More

    ಇನ್ನೊಂದು ಚಿತ್ರದಲ್ಲಿ ಮಂಡ್ಯ ರಮೇಶ್​ ಮಗಳು ದಿಶಾ … ಯಾವುದು ಗೊತ್ತಾ?

    ಬೆಂಗಳೂರು: ‘ದೇವರ ನಾಡಲ್ಲಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಹಿರಿಯ ನಟ ಮಂಡ್ಯ ರಮೇಶ್​ ಅವರ ಮಗಳು ದಿಶಾ ರಮೇಶ್​. ಆ ನಂತರ ಅವರು ಇನ್ನೊಂದು ಚಿತ್ರ ಅಂತ ಒಪ್ಪಿದ್ದು ‘ಎಸ್​.ಎಲ್​.ವಿ’. ಅದು ಮುಗಿಯುವ ಮುನ್ನವೇ ಮತ್ತೊಂದು ಚಿತ್ರಕ್ಕೆ ನಾಯಕಿಯಾಗಿದ್ದಾರೆ ದಿಶಾ.

    ಇದನ್ನೂ ಓದಿ: ಮತ್ತೊಮ್ಮೆ ವಿಜಯ್​ ಜೊತೆ ಹಾಟ್​ ಆಗಿ ಕಾಣಿಸಿಕೊಂಡ ತಮನ್ನಾ: ಬೇಸರ ಹೊರಹಾಕಿದ ಅಭಿಮಾನಿಗಳು

    ಈ ಚಿತ್ರದ ಚಿತ್ರೀಕರಣ ಮುಗಿದಿರುವುದಷ್ಟೇ ಅಲ್ಲ, ಮಾರ್ಚ್​ನಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಮೊದಲ ಹಂತವಾಗಿ ಇತ್ತೀಚೆಗೆ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಚಿತ್ರಕ್ಕೆ ಕೆಲಸ ಮಾಡಿರುವ ಪ್ರೊಡಕ್ಷನ್​ ಹುಡುಗರು ಈ ಚಿತ್ರದ ಟೀಸರ್​ ಬಿಡುಗಡೆ ಮಾಡಿರುವುದು ವಿಶೇಷ.

    ‘ಕಡೆಮನೆ’ ಸಿನಿಮಾ ಮೂಲಕ ಗಮನಸೆಳೆದ ನಿರ್ದೇಶಕ ವಿನಯ್ ‘ದಿ’ ಸಿನಿಮಾ ಮೂಲಕ ವಾಪಸ್ಸಾಗಿದ್ದಾರೆ. ಈ ಚಿತ್ರಕ್ಕೆ ಅವರು ಬರೀ ನಿರ್ದೇಶಕನಷ್ಟೇ ಅಲ್ಲ, ನಾಯಕ ಸಹ. ಜತೆಗೆ ಕಥೆ, ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘ಡಾಲರ್ ಸುತ್ತ ಈ ಚಿತ್ರದ ಕಥೆ ಸಾಗುತ್ತಿದೆ. ‘ದಿ’ ಅಂದ್ರೆ ದಿವ್ಯ ಮತ್ತು ದೀಪಕ್. ಜೀವನದಲ್ಲಿ ಆಕಸ್ಮಿಕ ಘಟನೆಗಳು ಯಾವಾಗ ನಡೆಯುತ್ತೆ ಅನ್ನೋದು ಗೊತ್ತಾಗೋದಿಲ್ಲ. ವೀಕೆಂಡ್ ನಲ್ಲಿ ಔಟಿಂಗ್​ಗೆಂದು ಕಾಡಿಗೆ ಹೋದ ಕ್ಯೂಟ್ ಲವರ್ಸ್ ಜೀವನದಲ್ಲಿ ಏನೇನು ಆಗುತ್ತದೆ, ಅವರಿಗೆ ಗೊತ್ತಿಲ್ಲದೇ ಅವರ ಜೀವನದಲ್ಲಿ ಇನ್ಯಾರ ಪ್ರವೇಶವಾಗುತ್ತದೆ, ಮುಂದೆ ಆ ಪ್ರೇಮಿಗಳು ಏನೆಲ್ಲ ಆಗುತ್ತಾರೆ ಎಂಬುದರ ಸುತ್ತ ಈ ಚಿತ್ರ ಸುತ್ತುತ್ತದೆ’ ಎಂದು ಹೇಳಿಕೊಂಡರು.

    ‘ವಿನಯ್ ಈ ಸಿನಿಮಾ ಬಗ್ಗೆ ಹೇಳಿದಾಗ ಆಸಕ್ತಿ ಹೆಚ್ಚಾಯಿತು. ಇದೊಂದು ಪ್ರೇಮಕಥೆ. ತುಂಬಾ ಸರಳವಾಗಿ ಸಾಗುತ್ತದೆ. ಆದರೆ, ಹಲವು ತಿರುವುಗಳಿವೆ. ಸಿನಿಮಾದ ಬಹುತೇಕ ಭಾಗವನ್ನು ಮಾಡಬೇಕು ಎಂದಾಗ ತಕ್ಷಣ ಒಪ್ಪಿಕೊಂಡೆ. ಈ ಸಿನಿಮಾ ಒಂದೊಳ್ಳೆಯ ಅನುಭವ ನೀಡಿದೆ’ ಎನ್ನುತ್ತಾರೆ.

    ಇದನ್ನೂ ಓದಿ: ನಾನು ಮತ್ತೆ ಹಿಂತಿರುಗಿ ಹೋಗಬೇಕು…”;ವಿಜಯ್ ಜೊತೆಗಿನ ಮಾಲ್ಡೀವ್ಸ್ ಪ್ರವಾಸ ನೆನಪಾಯ್ತಾ ಎಂದು ಕಾಲೆಳೆದ ಫ್ಯಾನ್ಸ್!

    ‘ದಿ’ ಚಿತ್ರದಲ್ಲಿ ನಾಗೇಂದ್ರ ಅರಸ್​, ಹರಿಣಿ, ಬಾಲ ರಾಜ್ವಾಡಿ, ನಾಗೇಂದ್ರ ಅರಸ್ ಸೇರಿದಂತೆ ಹಲವರು ನಟಿಸಿದ್ದಾರೆ. ವಿಡಿಕೆ ಸಿನಿಮಾಸ್ ಬ್ಯಾನರ್​​ನಡಿ ಈ ಚಿತ್ರ ನಿರ್ಮಾಣವಾಗಿದೆ. ಬೆಂಗಳೂರು, ತುಮಕೂರು, ಮೈಸೂರು, ಮೂಡುಗೆರೆ, ಚಿಕ್ಕಮಗಳೂರು, ಹೊನ್ನಾವರ, ಉತ್ತರ ಕನ್ನಡ, ಕೇರಳದಲ್ಲಿ ‘ದಿ’ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಆಲನ್ ಭರತ್ ಛಾಯಾಗ್ರಹಣ, ಸ್ಟೀವನ್ ಸತೀಶ್ ಸಂಗೀತ ಈ ಚಿತ್ರಕ್ಕಿದೆ.

    ಮೂರು ದಶಕಗಳ ವೈರತ್ವಕ್ಕೆ ತಾರಕ್​ ಮತ್ತು ರಾಮ್​ಚರಣ್​ ಅಂತ್ಯ ಹಾಡಿದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts