More

    ನೀರಿನ ಸೆಳೆತಕ್ಕೆ ಭಿನ್ನಗೊಂಡಿದ್ದ ಸೋಮೇಶ್ವರ ಮಹಾಲಿಂಗ ಮರು ಪ್ರತಿಷ್ಠಾಪನೆ

    ಬಾಳೆಹೊನ್ನೂರು: ಪಟ್ಟಣದ ಎನ್.ಆರ್. ಪುರ ರಸ್ತೆಯ ಸೀಕೆ-ಮುದುಗುಣಿ ಗ್ರಾಮದ ಬಳಿ ಭದ್ರಾನದಿ ತೀರದಲ್ಲಿ ಗುರುವಾರ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸೋಮೇಶ್ವರ ಮಹಾಲಿಂಗ ಮರು ಪ್ರತಿಷ್ಠಾಪನೆ ನೆರವೇರಿಸಿದರು.

    ಸೀಕೆ-ಮುದುಗುಣಿ ಗ್ರಾಮದ ಬಳಿಯಿರುವ ಭದ್ರಾನದಿ ಮಧ್ಯದಲ್ಲಿ ಪುರಾತನ ಕಾಲದಲ್ಲಿ ಪ್ರತಿಷ್ಠಾಪನೆಗೊಂಡ ಸೋಮೇಶ್ವರ ಮಹಾಲಿಂಗ ಹಾಗೂ ಬಸವ ವಿಗ್ರಹಗಳು ಇವೆ. ಸೋಮೇಶ್ವರ ಮಹಾಲಿಂಗ ಪ್ರತಿಷ್ಠಾಪನೆಗೊಂಡು ಹಲವು ವರ್ಷಗಳು ಕಳೆದಿದ್ದು ನೀರಿನ ಸೆಳೆತಕ್ಕೆ ಸಿಲುಕಿ ಅಲ್ಪಮಟ್ಟಿಗೆ ಭಿನ್ನಗೊಂಡಿತ್ತು.

    ಇದನ್ನೂ ಓದಿ ಕರೊನಾ ಕರಡು ನಿರ್ಣಯದ ವಿಷಯದಲ್ಲಿ ಅಮೆರಿಕ-ಚೀನಾ ‘ಶೀತಲ ಸಮರ’

    ಆದ್ದರಿಂದ ರಂಭಾಪುರಿ ಜಗದ್ಗುರುಗಳು ಹುಣ್ಣಿಮೆ ದಿನವಾದ ಗುರುವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೂತನ ಸೋಮೇಶ್ವರ ಮಹಾಲಿಂಗ ಪ್ರತಿಷ್ಠಾಪಿಸಿದರು. ಪ್ರತಿಷ್ಠಾಪನಾ ಕಾರ್ಯದ ಅಂಗವಾಗಿ ಅಷ್ಟಬಂಧ, ಸ್ಥಳ ಶುದ್ಧಿ, ಮಹಾಲಿಂಗಕ್ಕೆ ರುದ್ರಾಭಿಷೇಕ, ಅಷ್ಟೋತ್ತರ, ಮಹಾಪೂಜೆ ಹಾಗೂ ಮಂಗಳರಾತಿ ನೆರವೇರಿಸಲಾಯಿತು.
    ಪೀಠದ ಅರ್ಚಕರಾದ ಗುರು ದಾರುಕಾರಾಧ್ಯ ಶಾಸಿ, ಪ್ರಕಾಶ ಶಾಸಿ, ರುದ್ರೇಶ್, ಜಗದೀಶ್, ಸುರೇಶ್ ಶಾಸಿ, ರೇಣುಕ, ರವಿ ಇತರರಿದ್ದರು.

    ಸೀಕೆ-ಮುದುಗುಣಿ ಗ್ರಾಮದ ಭದ್ರಾನದಿ ತೀರದಲ್ಲಿ ಪ್ರತಿ ವರ್ಷ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ವೀರಭದ್ರಸ್ವಾಮಿ ರಥೋತ್ಸವದಲ್ಲಿ ರಂಭಾಪುರಿ ಜಗದ್ಗುರುಗಳು ಸೋಮೇಶ್ವರ ಮಹಾಲಿಂಗ, ಬಸವ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಸುರಗಿ ಸಮಾರಾಧನೆ ನೆರವೇರಿಸುತ್ತಾರೆ.

    ರಾಜ್ಯದಲ್ಲಿ ಮದ್ಯ ಮಾರಾಟ, ಮದ್ಯಪಾನ ನಿಷೇಧಿಸಬೇಕು: ಸಚಿವ ಸಿ.ಟಿ. ರವಿ ಪ್ರತಿಪಾದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts