ಮೂಲ್ಕಿಯಲ್ಲಿ ಸರಣಿ ಕಳವು

blank

ಮೂಲ್ಕಿ: ಚರಂತಿಪೇಟೆಯ ಜುವೆಲ್ಲರಿಯೊಂದರ ಗೋಡೆಯ ಎಕ್ಸಾಸ್ಟ್ ಫ್ಯಾನ್ ಒಡೆದು ಕಬ್ಬಿಣದ ಏಣಿ ಮೂಲಕ ಒಳ ಪ್ರವೇಶಿಸಿದ ಕಳ್ಳರು ಸುಮಾರು 80 ಸಾವಿರ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಸಾಮಗ್ರಿ ಕಳವು ಮಾಡಿದ್ದಾರೆ.

blank

ಇದಕ್ಕೂ ಮೊದಲು ಕಳ್ಳರು ಪಕ್ಕದಲ್ಲಿದ್ದ ಸತೀಶ್ ಎಂಬುವರ ಮನೆ ಬಾಗಿಲು ಮುರಿದು ಒಳನುಗ್ಗಿ ಸೊತ್ತುಗಳನ್ನು ಜಾಲಾಡಿದ್ದಾರೆ. ಸತೀಶ್ ಅವರ ಮನೆಗೆ ಕೆಲದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಹಾನಿಯಾಗಿದ್ದು, ಅವರು ಬೆಳ್ಳಾಯೂರಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಹಗಲಿನಲ್ಲಿ ಬಂದುಹೋಗುತ್ತಿದ್ದರು. ಚರಂತಿಪೇಟೆ ಬಳಿಯಿರುವ ಸಿಸಿ ಕ್ಯಾಮರಾವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಶನಿವಾರ ರಾತ್ರಿ ಕಾರ್ನಾಡು ನಾರಾಯಣ ಗುರು ಆಸ್ಪತ್ರೆ ಬಳಿ ಫ್ಲ್ಯಾಟ್ ಕೆಳಗಡೆ ನಿಲ್ಲಿಸಿದ ಸ್ಕೂಟರ್ ಕೂಡ ಕಳವಾಗಿದೆ. ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲ ತಿಂಗಳಿನಿಂದ ದೇವಸ್ಥಾನ, ಅಂಗಡಿ, ಮನೆಗಳಲ್ಲಿ ಸರಣಿ ಕಳ್ಳತನ ನಡೆಯುತ್ತಿದೆ.

Share This Article
blank

ನೀವು ವಿಟಮಿನ್ ಬಿ 12 ಕೊರತೆಯಿಂದ ಬಳಲುತ್ತಿದ್ದೀರಾ? ತಪ್ಪದೇ ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ…Vitamin B12

Vitamin B12 : ವಿಟಮಿನ್ ಬಿ 12 ದೇಹಕ್ಕೆ ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ದೇಹದಲ್ಲಿ ಇದರ…

ಬೆಳಗ್ಗೆ ಚಹಾ ಕುಡಿಯಿರಿ..ಆದ್ರೆ ಈ ಅಭ್ಯಾಸವನ್ನು ಸ್ವಲ್ಪ ಬದಲಾಯಿಸಿ! tea

tea : ನಮ್ಮಲ್ಲಿ ಹಲವರಿಗೆ ಪ್ರತಿದಿನ ಬೆಳಿಗ್ಗೆ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ತೂಕ ಇಳಿಸಿಕೊಳ್ಳಲು…

blank