More

    ಸಮಸ್ಯೆ ಗಮನಕ್ಕೆ ತಂದರೆ ಪರಿಹಾರ, ಶಾಸಕ ಶ್ರೀನಿವಾಸಮೂರ್ತಿ ಭರವಸೆ, ಡಾ. ಜಗಜೀವನರಾಂ ಭವನಕ್ಕೆ ಶಂಕುಸ್ಥಾಪನೆ

    ನೆಲಮಂಗಲ: ಗ್ರಾಮದ ಯುವಜನತೆ, ಸೀಶಕ್ತಿ ಸಂಘದ ಮಹಿಳೆಯರು ಸೇರಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಸಮುದಾಯ ಭವನ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಡಾ. ಕೆ. ಶ್ರೀನಿವಾಸ್‌ಮೂರ್ತಿ ಹೇಳಿದರು.

    ತಾಲೂಕಿನ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿಯ ಬಾವಿಕೆರೆ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಶಾಸಕರ ವಿಶೇಷ ಅನುದಾನದಡಿ ನಿರ್ಮಾಣಗೊಳ್ಳಲಿರುವ ಡಾ. ಬಾಬು ಜಗಜೀವನರಾಂ ಭವನಕ್ಕೆ ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
    ಕೆಲ ವರ್ಷಗಳ ಹಿಂದೆಯೇ ಸಮುದಾಯ ಭವನ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಅದನ್ನು ಪರಿಗಣಿಸಿ 2016-17ನೇ ಸಾಲಿನ ವಿಶೇಷ ಅನುದಾನದಡಿ 10 ಲಕ್ಷ ಅನುದಾನ ಮೀಸಲಿರಿಸಲಾಗಿತ್ತು. ಆದರೆ ಗ್ರಾಮದಲ್ಲಿ ಸರ್ಕಾರಿ ಜಾಗ ಗುರುತಿಸಲು ವಿಳಂಬವಾಗಿದ್ದರಿಂದ, ಕಟ್ಟಡ ನಿರ್ಮಾಣ ಕಾಮಗಾರಿಗೆ ಈಗ ಚಾಲನೆ ನೀಡಲಾಗುತ್ತಿದೆ ಎಂದರು.

    ಗ್ರಾಮದ ಜನರು ವಿವಿಧ ಹಂತದ ಜನಪ್ರತಿನಿಧಿಗಳ ಜತೆ ನಿರಂತರ ಸಂಪರ್ಕ ಸಾಧಿಸಿ ಗ್ರಾಮದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಅಭಿವೃದ್ದಿ ಕಾರ್ಯ ಮಾಡಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

    ಸಂಪರ್ಕ ರಸ್ತೆ ಅಭಿವೃದ್ಧಿಗೆ ಮನವಿ: ಬಾವಿಕೆರೆ ಗ್ರಾಮಕ್ಕೆ ಬಸವನಗರ ಮಾರ್ಗವಾಗಿ ರಾ.ಹೆ.48ಕ್ಕೆ ಸಂಪರ್ಕ ಕಲ್ಪಿಸುವ 1.5 ಕಿಮೀ ಉದ್ದ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ. ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ, ಈ ರಸ್ತೆಯನ್ನು ಅಭಿವೃದ್ಧಿಪಡಿಸಿಕೊಡುವಂತೆ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿಕೊಂಡರು. ಜತೆಗೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಆಗ್ರಹಿಸಿದರು.

    ಕಾರ್ಯದರ್ಶಿ ಹರ್ಷ, ಬಿಲ್ ಕಲೆಕ್ಟರ್ ಮುನಿರಾಜು, ಮುಖಂಡರಾದ ಕೊಡಪನಹಳ್ಳಿ ವೆಂಕಟೇಶ್, ಸಂಪತ್ ಬಾಬು. ಚಿಕ್ಕಣ್ಣ, ರಮೇಶ್, ಸಿ. ಅಂಜನಾಮೂರ್ತಿ, ಬಿ.ಎಸ್. ಸಿದ್ದರಾಜು, ರಾಮಾಂಜಿನಪ್ಪ, ಬಿ.ಎಂ. ರವಿಕುಮಾರ್, ಜನನಿಜೈಭೀಮ್ ಯುವಕ ಸಂಘದ ಉಪಾಧ್ಯಕ್ಷ ವಿಜಯ್ ವೀಳ್ಯದೆಲೆ, ಪ್ರಧಾನ ಕಾರ್ಯದರ್ಶಿ ಎಸ್. ಗಂಗರಾಜು, ಕಾರ್ಯದರ್ಶಿ ಜಿ. ಶಿವಶಂಕರ್, ಎಸ್. ಶ್ರೀಧರ್, ಖಚಾಂಚಿ ಜಿ. ಕೃಷ್ಣಮೂರ್ತಿ, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ನಾಗರತ್ನ, ಗುತ್ತಿಗೆದಾರ ಮಧುಕುಮಾರ್, ಪ್ರಕಾಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts