More

    ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಗುಡ್‌ನ್ಯೂಸ್ ನೀಡಿದ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ : ಅಂಪೈರ್ ಎರಾಸ್ಮಸ್ ನಿವೃತ್ತಿ

    ವೆಲ್ಲಿಂಗ್ಟನ್: ಆಲ್ರೌಂಡರ್ ಕ್ಯಾಮರಾನ್ ಗ್ರೀನ್ (103*, 155 ಎಸೆತ, 16 ಬೌಂಡರಿ) ಶತಕದ ಸಾಹಸದಿಂದ ಪ್ರವಾಸಿ ಆಸ್ಟ್ರೇಲಿಯಾ ತಂಡ ಆರಂಭಿಕ ಕುಸಿತ ಬಳಿಕ ಚೇತರಿಕೆ ಕಂಡಿದ್ದು, ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತ ಕಲೆಹಾಕಿದೆ. ಇದರೊಂದಿಗೆ ಮುಂಬರುವ ಐಪಿಎಲ್ ಟೂರ್ನಿಗೆ ಮುನ್ನ ಗ್ರೀನ್ ಭರ್ಜರಿ ಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

    ಬಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ದಿನದಂತ್ಯಕ್ಕೆ 85 ಓವರ್‌ಗಳಲ್ಲಿ 9 ವಿಕೆಟ್‌ಗೆ 279 ರನ್ ಕಲೆಹಾಕಿದೆ. ಮೊದಲ ವಿಕೆಟ್‌ಗೆ 61 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ಆಸೀಸ್, ಭೋಜನಾ ವಿರಾಮದ ಬಳಿಕ 89 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಕ್ಯಾಮರಾನ್ ಗ್ರೀನ್ ಹಾಗೂ ಮಿಚೆಲ್ ಮಾರ್ಷ್ (40) ಜೋಡಿ 5ನೇ ವಿಕೆಟ್‌ಗೆ 77 ಎಸೆತಗಳಲ್ಲಿ 67 ರನ್‌ಗಳಿಸಿ ಚೇತರಿಕೆ ನೀಡಿತು. ದಿನದಾಟ ಮುಕ್ತಾಯಕ್ಕೆ 2 ಓವರ್‌ಗೆ ಮುನ್ನ ಗ್ರೀನ್ ಟೆಸ್ಟ್‌ನಲ್ಲಿ 2ನೇ ಶತಕ ಸಿಡಿಸಿ ಆಸೀಸ್‌ಗೆ ಮೇಲುಗೈ ತಂದರು.

    ಆಸ್ಟ್ರೇಲಿಯಾ: 9 ವಿಕೆಟ್‌ಗೆ 279 (ಸ್ಮಿತ್ 31, ಖವಾಜ 33, ಗ್ರೀನ್ 103*, ಮಾರ್ಷ್ 40, ಕಮ್ಮಿನ್ಸ್ 16, ಮ್ಯಾಟ್ ಹೆನ್ರಿ 43ಕ್ಕೆ 4, ಸ್ಕಾಟ್ ಕುಗ್‌ಲೆಜಿನ್ 59ಕ್ಕೆ 2).

    ಅಂಪೈರ್ ಮರಾಯಿಸ್ ಎರಾಸ್ಮಸ್ ನಿವೃತ್ತಿ: ದಕ್ಷಿಣ ಆಫ್ರಿಕಾದ ಅಂಪೈರ್ ಮರಾಯಿಸ್ ಎರಾಸ್ಮಸ್ ಕಿವೀಸ್-ಆಸೀಸ್ ಟೆಸ್ಟ್ ಸರಣಿಯ ಬಳಿಕ ಅಂತಾರಾಷ್ಟ್ರೀಯ ಅಂಪೈರಿಂಗ್‌ನಿಂದ ನಿವೃತ್ತಿ ಹೊಂದುವುದಾಗಿ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ದೇಶೀಯ ಟೂರ್ನಿಯಲ್ಲಿ ಬೋಲಾಂಡ್ ತಂಡದ ಪರ ಆಲ್ರೌಂಡರ್ ಆಗಿ ಕಣಕ್ಕಿಳಿದಿದ್ದ ಮರಾಯಿಸ್, 2006ರಲ್ಲಿ ದ.ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದಲ್ಲಿ ಅಂಪೈರ್ ವೃತ್ತಿಗೆ ಪದಾರ್ಪಣೆ ಮಾಡಿದರು.

    2016, 2017 ಹಾಗೂ 2021ರಲ್ಲಿ ಐಸಿಸಿ ವರ್ಷದ ಅಂಪೈರ್ ಪ್ರಶಸ್ತಿಗೆ ಭಾಜನಾರಾಗಿರುವ ಮರಾಯಿಸ್, ಈ ಸಾಧನೆ ಮಾಡಿದ 4ನೇ ಅಂಪೈರ್ ಎನಿಸಿದರು. 2010ರಲ್ಲಿ ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ ಆಗಿ ಸೇರ್ಪಡೆಗೊಂಡಿದ್ದಾರೆ. ಪುರುಷರ ಕ್ರಿಕೆಟ್‌ನಲ್ಲಿ 80 ಟೆಸ್ಟ್, 124 ಏಕದಿನ ಹಾಗೂ 43 ಟಿ20 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿರುವ ಮರಾಯಿಸ್, ಮಹಿಳೆಯರ 18 ಟಿ20 ಪಂದ್ಯಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ. 2024ರ ಏಪ್ರಿಲ್‌ಗೆ ವಾರ್ಷಿಕ ಒಪ್ಪಂದವನ್ನು ಮುಕ್ತಾಯಗೊಳಿಸುವಂತೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಐಸಿಸಿಗೆ ತಿಳಿಸಿದ್ದರು ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts