More

    ಸದಾ ಶಾಂತಿ ಕದಡುವ ಪಿಎಫ್​ಐ ಸಂಘಟನೆಯನ್ನು ನಿಷೇಧಿಸುವಂತೆ ಉತ್ತರಪ್ರದೇಶ ಗೃಹ ಸಚಿವಾಲಯಕ್ಕೆ ಪತ್ರ ಬರೆದ ಪೊಲೀಸ್ ಇಲಾಖೆ

    ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ರಾಜ್ಯದಲ್ಲಿ ಹಿಂಸಾಚಾರಕ್ಕೆ ತಿರುಗಲು ಪ್ರಮುಖವಾಗಿ ಕಾರಣವಾದ ಪಾಪ್ಯುಲರ್ ಫ್ರಂಟ್​ ಆಫ್​ ಇಂಡಿಯಾ ಸಂಘಟನೆಯನ್ನು ನಿಷೇಧಿಸುವಂತೆ ಉತ್ತರಪ್ರದೇಶದ ಪೊಲೀಸ್​ ಇಲಾಖೆ ರಾಜ್ಯ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.

    ಪತ್ರ ಡಿಜಿಪಿ ಮುಖ್ಯಕಚೇರಿಯಿಂದ ಗೃಹ ಸಚಿವಾಲಯಕ್ಕೆ ಕಳಿಸಲ್ಪಟ್ಟಿದೆ. ಪಿಎಫ್​ಐ ನಿಷೇಧಿಸುವಂತೆ ಕೋರಿ ಬರೆಯಲಾದ ಪತ್ರವನ್ನು ಕೇಂದ್ರಕ್ಕೆ ಕಳಿಸುವ ಮೊದಲು ಪರಾಮರ್ಶಿಸಲಾಗುವುದು ಎಂದು ಯುಪಿ ಗೃಹ ಇಲಾಖೆ ತಿಳಿಸಿದೆ.

    ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವಲ್ಲಿ ಪಿಎಫ್​ಐ ಸಂಘಟನೆಯ ಕಾರ್ಯಕರ್ತರೇ ಮುಖ್ಯಕಾರಣ. ಇವರೆಲ್ಲ ನಿಷೇಧಿತ ಇಸ್ಲಾಮಿಕ್​ ಗ್ರೂಪ್​​, ಸ್ಟುಡೆಂಟ್​ ಇಸ್ಲಾಮಿಕ್​ ಮೂವ್​ಮೆಂಟ್ ಆಫ್​ ಇಂಡಿಯಾ ಜತೆ ಸೇರಿಕೊಂಡು ಈ ಗಲಭೆ ನಡೆಸಿದ್ದಾರೆ ಎಂದು ಜಿಡಿಪಿ ಕಚೇರಿ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

    ಹಿಂಸಾತ್ಮಕ ಕೃತ್ಯಗಳನ್ನು ನಡೆಸಿದ ಆರೋಪದ ಮೇಲೆ ಈಗಾಗಲೇ ಪೊಲೀಸ್ ಇಲಾಖೆ ಪಿಎಫ್​ಐನ ಒಟ್ಟು 22 ಸದಸ್ಯರನ್ನು ಬಂಧಿಸಿದೆ.

    2010ರಿಂದಲೂ ಉತ್ತರ ಪ್ರದೇಶದ ಹಲವು ಕಡೆಗಳಲ್ಲಿ ಪಿಎಫ್​ಐ ಸಂಘಟನೆ ಸಕ್ರಿಯವಾಗಿದ್ದು ಅನೇಕ ಬಾರಿ ಶಾಂತಿ ಕದಡುವ ಕೃತ್ಯದಲ್ಲಿ ಪಾಲ್ಗೊಂಡಿದೆ ಎಂದು ಪೊಲೀಸ್ ಇಲಾಖೆ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts