More

    ವನ್ಯಜೀವಿಗಳ ಮೌನವೇದನೆ; ಮಳೆ ಬರದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರ

    ಕಾಂಕ್ರೀಟ್ ನಾಡಷ್ಟೇ ಅಲ್ಲ, ಭೀಕರ ಬರಗಾಲಕ್ಕೆ ರಾಜ್ಯದ ವನ್ಯಸಂಪತ್ತು ಸಹ ತತ್ತರಿಸಿದೆ. ಅರಣ್ಯ ಪ್ರದೇಶಗಳ ಕೆರೆ, ಕಟ್ಟೆಗಳು ಸಂಪೂರ್ಣ ಬತ್ತಿ ಹೋಗಿರುವುದರಿಂದ ವನ್ಯಜೀವಿಗಳು ಹನಿ ನೀರಿಗೂ ತತ್ತರಿಸುತ್ತಿವೆ. ಮೂಕ ಪ್ರಾಣಿಗಳ ಕಷ್ಟಕ್ಕೆ ಎಚ್ಚೆತ್ತ ಅರಣ್ಯ ಇಲಾಖೆ ಕೃತಕ ಹೊಂಡಗಳಿಗೆ ಮೊರೆ ಹೋಗಿದೆ. ಮೃಗಾಲಯಗಳಲ್ಲೂ ಪ್ರಾಣಿಗಳ ದಾಹ ತಣಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಇನ್ನೊಂದು ತಿಂಗಳಲ್ಲಿ ಮಳೆ ಬರದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ. ರಾಜ್ಯದ ಅರಣ್ಯದಂಚಿನ ಪ್ರದೇಶಗಳ ಪರಿಸ್ಥಿತಿಯನ್ನು ವಿಜಯವಾಣಿ ರಿಯಾಲಿಟಿ ಚೆಕ್ ಮೂಲಕ ತೆರೆದಿಡುತ್ತಿದೆ.

    ಎಚ್ಚೆತ್ತ ದಾವಣಗೆರೆ ಚಿತ್ರದುರ್ಗ ಜಿಲ್ಲೆ

    • ವನ್ಯಜೀವಿಗಳಿಗೆ ಕುಡಿಯುವ ನೀರಿನ ತತ್ವಾರ
    • ಕೃತಕ ಹೊಂಡಗಳಿಗೆ ಟ್ಯಾಂಕರ್ ನೀರು ಪೂರೈಕೆ
    • ರಂಗಯ್ಯನದುರ್ಗದಲ್ಲಿ 10 ಹೊಂಡ ನಿರ್ಮಾಣ
    • ಒಮ್ಮೆ ಹೊಂಡ ತುಂಬಿಸಿದರೆ 15 ದಿನ ನೀರು ಲಭ್ಯ
    • ಚಿತ್ರದುರ್ಗದ ಜೋಗಿಹಟ್ಟಿಗೆ ಟ್ಯಾಂಕರ್ ನೀರು
    • ಕೃತಕ ಹೊಂಡ ನಿರ್ಮಾಣ ಮಾಡಿ ನೀರು ಪೂರೈಕೆ
    • ಇನ್ನೊಂದು ತಿಂಗಳಲ್ಲಿ ಮಳೆಯಾಗದಿದ್ದರೆ ಸಮಸ್ಯೆ

    ಬೆಳಗಾವಿಯ ಪರಿಸ್ಥಿತಿ ಏನು?

    • ಕಾಡಿನ ಪ್ರಾಣಿಗಳು ನಾಡಿಗೆ ಬರದಂತೆ ತಡೆಗೆ ಸಿದ್ಧತೆ
    • ವಿವಿಧ ಅರಣ್ಯಗಳ ವ್ಯಾಪ್ತಿಯಲ್ಲಿ 60 ಕೆರೆ ನಿರ್ಮಾಣ
    • ಕಾಡಂಚಿನ ಬಹುತೇಕ ಕೆರೆಗಳಲ್ಲಿ ಸದ್ಯ ನೀರಿನ ಲಭ್ಯತೆ ಇದೆ
    • ತಿಂಗಳ ಬಳಿಕ ಮಳೆಯಾಗದಿದ್ದರೆ ಪರಿಸ್ಥಿತಿ ಗಂಭೀರ

    ಬಾಯಾರಿವೆ ಕೃಷ್ಣಮೃಗಗಳು

    • ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಕೃಷ್ಣಮೃಗ ಅರಣ್ಯದಲ್ಲೂ ಬರ
    • ಅಭಯಾರಣ್ಯದ ಕೆರೆ, ಕಟ್ಟೆಗಳು ಸಂಪೂರ್ಣ ಬರಿದಾಗಿದೆೆ
    • 11,950 ಹೆಕ್ಟೇರ್ ಅರಣ್ಯದಲ್ಲಿ 42 ಕಡೆ ತೊಟ್ಟಿಗಳನ್ನು ನಿರ್ವಿುಸಲಾಗಿದೆ
    • ತೊಟ್ಟಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ
    • ಬೃಹತ್ ಅರಣ್ಯದಲ್ಲಿ 7100ಕ್ಕೂ ಅಧಿಕ ಕೃಷ್ಣಮೃಗ, ಜಿಂಕೆ, ಕರಡಿಗಳು ನೆಲೆ ಕಂಡುಕೊಂಡಿವೆ

    ಬಂಡೀಪುರಕ್ಕೆ ಸೋಲಾರ್ ಆಸರೆ

    • ಸೋಲಾರ್ ಚಾಲಿತ ಬೋರ್​ವೆಲ್​ಗಳೇ ಆಸರೆ
    • ಒಟ್ಟು 57 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ
    • ಬೋರ್​ವೆಲ್ ನೀರಿನ ಮಟ್ಟ ಕಡಿಮೆ ಆದರೆ ಸಮಸ್ಯೆ
    • ನಾಗರಹೊಳೆ ಅರಣದ್ಯ ಕೆರೆ-ಕಟ್ಟೆಗಳಲ್ಲಿ ನೀರು ಬತ್ತಿ ಹೋಗಿದೆ

    ಹಾವೇರಿಯಲ್ಲೂ ರೋದನೆ

    • ರಾಣೆಬೆನ್ನೂರು ಅಭಯಾರಣ್ಯದಲ್ಲಿ ನೀರಿನ ಸಮಸ್ಯೆ
    • ಅಭಯಾರಣ್ಯದ ಕೆರೆಕಟ್ಟೆಗಳು ಸಂಪೂರ್ಣ ಖಾಲಿ
    • ನೀರಿನ ಸಮಸ್ಯೆ ಗಂಭೀರ, ಕೃಷ್ಣಮೃಗಗಳ ಪರದಾಟ

    ಹಂಪಿ ಝುೂ ಕೂಲ್ ಕೂಲ್

    • ಹೊಸಪೇಟೆ ತಾಲೂಕಿನ ಅಟಲ್ ಝುೂ ತಂಪಾಗಿದೆ
    • ಪ್ರಾಣಿಗಳಿಗೆ ಎಳನೀರು, ತಾಜಾ ಹಣ್ಣಿನ ರಸ ಪೂರೈಕೆ
    • ಸ್ಪ್ರಿಂಕ್ಲರ್, ಫಾಗರ್ಸ್, ನೀರಿನ ಬಾತ್ ಮೂಲಕ ವಿಶೇಷ ಆರೈಕೆ
    • ಜಿರಾಫೆ, ಕರಡಿಗಳಿಗೆ ಐಸ್ ಕ್ಯೂಬ್​ನೊಂದಿಗೆ ತಾಜಾ ಹಣ್ಣು ನೀಡಿಕೆ
    • ಎಲೆಕ್ಟ್ರೋಲೈಟ್ ಮಿಶ್ರಿತ ನೀರನ್ನು ಒದಗಿಸಲಾಗುತ್ತಿದೆ

    ಶಿವಮೊಗ್ಗ, ಕೊಡಗಿನಲ್ಲಿ ಸಮಸ್ಯೆ ಇಲ್ಲ

    • ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ
    • ಅಭಯಾರಣ್ಯದ ಕೆರೆಗಳಲ್ಲಿ ಇನ್ನೂ ಎರಡು ತಿಂಗಳು ನೀರಿನ ಸಮಸ್ಯೆ ಕಾಡುವ ಸಾಧ್ಯತೆ ಇಲ್ಲ
    • ಮಳೆಗಾಲಕ್ಕೆ ಮೊದಲೇ 12 ಕೆರೆಗಳ ಹೂಳೆತ್ತಿರುವುದರಿಂದ ಪೂರ್ಣ ಬತ್ತದ ಜಲಮೂಲ
    • ಕೊಡಗಿನ ಬಹುತೇಕ ಅರಣ್ಯ ಪ್ರದೇಶದಲ್ಲಿ ಈ ಹಿಂದೆಯೇ ಕೆರೆಗಳ ನಿರ್ಮಾಣ ಆಗಿದೆ
    • ಸೋಲಾರ್ ವಿದ್ಯುತ್ ಚಾಲಿತ ಬೋರ್​ವೆಲ್ ಬಳಸುತ್ತಿರುವುದರಿಂದ ಹೆಚ್ಚು ಸಮಸ್ಯೆಯಾಗಿಲ್ಲ

    ಬೆಂಗಳೂರು ಸುತ್ತ ಬರ

    • ರಾಮನಗರ ಜಿಲ್ಲೆಯಲ್ಲಿ ಅರಣ್ಯ ಕೆರೆಗಳಿಗೆ ಜಲ ಪೂರೈಕೆ, ಸದ್ಯಕ್ಕೆ ನೀರಿನ ಕೊರತೆ ಇಲ್ಲ, ಕೃತಕ ಹೊಂಡ ನಿರ್ಮಾಣ ವಿಳಂಬ
    •  ಬೆಂಗಳೂರು ಗ್ರಾಮಾಂತರದಲ್ಲೂ ನೀರಿನ ಹೊಂಡ ಆಗಿಲ್ಲ
    • ಚಿಕ್ಕಬಳ್ಳಾಪುರ ಸುತ್ತ ಖಾಸಗಿ ಸಂಘಟನೆಗಳಿಂದಲೇ ನೀರಿನ ವ್ಯವಸ್ಥೆ
    • ತುಮಕೂರಿನ ಅರಣ್ಯದಂಚಿನಲ್ಲಿ ನೀರಿನ ಹೊಂಡ ನಿರ್ವಿುಸಿಲ್ಲ
    • ದೇವರಾಯನದುರ್ಗ ಅರಣ್ಯ ಸುತ್ತ ಚಿಕ್ಕ ಕುಂಡಗಳ ವ್ಯವಸ್ಥೆ
    • ಕೋಲಾರದ ಕೆಲವೆಡೆ ಕಿರು ತೊಟ್ಟಿಗಳ ಮೂಲಕ ನೀರಿನ ಸೌಲಭ್ಯ

    ಮೈಸೂರು ಝುೂನಲ್ಲಿ ಪ್ರಾಣಿಗಳು ತಂಪು

    • ಮೈಸೂರು ಝುೂನಲ್ಲಿ ಪ್ರಾಣಿಗಳಿಗೆ ಕೂಲಿಂಗ್ ವ್ಯವಸ್ಥೆ ಜಾರಿ
    • ಪ್ರಾಣಿ-ಪಕ್ಷಿಗಳಿಗೆ ನೀರು ಸಿಂಪಡಣೆ, ಕೊಳಗಳ ನಿರ್ಮಾಣ
    • ಪ್ರತಿನಿತ್ಯ ಪ್ರಾಣಿಗಳಿಗೆ ಹಣ್ಣು, ತಂಪಾದ ಪಾನೀಯ ವಿತರಣೆ
    • ಕರಡಿಗಳಿಗೆ ಐಸ್​ಬಾಕ್ಸ್​ನಲ್ಲಿ ಕಲ್ಲಂಗಡಿ, ಕಿತ್ತಳೆ ಹಣ್ಣು ಪೂರೈಕೆ
    • ಹುಲಿ, ಸಿಂಹ, ಚಿರತೆಗಳಿಗಾಗಿ ಪ್ರತ್ಯೇಕ ಕೊಳಗಳ ನಿರ್ಮಾಣ
    • ಆನೆ ಮತ್ತು ಜಿಂಕೆಗಳಿಗಾಗಿ ಹಲವು ಕೆಸರು ಗುಂಡಿ ಸ್ಥಾಪನೆ

    ತುಂಗಭದ್ರಾ ತೀರದ ಸಮಸ್ಯೆ

    • ತುಂಗಭದ್ರಾ ತೀರದಲ್ಲಿ ನೀರಿನ ಸಮಸ್ಯೆ ಗಂಭೀರ
    • ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರಿಗೆ ಕಾಡುತ್ತಿದೆ ಬರಗಾಲ
    • ಕೆರೆಗಳು ಖಾಲಿಯಾಗಿ ಪ್ರಾಣಿ-ಪಕ್ಷಿಗಳಿಗೆ ಸಮಸ್ಯೆ
    • ದರೋಜಿ ಕರಡಿಧಾಮದಲ್ಲಿ 30 ಹೊಂಡಗಳಿಗೆ ನೀರು
    • ಗುಡೆಕೋಟೆಯಲ್ಲಿ 23 ಹೊಂಡಗಳ ನಿರ್ಮಾಣ
    • ಬಂಕಾಪುರ ತೋಳ ಧಾಮಕ್ಕೆ ನೀರಿನ ಸಮಸ್ಯೆ
    • ಇರಕಲ್​ಗಡಾ ಕರಡಿ ಧಾಮದಲ್ಲೂ ನೀರಿಗೆ ಬರ
    • ಅರಣ್ಯ ಇಲಾಖೆಯಿಂದ ಅಲ್ಲಲ್ಲಿ ಹೊಂಡ ನಿರ್ಮಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts