More

    ರೈಲಿನಲ್ಲಿ ಮಹಿಳೆಯ ಬ್ಯಾಗ್ ಕದ್ದ ಕಳ್ಳ..ಪೊಲೀಸ್..ಜೈಲಿಗೆ

    ಬೆಂಗಳೂರು: ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರ ಬ್ಯಾಗ್ ಕಳವು ಮಾಡಿದ್ದ ಆರೋಪದ ಮೇಲೆ ರೈಲ್ವೆ ಕಾನ್‌ಸ್ಟೆಬಲ್ ಸೇರಿ ಇಬ್ಬರನ್ನು ದಂಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
    ಚಿಕ್ಕಬಾಣವಾರ ನಿವಾಸಿ ಸಾಬಣ್ಣ (38) ಮತ್ತು ಚಿಕ್ಕಬಳ್ಳಾಪುರ ರೈಲ್ವೆ ಹೊರ ಉಪಠಾಣೆ ಹೆಡ್ ಕಾನ್‌ಸ್ಟೆಬಲ್ ಸಿದ್ದರಾಮ ರೆಡ್ಡಿ(38) ಬಂಧಿತರು. ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸೇವೆಯಿಂದ ಸಿದ್ದರಾಮನನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಯಾದಗಿರಿ ಜಿಲ್ಲೆಯ ಸಾಬಣ್ಣ ಮತ್ತು ರಾಯಚೂರು ಮೂಲದ ಸಿದ್ದರಾಮ, ಹಳೆಯ ಪರಿಚಯ. ರಾಯಚೂರಿನಲ್ಲಿ ಹೆಡ್‌ಕಾನ್‌ಸ್ಟೆಬಲ್ ಸಿದ್ದರಾಮ ರೆಡ್ಡಿ, ಕರ್ತವ್ಯ ನಿರ್ವಹಿಸುತ್ತಿದ್ದ. ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಸಾಬಣ್ಣ ಬಂಧನಕ್ಕೆ ಒಳಗಾದ ಸಮಯದಲ್ಲಿ ಸಿದ್ದರಾಮ ರೆಡ್ಡಿ, ವಿಚಾರಣೆ ನಡೆಸುವಾಗ ಪರಿಚಯವಾಗಿತ್ತು. ಅಲ್ಲದೆ, ಹಳೆಯ ಆರೋಪಿಗಳ ಸ್ವ-ವಿವರ ಒಳಗೊಂಡ ಎಂಒಬಿ ಕಾರ್ಡ್‌ನ್ನು ಸಾಬಣ್ಣನ ವಿರುದ್ಧ ತೆರೆಯಲಾಗಿತ್ತು. ಕಾಲ ಕಾಲಕ್ಕೆ ಸಾಬಣ್ಣನನ್ನು ಕರೆದು ವಿಚಾರಣೆ ಮಾಡುವಾಗ ಮತ್ತಷ್ಟು ಸ್ನೇಹ ಬೆಳದಿತ್ತು. ಕೊನೆಗೊಂದು ಸಾಬಣ್ಣ ಜತೆ ಸೇರಿ ಅಪರಾಧ ಪ್ರಕರಣ ಎಸಗಿದ ಆರೋಪದ ಮೇಲೆ ಸಿದ್ದರಾಮ ರೆಡ್ಡಿ ಸೇವೆಯಿಂದ ಅಮಾನತುಗೊಂಡಿದ್ದ.

    ಅಮಾನತು ತೆರವು ಮಾಡಿಕೊಂಡು ಸಿದ್ದರಾಮ ರೆಡ್ಡಿ, ಬೆಂಗಳೂರು ನಗರಕ್ಕೆ ಬೈಯಪ್ಪನಹಳ್ಳಿ ರೈಲ್ವೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಪತ್ನಿ, ಮಕ್ಕಳೊಂದಿಗೆ ಸಿದ್ದರಾಮ ರೆಡ್ಡಿ ಜೀವನ ಸಾಗಿಸುತ್ತಿದ್ದ. ಮತ್ತೊಂದೆಡೆ ಸಾಬಣ್ಣ, ರಾಯಚೂರು ಬಿಟ್ಟು ಬೆಂಗಳೂರಿಗೆ ಬಂದು ಕೂಲಿ ಕೆಲಸ ಮತ್ತು ಸಣ್ಣಪುಟ್ಟ ಅಪರಾಧ ಮಾಡಿಕೊಂಡಿದ್ದ.
    ಇದರ ನಡುವೆ ಸಾಬಣ್ಣ ಮತ್ತು ಸಿದ್ದರಾಮ ಆಕಸ್ಮಿಕವಾಗಿ ಮುಖಾಮುಖಿಯಾಗಿದ್ದರು. ಮತ್ತೆ ಕಳ್ಳತನ ಶುರು ಮಾಡಿದರೇ ನಾನು ಸಹಾಯ ಮಾಡುವುದಾಗಿ ಸಿದ್ದರಾಮ ರೆಡ್ಡಿ, ಆರೋಪಿ ಸಾಬಣ್ಣನಿಗೆ ಧೈರ್ಯ ತುಂಬಿ ಒಟ್ಟಿಗೆ ಕಳ್ಳತನಕ್ಕೆ ಇಳಿದಿದ್ದರು. ಯಾವ ರೈಲು ಯಾವ ಸಮಯಕ್ಕೆ ಎಲ್ಲಿಗೆ ಬರಲಿದೆ ಎಂಬ ಮಾಹಿತಿ ತಿಳಿದಿದ್ದ ಸಿದ್ದರಾಮ ರೆಡ್ಡಿ, ಎಲ್ಲವನ್ನು ಸಾಬಣ್ಣನಿಗೆ ಮಾಹಿತಿ ಕೊಟ್ಟಿದ್ದ. ಪೊಲೀಸ್ ಇಲಾಖೆಯ ಕಾರಿನಲ್ಲಿ ಸಿದ್ದರಾಮ ರೆಡ್ಡಿ, ಆರೋಪಿ ಸಾಬಣ್ಣನನ್ನು ಕರೆದುಕೊಂಡು ಬೆಳಗಿನ ಜಾವ 3 ರಿಂದ 4 ಗಂಟೆ ನಡುವೆ ಕೆ.ಆರ್.ಪುರ, ಬಾಣಸವಾಡಿ ಅಥವಾ ಟಿನ್ ್ಯಾಕ್ಟರಿ ಬಳಿ ಬಿಡುತ್ತಿದ್ದ.

    ರೈಲುಗಳು ನಿಧಾನವಾಗಿ ಚಲಿಸುತ್ತಿದ್ದಾಗ ಸಾಬಣ್ಣ, ರೈಲು ಏರಿ ಎಲ್ಲ ಬೋಗಿಗಳಲ್ಲಿ ಸುತ್ತಾಡುತ್ತಿದ್ದ. ಸೀಟ್ ಮೇಲೆ ಬ್ಯಾಗ್ ಇಟ್ಟು ಅಥವಾ ನಿದ್ದೆ ಮಂಪರಿನಲ್ಲಿ ಇರುವ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಬೆಲೆ ಬಾಳುವ ವಸ್ತುಗಳನ್ನು ಕದ್ದು, ಸಿದ್ದರಾಮ ರೆಡ್ಡಿಗೆ ಕರೆ ಮಾಡಿ ಮಾರ್ಗಮಧ್ಯೆದಲ್ಲಿಯೇ ಇಳಿದುಕೊಳ್ಳುತ್ತಿದ್ದ. ಅಲ್ಲಿಂದ ಒಟ್ಟಿಗೆ ಕಾರಿನಲ್ಲಿ ಪರಾರಿಯಾಗುತ್ತಿದ್ದರು. ಕದ್ದ ವಸ್ತುಗಳನ್ನು ಮಾರಾಟ ಮಾಡಿ ಅಥವಾ ಹಂಚಿಕೊಳ್ಳುತ್ತಿದ್ದರು ಎಂದು ರೈಲ್ವೇ ಎಸ್‌ಪಿ ಡಾ.ಸೌಮ್ಯಲತಾ ಮಾಹಿತಿ ನೀಡಿದ್ದಾರೆ.

    ಬಾಯ್ಬಿಟ್ಟ ಆರೋಪಿ :

    ಆಗಸ್ಟ್ 23ರಂದು ಹೆಬ್ಬಾಳ ನಿವಾಸಿ ಉಷಾ ಶ್ರೀಕುಮಾರ್ ತಮ್ಮ ಕುಟುಂಬದ ಜತೆ ತ್ರಿಶೂರ್‌ನಿಂದ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬರುತ್ತಿದ್ದರು. ಬೆಳಗಿನ ಜಾವ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಸಮೀಪ ರೈಲು ನಿಧಾನವಾಗಿ ಚಲಿಸುವಾಗ ಅಪರಿಚಿತ ವ್ಯಕ್ತಿ, ಏಕಾಏಕಿ ಸೀಟ್ ಮೇಲೆ ಇಟ್ಟಿದ್ದ ಉಷಾ ಅವರ ಬ್ಯಾಗ್‌ನ್ನು ಎತ್ತಿಕೊಂಡು ರೈಲಿನಿಂದ ಎಗರಿ ಪರಾರಿಯಾಗಿದ್ದ.
    ಈ ಬಗ್ಗೆ ಉಷಾ ನೀಡಿದ ದೂರಿನ ಮೇರೆಗೆ ದಂಡು ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್‌ಪಿ ರವಿಕುಮಾರ್ ಉಸ್ತುವಾರಿಯಲ್ಲಿ ಇನ್‌ಸ್ಪೆಕ್ಟರ್ ಎಂ.ಎನ್. ರವಿಶಂಕರ್ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯಾಚರಣೆಗೆ ಇಳಿದಿತ್ತು.
    ಕೆ.ಆರ್.ಪುರ ರೈಲು ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಸಾಬಣ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಜತೆಗೆ ಹೆಡ್‌ಕಾನ್‌ಸ್ಟೆಬಲ್ ಸಿದ್ದರಾಮ ರೆಡ್ಡಿಯೇ ಕೃತ್ಯಕ್ಕೆ ಬೆಂಬಲಿಸುತ್ತಿದ್ದರು ಎಂದು ಬಾಯ್ಬಟ್ಟಿದ್ದ. ಇದರ ಮೇರೆಗೆ ಸಿದ್ದರಾಮ ರೆಡ್ಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜೂಜಾಟದ ವ್ಯಸನಿ :

    ಹಳೆಯ ಆರೋಪಿ ಸಾಬಣ್ಣ, ಆಕಸ್ಮಿಕವಾಗಿ ಸಿಕ್ಕಾಗ ಸಿದ್ದರಾಮ ರೆಡ್ಡಿ ಮತ್ತೆ ಕಳ್ಳತನ ಶುರು ಮಾಡುವಂತೆ ಪ್ರೇರೆಪಿಸಿದ್ದ. ನಾನು ಜೂಜಾಟದಲ್ಲಿ ಸಾಕಷ್ಟು ಸಾಲ ಮಾಡಿಕೊಂಡಿದ್ದೆನೆ. ನೀನು ಕಳ್ಳತನ ಶುರು ಮಾಡು. ಏನಾದರೂ ಪೊಲೀಸರಿಗೆ ಸೆರೆಸಿಕ್ಕರೇ ನಾನು ಅದನ್ನು ನೋಡಿಕೊಳ್ಳುತ್ತೆನೆ. ಜತೆಗೆ ಎಲ್ಲಿ ಯಾವಾಗ ಕಳ್ಳತನ ಮಾಡಬೇಕೆಂದು ಮಾಹಿತಿ ಸಹ ಕೊಡುತ್ತಿದ್ದೆನೆ ಎಂದು ಭರವಸೆ ಕೊಟ್ಟಿದ್ದ. ಆರೋಪಿಗಳುಸೆರೆ ಸಿಕ್ಕ ಮೇಲೆ ನಾಲ್ಕು ಪ್ರಕರಣ ಬೆಳಕಿಗೆಬಂದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts