More

    ಮುಲ್ಲನ್‌ಪುರದಲ್ಲಿ ಪಂಜಾಬ್ -ಗುಜರಾತ್ ಕಾದಾಟ

    ಮುಲ್ಲನ್‌ಪುರ: ಗೆಲುವಿನ ಆರಂಭದ ಬಳಿಕ ಲಯ ತಪ್ಪಿರುವ ಹಾಲಿ ರನ್ನರ್‌ಅಪ್ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್-17ರಲ್ಲಿ ಭಾನುವಾರದ 2ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಕೊನೇ ಓವರ್‌ನಲ್ಲಿ ಸತತ 3 ಸೋಲುಂಡಿರುವ ಪಂಜಾಬ್ ಜಯದ ಹಾದಿಗೆ ಮರಳುವ ತವಕದಲ್ಲಿದ್ದರೆ, ಶುಭಮಾನ್ ಗಿಲ್ ಬಳಗ ಅಸ್ಥಿರ ನಿರ್ವಹಣೆಯಿಂದ ಹೊರಬರಬೇಕಿದೆ.

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಹೀನಾಯ ಸೋಲಿನ ಬಳಿಕ ರನ್‌ರೇಟ್‌ನಲ್ಲಿ ಕುಸಿತ ಕಂಡಿರುವ ಗುಜರಾತ್ ಟೈಟಾನ್ಸ್ ಆಡಿರುವ 7 ಪಂದ್ಯಗಳಲ್ಲಿ 3 ಗೆಲುವು, 4 ಸೋಲಿನೊಂದಿಗೆ 6 ಅಂಕ ಕಲೆಹಾಕಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ 7 ಪಂದ್ಯಗಳಲ್ಲಿ 2 ಜಯ, 5 ಸೋಲು ಕಂಡಿದೆ. ಕೊನೆಯ 4 ಸೋಲುಗಳು ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ ಬಂದಿವೆ. ಕಾಯಂ ನಾಯಕ ಹಾಗೂ ಭುಜದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶಿಖರ್ ಧವನ್ ಕಣಕ್ಕಿಳಿಯುವುದು ಅನುಮಾನ ಎನಿಸಿದೆ. ಪ್ಲೇಆ್ ರೇಸ್‌ನಲ್ಲಿ ಉಳಿಯಲು ಉಭಯ ತಂಡಗಳಿಗೆ ಈ ಪಂದ್ಯ ಎನಿಸಿದೆ.

    ವಿದೇಶಿ ಆಟಗಾರರ ವೈಲ್ಯ: ಪಂಜಾಬ್ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಲ್ಯ ಸೋಲಿಗೆ ಪ್ರಮುಖ ಕಾರಣ. ಹಿಂದಿನ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ್ದ ಪಂಜಾಬ್ ಈ ಬಾರಿಯೂ ಅದೇ ಸ್ಥಿತಿಯಲ್ಲಿದೆ. ಹಂಗಾಮಿ ನಾಯಕ ಸ್ಯಾಮ್ ಕರ‌್ರನ್ ಹಿಂದಿನ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದರೂ ಯಶಸ್ಸು ಒಲಿಯಲಿಲ್ಲ. ಜಾನಿ ಬೇರ್‌ಸ್ಟೋ, ಲಿಯಾಮ್ ಲಿವಿಂಗ್‌ಸ್ಟೋನ್ ಸೇರಿ ವಿದೇಶಿ ಆಟಗಾರರ ನೀರಸ ಆಟ ತಂಡಕ್ಕೆ ತಲೆನೋವಾಗಿದೆ. ದೇಶೀಯ ಆಟಗಾರರಾದ ಶಶಾಂಕ್ ಸಿಂಗ್, ಆಶುತೋಷ್ ಶರ್ಮ ಟೂರ್ನಿಯಲ್ಲಿ ಭರವಸೆಯ ಬ್ಯಾಟರ್‌ಗಳಾಗಿದ್ದು, ಪಂಜಾಬ್ ಮಾನ ಕಾಪಾಡಿದ್ದಾರೆ. ರಬಾಡ, ಅರ್ಷದೀಪ್ ಸಿಂಗ್‌ಗೆ ಗುಜರಾತ್ ಬ್ಯಾಟರ್‌ಗಳು ಪ್ರಬಲ ಸವಾಲೊಡ್ಡಲಿದ್ದಾರೆ.

    ಮಧ್ಯಮ ಕ್ರಮಾಂಕದ ಅಸ್ಥಿರತೆ: ಟೂರ್ನಿಯಲ್ಲಿ ಗುಜರಾತ್‌ನ ಅಸ್ಥಿರ ಪ್ರದರ್ಶನದಂತೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಕಳಪೆ ಾರ್ಮ್‌ನಿಂದ ಒದ್ದಾಡುತ್ತಿದ್ದಾರೆ. ಶುಭಮಾನ್ ಗಿಲ್, ಸಾಯಿ ಸುದರ್ಶನ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಜತೆಗೆ ಹನ್ನೊಂದರ ಬಳಗದಲ್ಲಿ ಆಟಗಾರರ ಬದಲಾವಣೆಯಿಂದ ಗೆಲುವಿನ ಕಾಂಬಿನೇಷನ್ ಪಡೆಯಲು ಗುಜರಾತ್ ತಂಡ ಪರದಾಡಿದೆ.
    ಪ್ರಮುಖ ವೇಗಿ ಮೋಹಿತ್ ಶರ್ಮ ಲಯ ಕಳೆದುಕೊಂಡಿದ್ದಾರೆ. ಸಾಹ ಜತೆಗೆ ಕನ್ನಡಿಗ ಅಭಿನವ್ ಮನೋಹರ್ ಸಿಕ್ಕ ಅವಕಾಶ ಬಳಸಿಕೊಳ್ಳುವಲ್ಲಿ ಎಡವಿದರೆ, ಇಂಪ್ಯಾಕ್ಟ್ ಪ್ಲೇಯರ್ ಸಹ ಗುಜರಾತ್‌ಗೆ ಹೆಚ್ಚಿನ ಲಾಭದಾಯಕವಾಗಿಲ್ಲ. ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಪ್ರದರ್ಶನ ಸಹ ಕಳೆಗುಂದಿದೆ. ಟೂರ್ನಿಯಲ್ಲಿ ಪುಟಿದೇಳಲು ಸರ್ವಾಂಗೀಣ ನಿರ್ವಹಣೆ ಅಗತ್ಯ ಎನಿಸಿದೆ.

    ಮುಖಾಮುಖಿ: 4
    ಪಂಜಾಬ್:2
    ಗುಜರಾತ್: 2
    ಆರಂಭ: ರಾತ್ರಿ 7.30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts