ಚಿಕ್ಕೋಡಿ: ಕಳ್ಳರಿಗೆ ಕಳ್ಳತನ ಮಾಡಲು ಯಾವ ಜಾಗವಾದರೇನು, ದೇವರಾದರೇನು ಇಲ್ಲ ಮನುಷ್ಯರಾದರೇನು ಒಟ್ಟಾರೆ ಕಳ್ಳತನ ಮಾಡುವುದೊಂದೇ ಅವರ ಕಾಯಕ.
ಹೀಗೊಂದು ಘಟನೆ ನಡೆದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಕೂಡ ದೇವಸ್ಥಾನದಲ್ಲಿದ್ದ ದೇವರ ಮೂರ್ತಿಯನ್ನೇ ಕದ್ದೊಯ್ದಿದ್ದಾರೆ. ದೇವರ ಮೂರ್ತಿಯನ್ನೇ ಕದ್ದೊಯ್ದಿರುವುದು ಭಾರೀ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಕೊಕಟನೂರ ಗ್ರಾಮದ ಬೀರೇಶ್ವರ ದೇವಸ್ಥಾನದ ದೇವರ ಮೂರ್ತಿಯನ್ನೇ ಕದ್ದಿದ್ದಾರೆ, ಐತಿಹಾಸಿಕ ಪರಂಪರೆಯುಳ್ಳ ಕಲ್ಲಿನ ಮೂರ್ತಿಯನ್ನು ದೋಚಿದ್ದು, ನಿಧಿಗಳ್ಳರೇ ಈ ಕೃತ್ಯವೆಸಗಿರಬಹುದು ಎಂದು ಅನುಮಾನಿಸಲಾಗಿದೆ.
ತಡರಾತ್ರಿ ಘಟನೆ ಸಂಭವಿಸಿದ್ದು, ಮುಂಜಾನೆ ಪೂಜಾರಿ ಬಂದು ದೇಗುಲದ ಪೂಜೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ದೇವರ ಮೂರ್ತಿಯನ್ನು ನಿಧಿಕಳ್ಳತನ ಮಾಡಲು ಹಾಗೂ ವಾಮಾಚಾರಕ್ಕಾಗಿ ಬಳಸಿಕೊಳ್ಳಲು ಕಳ್ಳತನ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)