More

    ಜ್ಞಾನಯೋಗಿ ಸಿದ್ಧೇಶ್ವರ ಶ್ರೀಗಳು ರಚಿಸಿದ ಸಂಪುಟಗಳು ಬಿಡುಗಡೆಗೆ ಸಿದ್ಧ, ಪೂಜ್ಯರು ಅಂತಿಮ ಕ್ಷಣದಲ್ಲಿ ಬಿಡುಗಡೆಗೊಳಿಸಿದ್ದ ಸಂಪುಟಗಳ ಲೋಕಾರ್ಪಣೆ, ಎಲ್ಲಿ? ಯಾವಾಗ? ಹೇಗಿರಲಿದೆ ಕಾರ್ಯಕ್ರಮ ಗೊತ್ತಾ?

    ವಿಜಯಪುರ: ಜ್ಞಾನಯೋಗಾಶ್ರಮದ ವೇದಾಂತ ಕೇಸರಿ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಪ್ರವಚನಗಳ ಸಾರವನ್ನಾಧರಿಸಿ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳು ರಚಿಸಿದ ಸಾಹಿತ್ಯ ಸಂಪುಟಗಳನ್ನು ಮಾ. 30 ರಂದು ಬಿಡುಗಡೆಗೊಳಿಸಲಾಗುತ್ತಿದೆ.
    ಅಂದು ಬೆಳಗ್ಗೆ 6.30ಕ್ಕೆ ನಗರದ ಜ್ಞಾನ ಯೋಗಾಶ್ರಮದಲ್ಲಿ ಸಂಪುಟ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೂಜ್ಯ ಬಸವಲಿಂಗ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳು, ಅಭಿನವ ಸದಾಶಿವಾನಂದ ಮಹಾಸ್ವಾಮಿಗಳು, ನಿರ್ಭಯಾನಂದ ಸ್ವಾಮಿಗಳು, ಶ್ರದ್ಧಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಸಹೋದರಿ ವೀಣಾ ಬನ್ನಂಜಿ ಗ್ರಂಥ ಪರಿಚಯ ಕಾರ್ಯಕ್ರಮ ನಡೆಸಿಕೊಡಲ್ಲಿದ್ದಾರೆ.
    ಲಿಂ. ಸಿದ್ಧೇಶ್ವರ ಶ್ರೀಗಳು ತಮ್ಮ ಅಂತಿಮ ದಿನಗಳಲ್ಲಿ ಸಾಂಕೇತಿಕವಾಗಿ ಸಂಪುಟ ಬಿಡುಗಡೆಗೊಳಿಸಿದ್ದರು. ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮಿಗಳು ವಚನ, ವೇದ, ಉಪನಿಷತ್ತು, ಭಗವದ್ಗೀತೆ, ಯೋಗಸೂತ್ರ, ಸಿದ್ಧಾಂತ ಶಿಖಾಮಣಿ ಮೊದಲಾದ ವಿಶ್ವಮಾನ್ಯವಾದ ಭಾರತೀಯ ಆಧ್ಯಾತ್ಮಿಕ ಗ್ರಂಥಗಳ ಮೇಲೆ ಪ್ರವಚನ ಮಾಡಿದರು. ಯಾವುದೇ ಜಾತಿ ಮತ, ಪಂಥಗಳಿಗೆ ಅಂಟಿಕೊಳ್ಳದ ಪೂಜ್ಯರ ಎಲ್ಲ ಪ್ರವಚನಗಳನ್ನು ಅತ್ಯಂತ ಸರಳ ಹಾಗೂ ಸುಂದರ ಶೈಲಿಯಲ್ಲಿ ಸಿದ್ಧೇಶ್ವರ ಶ್ರೀಗಳು ಸಂಪುಟ ರಚಿಸಿದ್ದಾರೆ.
    ಈಶಾವಾಶ್ಯೋಪನಿಷತ್, ಕೇನೋಪನಿಷತ್, ಕಠೋಪನಿಷತ್, ಮುಂಡಕೋಪನಿಷತ್, ಮಾಂಡೂಕ್ಯೋಪನಿಷತ್, ಶ್ವೇತಾಶ್ವತರೋಪನಿಷತ್, ಪಾತಂಜಲಿ ಯೋಗಸೂತ್ರ, ಶ್ರೀಮದ್ ಭಗವದ್ಗೀತೆ, ಸಿದ್ಧಾಂತ ಶಿಖಾಮಣಿ, ಅಲ್ಲಮಪ್ರಭುದೇವರ ವಚನ ನಿರ್ವಚನ ಗ್ರಂಥಗಳನ್ನು ಇದೀಗ ಲೋಕಾರ್ಪಣೆಗೊಳಿಸಲಾಗುತ್ತಿದೆ ಎಂದು ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮಿಜಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts