು. ಬಳಿಕ 2015ರಲ್ಲಿ ಅದೇ ಗದ್ದಾಫಿ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ಧ ಆಡುವ ಮೂಲಕ ಬಾಬರ್ ಅಜಮ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

    ಇದನ್ನೂ ಓದಿ: ಭಾರತ ಪ್ರವಾಸಕ್ಕೆ ಮುನ್ನ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಗೆದ್ದು ಬೀಗಿದ ಆಂಗ್ಲರು

    ‘2007ರಲ್ಲಿ ನನ್ನ ಕ್ರಿಕೆಟ್ ಪ್ರಯಾಣ ಆರಂಭಗೊಂಡಿತ್ತು. ಅಂತಾರಾಷ್ಟ್ರೀಯ ಪಂದ್ಯ ನೋಡಬೇಕೆಂಬ ತುಡಿತವಿತ್ತು. ಅದರಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಚೆಂಡು ಹೆಕ್ಕಿಕೊಡುವ ಕೆಲಸವನ್ನು ನಿರ್ವಹಿಸಲು ಒಪ್ಪಿಕೊಂಡಿದ್ದೆ’ ಎಂದು ಬಾಬರ್ ಅಜಮ್ ಮೆಲುಕು ಹಾಕಿದ್ದಾರೆ. ಬಾಬರ್ ಅಜಮ್ ಬಾಲ್ ಬಾಯ್‌ನಿಂದ ಕ್ಯಾಪ್ಟನ್ ಆಗಿ ಬೆಳೆದ ಜರ್ನಿಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇತ್ತೀಚೆಗೆ ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನೂ ಪ್ರಕಟಿಸಿದೆ.

    ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಜನವರಿ 26ರಿಂದ ಕರಾಚಿಯಲ್ಲಿ ನಡೆಯಲಿದೆ. ಇದಕ್ಕಾಗಿ ಬಾಬರ್ ಅಜಮ್ ಸಾರಥ್ಯದಲ್ಲಿ 17 ಆಟಗಾರರ ಪಾಕ್ ತಂಡ ಪ್ರಕಟಗೊಂಡಿದ್ದು, 6 ಹೊಸ ಆಟಗಾರರು ಸ್ಥಾನ ಪಡೆದಿದ್ದಾರೆ.

    ಆಸೀಸ್ ನೆಲದ ಯಶಸ್ಸಿನ ಗುಟ್ಟು ಬಿಚ್ಚಿಡುತ್ತಿದ್ದಾರೆ ಟೀಮ್ ಇಂಡಿಯಾ ಕ್ರಿಕೆಟಿಗರು

    ಟೀಮ್ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ಈಗ ಶಾರ್ದೂಲ್ಕರ್!

    ಟೀಮ್ ಇಂಡಿಯಾದ ಈ ಕ್ರಿಕೆಟಿಗನ ಅಕ್ಕ ಕೂಡ ವೃತ್ತಿಪರ ಕ್ರಿಕೆಟರ್, ತಮ್ಮನ ಯಶಸ್ಸಿಗೂ ನೆರವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts