More

    ‘ತಿರುಪತಿ ಲಡ್ಡು’ಗೆ ಇಂದು 305ನೇ ಬರ್ತ್​ ಡೇ ಸಂಭ್ರಮ !

    ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಕೊಡುವ ಲಡ್ಡು ಅದೆಷ್ಟು ಪ್ರಸಿದ್ಧವಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಬರೀ ಪ್ರಸಾದವಾಗಿಯಷ್ಟೇ ಅಲ್ಲ, ಸಿಹಿತಿಂಡಿಯಾಗಿಯೂ ಖ್ಯಾತಿ ಗಳಿಸಿದೆ. ಹಾಗೇ ತಿರುಪತಿ ಲಡ್ಡುವಿನ ರುಚಿ ಇನ್ನೆಲ್ಲೂ ಸಿಗಲಾರದು ಕೂಡ. ಈ ಪ್ರಸಿದ್ಧ ಪ್ರಸಾದಕ್ಕೀಗ 305ನೇ ವರ್ಷದ ಬರ್ತ್​ ಡೇ ಸಂಭ್ರಮ !

    ವಿಶ್ವದ ಅತ್ಯಂತ ಶ್ರೀಮಂತ ತೀರ್ಥ ಕ್ಷೇತ್ರವಾದ ತಿರುಪತಿ ದೇವಾಲಯಕ್ಕೆ ಬರುವ ಯಾತ್ರಾರ್ಥಿಗಳ ಪುಣ್ಯ ಯಾತ್ರೆ ಈ ಲಡ್ಡುವನ್ನು ಪ್ರಸಾದವನ್ನಾಗಿ ಪಡೆಯದೆ ಪೂರ್ಣಗೊಳ್ಳುವುದಿಲ್ಲ. ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ, ಏಲಕ್ಕಿ, ಡ್ರೈಫ್ರುಟ್ಸ್​ಗಳಿಂದ ಕೂಡಿರುವ ತಿರುಪತಿ ಲಾಡು ಮೊದಲ ಬಾರಿಗೆ ಸಿದ್ಧವಾಗಿದ್ದು 1715ರ ಆಗಸ್ಟ್​ 2ರಂದು. ಇದೀಗ ಲಡ್ಡುವಿಗೆ 305 ವರ್ಷ ಪೂರ್ಣಗೊಂಡಿದೆ. ಈ ದೇಗುಲದಲ್ಲಿ ಹಲವು ರೀತಿಯ ಪ್ರಸಾದಗಳನ್ನು ಕೊಡಲಾಗುತ್ತಾದರೂ ಲಡ್ಡುವಿನಷ್ಟು ಮತ್ಯಾವುದೂ ಖ್ಯಾತವಾಗಿಲ್ಲ.

    ಆದಾಯದ ಮೂಲವೂ ಹೌದು: ತಿರುಪತಿ ದೇವಸ್ಥಾನಕ್ಕೆ ಲಡ್ಡು ಆದಾಯ ಮೂಲವೂ ಹೌದು. ಅಲ್ಲಿ ಪೂಜೆಯನ್ನು ಮಾಡಿಸಲು ಬರುವ ಭಕ್ತರ ಬಳಿ ಹಣವನ್ನು ತೆಗೆದುಕೊಂಡು ಲಡ್ಡು ಟೋಕನ್​ ನೀಡಲಾಗುತ್ತದೆ. ಕೆಲವು ವಿಶೇಷ ಸಮಾರಂಭಗಳ ಸಮಯದಲ್ಲಿ ಲಡ್ಡುವನ್ನು ದೆಹಲಿ ಮತ್ತು ಬೇರೆ ರಾಜ್ಯಗಳಲ್ಲೂ ತಯಾರಿಸಿ ವಿತರಣೆ ಮಾಡಲಾಗುತ್ತದೆ. ಬ್ರಹ್ಮೋತ್ಸವದಂತಹ ಉತ್ಸವಗಳಲ್ಲಿ ಹೆಚ್ಚಿನ ಲಡ್ಡುಗಳು ತಯಾರಾಗುತ್ತವೆ. ಇದನ್ನೂ ಓದಿ: ಯಾರಿಗೆ ಸಿಗುತ್ತೆ? ಯಾರಿಗೆ ಇಲ್ಲ? ಶ್ರೀಮಂತ ದೇಶಗಳಿಂದ ಮುಂಗಡ ಖರೀದಿ; 100 ಕೋಟಿ ಡೋಸ್​ಗೆ ಹಣ ಪಾವತಿ

    ಸಿಹಿ ತಿನಿಸುಗಳ ಅಂಗಡಿಯೊಂದು ತಮ್ಮಲ್ಲಿ ತಯಾರಿಸುವ ಲಡ್ಡುವಿಗೆ ತಿರುಪತಿ ಲಡ್ಡು ಎಂದು ಹೆಸರು ಕೊಟ್ಟಿತ್ತು. ಆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ತಿರುಮಲ ತಿರುಪತಿ ದೇವಸ್ಥಾನಂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ತಿರುಪತಿಯಲ್ಲಿ ತಯಾರಾಗುವ ಲಡ್ಡುವಿಗೆ ಅದರದ್ದೇ ಆದ ಪಾವಿತ್ರ್ಯತೆ ಇದೆ. ಲಡ್ಡುವನ್ನು ಪ್ರಸಾದ ರೂಪದಲ್ಲಿ ಕೊಡುವ ಮೊದಲು ಅದನ್ನು ವೆಂಕಟೇಶ್ವರನ ಪಾದಕ್ಕೆ ನೈವೇದ್ಯ ರೂಪದಲ್ಲಿ ಅರ್ಪಿಸಲಾಗುತ್ತದೆ ಎಂದು ವಾದಿಸಿತ್ತು. ಅದಾದ ಬಳಿಕ ಮದ್ರಾಸ್ ಹೈ ಕೋರ್ಟ್​, ಇನ್ನುಮುಂದೆ ತಿರುಪತಿ ಲಡ್ಡು ಎಂಬ ಬ್ರ್ಯಾಂಡ್ ಬಳಸಬಾರದು ಎಂದು ತೀರ್ಪು ನೀಡಿತ್ತು. (ಏಜೆನ್ಸೀಸ್​)

    ರಾಮಮಂದಿರ ಭೂಮಿ ಪೂಜೆ v/s ಇಂದಿರಾಗಾಂಧಿ ಭಾಷಣ: ಏಟು-ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts