More

    ಕೊರೊನಾ ಸೋಂಕಿತರೊಂದಿಗೆ ವಿಮಾನದಲ್ಲಿ ಬಂದ 8 ಜನರನ್ನು ಗುರುತಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆ

    ಕೊಲ್ಕತ್ತ: ಕೇರಳದಲ್ಲಿ ಭಾರತದ ಎರಡನೇ ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದು, ಮುಂಜಾಗೃತಾ ಕ್ರಮವಾಗಿ ಸೋಂಕಿತ ವ್ಯಕ್ತಿಯೊಂದಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ ಜನರನ್ನು ಗುರುತಿಸಲಾಗಿದೆ. ಒಟ್ಟು ಎಂಟು ಜನರನ್ನು ಗುರುತಿಸಲಾಗಿದ್ದು ಅದರಲ್ಲಿ ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿರುವುದಾಗಿ ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆ ತಿಳಿಸಿದೆ.

    ಕೇರಳದಲ್ಲಿ ಭಾರತದ ಮೊದಲನೇ ಮತ್ತು ಎರಡನೇ ಕೊರೊನಾ ವೈರಸ್​ ಸೋಂಕಿತರು ಪತ್ತೆಯಾಗಿದ್ದಾರೆ. ಈ ಇಬ್ಬರೂ ಸಹ ಚೀನಾದಿಂದ ಭಾರತಕ್ಕೆ ಜನವರಿ 23ರಂದು ವಿಮಾನದಲ್ಲಿ ಬಂದಿದ್ದರು ಎನ್ನಲಾಗಿದೆ. ಸೋಂಕಿತರು ಪ್ರಯಾಣಿಸಿದ ವಿಮಾನದಲ್ಲಿ ಅವರ ಮುಂದೆ ಮತ್ತು ಹಿಂದೆ ಕುಳಿತಿದ್ದ ಒಟ್ಟು ಎಂಟು ಜನರನ್ನು ಗುರುತಿಸಲಾಗಿದೆ. ಇದರಲ್ಲಿ ಇಬ್ಬರು ಕೊಲ್ಕತ್ತದ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಅವರಿಬ್ಬರನ್ನೂ ಅಸನ್ಸೋಲ್ ಮತ್ತು ಒಡಿಶಾ ನಿವಾಸಿಗಳೆಂದು ಗುರುತಿಸಲಾಗಿದೆ. ಎಂಟರಲ್ಲಿ ಮೂರು ಜನರು ಚೀನಾದವರಾಗಿದ್ದು ಅವರೆಲ್ಲರೂ ಈಗಾಗಲೇ ಚೀನಾಕ್ಕೆ ಮರಳಿರುವುದಾಗಿ ಆರೋಗ್ಯ ಇಲಾಖೆಯ ನಿರ್ದೇಶಕ ಅಜಯ್​ ಕುಮಾರ್​ ತಿಳಿಸಿದ್ದಾರೆ.

    ಒಬ್ಬ ಪ್ರಯಾಣಿಕ ದೆಹಲಿ ಮೂಲದ ಚೀನಾ ನಿವಾಸಿಯಾಗಿದ್ದು ಆತ ಕೂಡ ಈಗಾಗಲೇ ಚೀನಾಕ್ಕೆ ಮರಳಿದ್ದಾನೆ. ಇನ್ನಿಬ್ಬರು ಪಶ್ಚಿಮ ಬಂಗಾಳದವರಾಗಿದ್ದು, ಅವರಿಬ್ಬರನ್ನು ರಾಜ್ಯದ ಆರೋಗ್ಯ ಇಲಾಖೆಯು ವೈದ್ಯಕೀಯ ತಪಾಸಣೆಗೆ ಒಳಪಡಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts