More

    ಊಟಕ್ಕೆ ಮತದಾನ ಬಂದ್​ ಮಾಡಿದ ಸಿಬ್ಬಂದಿ!

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಚುನಾವಣೆ ಸಮಯದಲ್ಲಿ ಯಂತ್ರ ದೋಷ ಹೊರತುಪಡಿಸಿ ಯಾವುದೇ ಕಾರಣಕ್ಕೂ ಮತದಾನ ಪ್ರಕ್ರಿಯೆ ನಿಲ್ಲಿಸುವಂತಿಲ್ಲ ಎಂಬ ನಿಯಮ ಇದೆ. ಆದರೆ ಧಾರವಾಡದ ಮತಗಟ್ಟೆಯ ಸಿಬ್ಬಂದಿ ಊಟ ಮಾಡುವುದಕ್ಕಾಗಿ ಕೆಲ ಹೊತ್ತು ಮತದಾನ ನಿಲ್ಲಿಸಿ ಯಡವಟ್ಟು ಮಾಡಿಕೊಂಡ ಟನೆ ನಡೆದಿದೆ.
    ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿನ ಮತಗಟ್ಟೆ ಸಂಖ್ಯೆ 180ರಲ್ಲಿ ಟನೆ ನಡೆದಿದೆ. ಮಧ್ಯಾಹ್ನ 1.30ಕ್ಕೆ ಊಟದ ಸಮಯ ಆಗಿದೆ ಎಂದು ಮತದಾನ ಪ್ರಕ್ರಿಯೆ ನಿಲ್ಲಿಸಿದ್ದಾರೆ. ಊಟದ ಸಮಯ ಆಗುತ್ತಿದ್ದಂತೆ ಮತಗಟ್ಟೆ ಕೊಠಡಿಯ ಬಾಗಿಲು ಹಾಕಿ ಸಿಬ್ಬಂದಿ ಊಟ ಮಾಡಿದ್ದಲ್ಲದೆ, ಅಲ್ಲಿನ ಏಜೆಂಟರಿಗೆ ಸಹ ಊಟ ಮಾಡಿ ಬರುವಂತೆ ಸೂಚಿಸಿದ್ದಾರೆ. ಇದು ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ.
    ಕುಮಾರೇಶ್ವರ ನಗರ, ಮೂಕಾಂಬಿಕಾ ನಗರ, ನೀರಾವರಿ ಕ್ವಾರ್ಟ್​ರ್ಸ್​ ಸೇರಿ ಸುತ್ತಲಿನ ನಿವಾಸಿಗಳು ಇಲ್ಲಿನ ಮತ ಚಲಾಯಿಸಲು ಆಗಮಿಸಿದ್ದರು. ಸುಮಾರು 20 ನಿಮಿಷಗಳ ಕಾಲ ಮತದಾನ ನಿಲ್ಲಿಸಲಾಗಿದೆ ಎಂದು ಮತದಾರರು ಆರೋಪಿಸಿದ್ದು, ಸಿಬ್ಬಂದಿ ವಿರುದ್ಧ ಕ್ರಮಕ್ಕೂ ಆಗ್ರಹಿಸಿದ್ದಾರೆ.
    ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು, ಈ ಮಾಹಿತಿ ನನ್ನ ಗಮನಕ್ಕೂ ಬಂದಿದೆ. ಪರಿಶೀಲನೆ ನಡೆಸಲಾಗುವುದು. ಸರಳವಾಗಿ ಮತದಾನ ಪ್ರಕ್ರಿಯೆ ನಡೆಸಬೇಕು. ಒಂದು ವೇಳೆ ಸಿಬ್ಬಂದಿ ಊಟಕ್ಕಾಗಿ ಮತದಾನ ಪ್ರಕ್ರಿಯೆ ಸ್ಥಗಿತಗೊಳಿಸಿದ್ದರೆ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts