More

    ಹಾವೇರಿ, ಉತ್ತರ ಕನ್ನಡದಲ್ಲಿ ಕಳ್ಳತನ, 7 ಜನರ ಬಂಧನ- 4 ಬೈಕ್ 133 ಗ್ರಾಂ ಚಿನ್ನಾಭರಣ ವಶ

    ಹಾನಗಲ್ಲ: ಶಿರಸಿ, ಹಾವೇರಿ, ಬ್ಯಾಡಗಿ ಹಾಗೂ ಹಾನಗಲ್ಲ ತಾಲೂಕುಗಳಲ್ಲಿ ಮನೆ, ಬೈಕ್ ಕಳ್ಳತನ ನಡೆಸಿದ್ದ ಅಂತರ್ ಜಿಲ್ಲಾ ಕಳ್ಳರ ತಂಡವನ್ನು ಬಂಧಿಸುವಲ್ಲಿ ಹಾನಗಲ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.

    ಹಾನಗಲ್ಲ, ಹಾವೇರಿ, ಬ್ಯಾಡಗಿ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಮಾರ್ಚ್​ನಿಂದ ಜೂನ್​ವರೆಗೆ 10 ಮನೆಗಳ ಕಳ್ಳತನ ನಡೆಸಿದ ಕುರಿತು ಹಾಗೂ ಶಿರಸಿ ಮತ್ತು ಸಿದ್ದಾಪುರ ತಾಲೂಕಿನಲ್ಲಿ 3 ಬೈಕ್​ಗಳನ್ನು ಕಳವು ಮಾಡಿದ್ದ ಪ್ರಕರಣ ದಾಖಲಾಗಿದ್ದವು.

    ಈ ಕುರಿತು ಹಾವೇರಿ ಎಸ್​ಪಿ ಡಾ. ಶಿವಕುಮಾರ, ಎಎಸ್​ಪಿ ಸಿ. ಗೋಪಾಲ್, ಡಿವೈಎಸ್​ಪಿ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಹಾನಗಲ್ಲ ಸಿಪಿಐ ಎಸ್.ಆರ್. ಶ್ರೀಧರ ನೇತೃತ್ವದಲ್ಲಿ ಪಿಎಸ್​ಐಗಳಾದ ಸಂಪತ್ ಆನಿಕಿವಿ, ಯಲ್ಲಪ್ಪ ಹಿರಗಣ್ಣನವರ ಹಾಗೂ ಸಿಬ್ಬಂದಿ ತಂಡ ರಚಿಸಲಾಗಿತ್ತು.

    ಬಂಧಿತ ಆರೋಪಿಗಳು

    ಉಪ್ಪುಣಸಿ ಗ್ರಾಮದ ದಯಾನಂದ ಮಾರುತಿ ವಡ್ಡರ (21), ಕೂಸನೂರ ಗ್ರಾಮದ ಆಲಂ ಅಲ್ತಾಹಿರ್​ಖಾನ ಕಚವಿ (19), ಗಣೇಶ ಮೈಲಾರೆಪ್ಪ ಮೋಗೇರ (19), ನಂದೀಶ ರಾಮಪ್ಪ ಕಾಡಮ್ಮನವರ (20), ಮುಬಾರಕ ಮಕ್ಬೂಲ್​ಸಾಬ ಬ್ಯಾಗವಾದಿ (20), ಹಾವೇರಿಯ ದಾನೇಶ್ವರಿ ನಗರದ ಪ್ರಜ್ವಲ್ ಶ್ರೀಕಾಂತ ಮರೆಣ್ಣನವರ (19) ಹಾಗೂ ರಾಣೆಬೆನ್ನೂರು ಮೃತ್ಯುಂಜಯ ನಗರದ ಮಾರುತಿ ಚಂದ್ರಪ್ಪ ಲಮಾಣಿ (23) ಬಂಧಿತರು.

    ಈ ಆರೋಪಿಗಳ ಮೇಲೆ ಹಾನಗಲ್ಲ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ 2 ಮನೆ, ಬ್ಯಾತನಾಳ, ಬ್ಯಾಗವಾದಿ, ಹಾವಣಗಿ, ಕೂಸನೂರು, ಚಿಕ್ಕೇರಿ ಹೊಸಳ್ಳಿ ಗ್ರಾಮಗಳಲ್ಲಿ ತಲಾ ಒಂದು ಮನೆ ಕಳ್ಳತನ ಮಾಡಿದ ಕುರಿತು ದೂರು ದಾಖಲಾಗಿದ್ದವು. ಹಾವೇರಿ ತಾಲೂಕಿನ ಹೊಸಳ್ಳಿಯಲ್ಲಿ 2 ಮನೆ ಹಾಗೂ ಬ್ಯಾಡಗಿ ತಾಲೂಕಿನ ತೆರೇದಹಳ್ಳಿಯಲ್ಲಿ 1 ಮನೆ ಕಳ್ಳತನ ಮಾಡಿದ ದೂರು ದಾಖಲಾಗಿದ್ದವು. ಸಿದ್ದಾಪುರ ತಾಲೂಕಿನ ಕಾನಸೂರ ಗ್ರಾಮದಲ್ಲಿ, ಶಿರಸಿ ತಾಲೂಕಿನ ಹುಲೇಕಲ್ ರಸ್ತೆ, ಶಿರಸಿ ಪಟ್ಟಣದ ಸಿಂಪಿಗಲ್ಲಿಯಲ್ಲಿ ತಲಾ ಒಂದೊಂದು ಬೈಕ್ ಕಳವು ನಡೆದ ಪ್ರಕರಣಗಳು ವರದಿಯಾಗಿದ್ದವು. ಈ ಪ್ರಕರಣಗಳ ಕುರಿತಂತೆ ಒಟ್ಟು 7 ಆರೋಪಿಗಳನ್ನು ಬಂಧಿಸಿದ ಪೊಲೀಸರು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

    ಬಂಧಿತರಿಂದ 8.65 ಲಕ್ಷ ರೂ. ಮೌಲ್ಯದ 4 ಬೈಕ್​ಗಳು ಸೇರಿ, 133 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಕಳ್ಳತನ ಮಾಡಿದ್ದ 114 ಗ್ರಾಂ ಚಿನ್ನಾಭರಣಗಳನ್ನು ಬೇರೆ-ಬೇರೆ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಅಡವು ಇಟ್ಟಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

    ಕಾರ್ಯಾಚರಣೆಯಲ್ಲಿ ತಾಲೂಕಿನ ಆಡೂರು ಠಾಣೆಯ ಸಿಬ್ಬಂದಿ ಗುತ್ತೆಪ್ಪ ಬಾಸೂರ, ಶಂಭಣ್ಣ ಸುಳ್ಳಳ್ಳಿ, ಭೀಮಣ್ಣ ಗುಡಿಹಾಳ, ಜಿ.ಡಿ. ಚವರೆಡ್ಡಿ, ಅಶೋಕ ಕೌಜಲಗಿ, ಆರ್.ಆರ್. ಬಳ್ಳಾರಿ, ಎಲ್.ಎ. ಪಾಟೀಲ, ಸತೀಶ ಹಳಕೊಪ್ಪ, ಅಶೋಕ ಭಜಂತ್ರಿ, ಅಣ್ಣಪ್ಪ ಮುದ್ದಕ್ಕನವರ, ರಮೇಶ ಲಮಾಣಿ, ಕರಿಬಸಪ್ಪ ಕರಡೆಪ್ಪನವರ, ಸಂತೋಷ ಮ್ಯಾಗೇರಿ, ಈರಣ್ಣ ಲಂಗೋಟಿ, ಬಸವರಾಜ ಬಿಕ್ಕಣ್ಣನವರ, ಹಾನಗಲ್ಲ ಠಾಣೆಯ ಲಕ್ಷ್ಮಣ ಪಾಟೀಲ, ಬಾಹುಬಲಿ ಉಪಾಧ್ಯಾಯ, ಶೌಕತ್​ಅಲಿ ಲಿಂಗದಹಳ್ಳಿ, ಆನಂದ ಪಾಟೀಲ, ಜಗದೀಶ ಮಡಿವಾಳರ, ಇಲಿಯಾಜ್ ಶೇಖಸನದಿ, ಸುರೇಶ ಕೂಸನೂರ, ತಾಂತ್ರಿಕ ಸಿಬ್ಬಂದಿ ಮಾರುತಿ ಹಾಲಭಾವಿ, ಸತೀಶ ಮಾರಕಟ್ಟಿ, ಧರ್ಮಗೌಡ ಪಾಟೀಲ, ಅಪರಾಧ ದಳದ ಶ್ವಾನ ಝಾನ್ಸಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts