More

    ಮಗನಿಂದಲೇ ಅಮ್ಮನ ಕೆಲಸಕ್ಕೆ ಕುತ್ತು? ರೇವ್ ಪಾರ್ಟಿಯಲ್ಲಿ ಭಾಗಿಯಾದ ಮಹಿಳಾ ಹೆಡ್ ಕಾನ್‌ಸ್ಟೆಬಲ್ ಅಮಾನತು

    ಮಂಗಳೂರು: ಹಾಸನ ಜಿಲ್ಲೆ ಆಲೂರು ತಾಲೂಕಿನ ಕೆ. ಹೊಸಕೋಟೆ ಸಮೀಪದ ನಂದಿಪುರ ಎಸ್ಟೇಟ್‌ನಲ್ಲಿ ಏ.10ರಂದು ರಾತ್ರಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮಂಗಳೂರು ನಗರ ಸೆನ್ (ಸೈಬರ್, ಇಕಾನಾಮಿಕ್ ಆ್ಯಂಡ್ ನಾರ್ಕೊಟಿಕ್) ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿರುವ ಶ್ರೀಲತಾ ಅವರನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್ ಆಯುಕ್ತ ಎನ್​. ಶಶಿಕುಮಾರ್​ ಆದೇಶಿಸಿದ್ದಾರೆ.

    ಈ ಪಾರ್ಟಿಯನ್ನು ಶ್ರೀಲತಾ ಅವರ ಪುತ್ರ ಅತುಲ್ ಆಯೋಜಿಸಿದ್ದು, ಇದರಲ್ಲಿ ಶ್ರೀಲತಾ ಭಾಗಿಯಾಗಿದ್ದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಹಾಸನ ಎಸ್​ಪಿ ಅವರಿಗೆ ಶಶಿಕುಮಾರ್ ಪತ್ರ ಬರೆದಿದ್ದರು. ಶ್ರೀಲತಾ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು ಎಸ್​ಪಿ ನೀಡಿದ ವರದಿ ಪ್ರಕಾರ ದೃಢಪಟ್ಟಿದ್ದರಿಂದ ಆಕೆಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಹೀಗಾಗಿ ಅವರ ಕೆಲಸಕ್ಕೆ ಪುತ್ರನಿಂದಲೇ ಕುತ್ತು ಬಂದಂತಾಗಿದೆ.

    ರೇವ್ ಪಾರ್ಟಿಯಲ್ಲಿ ಮಹಿಳಾ ಪೊಲೀಸ್​ ಪೇದೆ ಭಾಗಿ!

    ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿ ಬೇಡ, ಇದು ಜನಪ್ರಿಯ ಸರ್ಕಾರದ ಲಕ್ಷಣವಲ್ಲ; ಸಿಎಂ, ಆರೋಗ್ಯ ಸಚಿವರಿಗೆ ಶಾಸಕ ರಘುಪತಿ ಭಟ್​ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts