More

    ರಂಗಮಂದಿರ ಉದ್ಘಾಟನೆ ಇಂದು

    ರಾಯಚೂರು: ಒಂದು ವರ್ಷದಿಂದ ಬಂದ್ ಆಗಿದ್ದ ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರವೀಗ ಕೊನೆಗೂ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸಲು ಸಿದ್ಧವಾಗಿದ್ದು, ನವೀಕರಣಗೊಂಡ ರಂಗಮಂದಿರವನ್ನು ಮಂಗಳವಾರ ಸಚಿವ ಎನ್.ಎಸ್.ಬೋಸರಾಜು ಉದ್ಘಾಟನೆ ಮಾಡಲಿದ್ದಾರೆ.


    ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ರಂಗಮಂದಿರವನ್ನು ಕ್ಯಾಷುಟೆಕ್ ಸಂಸ್ಥೆಯಿಂದ ನವೀಕರಣಗೊಳಿಸಲಾಗಿದೆ. ವೇದಿಕೆಗೆ ಕಟ್ಟಿಗೆ ನೆಲಹಾಸು, ಆಸನಗಳ ಬದಲಾವಣೆ, ಹವಾನಿಯಂತ್ರಿತ ವ್ಯವಸ್ಥೆ, ಹೊಸ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ, ಕಾಂಪೌಂಡ್ ವ್ಯವಸ್ಥೆ ಸೇರಿದಂತೆ ಇತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನವೀಕರಣಗೊಂಡ ರಂಗಮಂದಿರದ ಬಾಡಿಗೆಯನ್ನು ಪರಿಷ್ಕರಿಸಲಾಗಿದ್ದು, ಬೆಳಗ್ಗೆ ಒಂಬತ್ತರಿಂದ ಮಧ್ಯಾಹ್ನ ಎರಡರವರೆಗೆ ಹಾಗೂ ಸಂಜೆ ನಾಲ್ಕರಿಂದ ರಾತ್ರಿ ಒಂಬತ್ತರವರೆಗೆ ಎರಡು ಅವಧಿ ನಿಗದಿಪಡಿಸಲಾಗಿದೆ. ಎಸಿಯಾದರೆ ಐದು ಸಾವಿರ ರೂ., ಎಸಿ ಇಲ್ಲವಾದರೆ ನಾಲ್ಕು ಸಾವಿರ ರೂ. ಹಾಗೂ ದಿನ ಪೂತಿಯಾದರೆ ಹತ್ತು ಸಾವಿರ ರೂ. ನಿಗದಿಪಡಿಸಲಾಗಿದೆ. ಟಿಕೆಟ್ ಇರುವ ಕಾರ್ಯಕ್ರಮಗಳಿಗೆ ಹೆಚ್ಚಿನ ಬಾಡಿಗೆ ನಿಗದಿಪಡಿಸಲಾಗಿದ್ದು, ಸರ್ಕಾರಿ ಕಾರ್ಯಕ್ರಮಗಳಿಗೆ ವಿದ್ಯುತ್ ಬಳಕೆಯನ್ನಾಧರಿಸಿ ನಿಗದಿ ಪಡಿಸಲಾಗಿದೆ. ರಂಗಮಂದಿರ ಉದ್ಘಾಟನೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಹೆಚ್ಚಿನ ಅನುಕೂಲ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts