More

    ತುಮರಿ ಸೇತುವೆ ಕಾಮಗಾರಿ ಶೀಘ್ರ ಪೂರ್ಣ

    ಸಾಗರ: ರಾಜ್ಯದ ಜನತೆಗೆ ವಿದ್ಯುತ್ ನೀಡುವಲ್ಲಿ ಶರಾವತಿ ಕಣಿವೆಯ ಜನ ಭೂಮಿ, ಬದುಕು ಕಳೆದುಕೊಂಡರು. ಅವರಿಗೆ ನಿರ್ಮಿಸಿ ಕೊಡುತ್ತಿರುವುದು ಕೇವಲ ಸೇತುವೆಯಲ್ಲ. ಅವರ ಬದುಕಿನ ಸಂಪರ್ಕ ಸೇತುವಾಗಿದೆ. ಅಲ್ಲಿಯ ಜನರ ತ್ಯಾಗಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
    ತಾಲೂಕಿನ ಅಂಬಾರಗೋಡ್ಲು ದಡದಲ್ಲಿ ಅಂಬಾರಗೋಡ್ಲುವಿನಿಂದ ಕಳಸವಳ್ಳಿಗೆ ಸಂಪರ್ಕಿಸುವ ಲಾಂಚ್ ಮಾರ್ಗದ ರ‌್ಯಾಂಪ್ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ಭಾನುವಾರ ಮಾತನಾಡಿ, ತುಮರಿ ಸೇತುವೆ ಕಾಮಗಾರಿ ತ್ವರಿತವಾಗಿ ನಡೆಯಬೇಕೆಂದು ಬೆಳಗಾವಿಯಲ್ಲಿ ನಡೆದ ಶಾಸನ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ್ದಲ್ಲದೇ ರಾಜ್ಯ ಲೋಕೋಪಯೋಗಿ ಸಚಿವರು ನಮ್ಮ ಕೋರಿಕೆಯ ಮೇಲೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಲ್ಲಿಯೇ ಕರೆಸಿ ವಿಶೇಷ ಸಭೆಯೊಂದನ್ನು ನಡೆಸಿ ಕೆಲಸ ಚುರುಕುಗೊಳಿಸುವಂತೆ ಸಹಕರಿಸಿದ್ದಾರೆ ಎಂದರು.
    ಸೇತುವೆ ಕಾಮಗಾರಿ ರಾತ್ರಿ ಹಗಲು ನಡೆಯುತ್ತಿದ್ದು ಶೀಘ್ರ ಸೇತುವೆ ಲೋಕಾರ್ಪಣೆಯಾಗುವ ಸಾಧ್ಯತೆ ಇದೆ. ತುಮರಿ ಸೇತುವೆ ಹಿನ್ನೀರ ಭಾಗದ ಜನರ ಹೋರಾಟಕ್ಕೆ ಸಂದ ಪ್ರತಿಲವಾಗಲಿದೆ. ಬೇಸಿಗೆ ಸಂದರ್ಭದಲ್ಲಿ ಹಿನ್ನೀರು ಕಡಿಮೆಯಾಗಿ ಲಾಂಚ್ ನಿಲ್ಲಿಸಲು ಸಹ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ನನ್ನ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಲಾಂಚ್ ನಿಲ್ಲಲು ಸಮಸ್ಯೆಯಾಗಬಾರದು ಎಂದು ಅಗತ್ಯ ಇರುವ ಕಡೆಗಳಲ್ಲಿ ರ‌್ಯಾಂಪ್ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಸಂದರ್ಭದಲ್ಲಿ ಜನರನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಕರೆದೊಯ್ಯಲು ಮಿನಿ ಬೋಟ್ ಬಳಕೆ ಮಾಡಲು ಸಹ ಸೂಚನೆ ನೀಡಲಾಗಿದೆ ಎಂದು ಹೇಳಿದರು.
    ಆಪ್ಸ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು, ಸೋಮಶೇಖರ್ ಲ್ಯಾವಿಗೆರೆ, ಚೇತನರಾಜ್ ಕಣ್ಣೂರು, ನವೀನ್ ಗೌಡ, ತಾರಾಮೂರ್ತಿ, ದೇವರಾಜ ಕಪ್ಪದೂರು, ಹರೀಶ್ ಗಂಟೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts