More

    ಪಟ್ಟು ಹಿಡಿದು ಮದ್ಯದಂಗಡಿ ಬಂದ್ ಮಾಡಿಸಿದ ಮಹಿಳೆಯರು

    ಹೊಳೆಆಲೂರ (ಗದಗ): ಮದ್ಯ ಮಾರಾಟದ ವಿರುದ್ಧ ರೊಚ್ಚಿಗೆದ್ದ ಮಹಿಳೆಯರು ಗುರುವಾರ ಎರಡು ಮದ್ಯದಂಗಡಿಗಳನ್ನು ಬಂದ್ ಮಾಡಿಸಿದ ಅಪರೂಪದ ಘಟನೆ ನಡೆದಿದೆ.

    ಉತ್ತರ ಕರ್ನಾಟಕ ರೈತ ಮಹಿಳಾ ಸಂಘಟನೆಯ ಹೊಳೆಆಲೂರ ಘಟಕದ ಸದಸ್ಯೆಯರು ಮತ್ತು ಇತರ ಮಹಿಳೆಯರು ಸೇರಿ ಈ ಸಂಬಂಧ ಪ್ರತಿಭಟನೆ ನಡೆಸಿದರು.

    ‘‘ಕರೊನಾದಿಂದ ಜನ ಕಷ್ಟದಲ್ಲಿದ್ದಾರೆ. ದಿನಸಿ, ದಿನಬಳಕೆ ವಸ್ತು ಖರೀದಿಸಲೂ ಹಣವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮದ್ಯದಂಗಡಿಗಳನ್ನು ತೆರೆದರೆ ಬಡವರ ಕುಟುಂಬಗಳು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ’’ ಎಂಬುದು ಪ್ರತಿಭಟನಕಾರರ ವಾದವಾಗಿತ್ತು.

    ಇದನ್ನೂ ಓದಿ ವಿದೇಶದಿಂದ ಬರುವ ಕನ್ನಡಿಗರಿಗಾಗಿ ಕೆಂಪೇಗೌಡ ವಿಮಾನ ನಿಲ್ದಾಣ ರೆಡಿ: ಸುಧಾಕರ್, ಬೊಮ್ಮಾಯಿ ಪರಿಶೀಲನೆ

    ‘‘ಸರ್ಕಾರದವರು ಮದ್ಯದ ಅಂಗಡಿಗಳನ್ನು ಮತ್ತೆ ತೆರೆಯುವುದರ ಮೂಲಕ ಕುಡುಕರು ಬೀದಿಯಲ್ಲಿ ಬೀಳುವಂತೆ ಮಾಡಿದ್ದಾರೆ. ಈ ಕೂಡಲೆ ಮದ್ಯದಂಗಡಿಗಳನ್ನು ಬಂದ್ ಮಾಡಬೇಕು, ಇಲ್ಲವಾದರೆ ಮದ್ಯದಂಗಡಿಯ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಪ್ರತಿಭಟನಾ ನಿರತ ಮಹಿಳೆಯರು ಪಟ್ಟುಹಿಡಿದರು.

    ಪೊಲೀಸರು ಬಂದು ಸಮಾಧಾನ ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಹೊಳೆಆಲೂರಿನ ವಿವೇಕ ವೈನ್ ಶಾಪ್ ಹಾಗೂ ಪ್ರಗತಿ ವೈನ್ ಶಾಪ್‌ಗಳನ್ನು ಬಂದ್ ಮಾಡಲಾಯಿತು. ನಂತರವಷ್ಟೇ ಮಹಿಳೆಯರು ಪ್ರತಿಭಟನೆ ಹಿಂತೆಗೆದುಕೊಂಡು ಮನೆಗೆ ತೆರಳಿದರು.

    ನೀರಿನ ಸೆಳೆತಕ್ಕೆ ಭಿನ್ನಗೊಂಡಿದ್ದ ಸೋಮೇಶ್ವರ ಮಹಾಲಿಂಗ ಮರು ಪ್ರತಿಷ್ಠಾಪನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts