More

    ಶಿರಾ ಉಪಸಮರದ ಅಖಾಡದಲ್ಲಿ ಪ್ರಮುಖ ಪಕ್ಷಗಳ ಅಬ್ಬರ

    ಶಿರಾ: ಉಪಸಮರದ ಅಖಾಡದಲ್ಲಿ ಪ್ರಮುಖ ಪಕ್ಷಗಳ ಪ್ರಚಾರದ ಅಬ್ಬರ ಜೋರಾಗಿದ್ದು, ಶುಕ್ರವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಕೆ.ಎಸ್.ಈಶ್ವರಪ್ಪ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.

    ಶಿರಾದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡ, ವಿಜಯದಶಮಿ ನಂತರ ಚುನಾವಣೆವರೆಗೂ ಕ್ಷೇತ್ರದಲ್ಲಿಯೇ ಉಳಿದು ಪ್ರಚಾರ ನಡೆಸುತ್ತೇನೆ, ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿಕೊಂಡು ಹೋಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    4 ವಿಧಾನ ಪರಿಷತ್ ರಾಜರಾಜೇಶ್ವರಿನಗರ ವಿಧಾನಸಭಾ ಉಪಚುನಾವಣೆ ಸೇರಿ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ, ಪಕ್ಷದ ಮುಖಂಡರು ಎಲ್ಲೆಡೆಯೂ ಓಡಾಡಬೇಕಿದೆ ಎಂದರು.

    ಪಕ್ಷದ ಶಾಸಕರಿಗೆ ಶಿರಾ ಉಪಚುನಾವಣೆಯ ಜವಾಬ್ದಾರಿ ನೀಡಲಾಗಿದೆ, ಸತ್ಯನಾರಾಯಣ ಕುಟುಂಬದ ಸದಸ್ಯರೆಲ್ಲರೂ ಪ್ರತಿದಿನ ಹಳ್ಳಿಗೆ ತೆರಳಿ ಜನರನ್ನು ನೇರವಾಗಿ ಸಂಪರ್ಕಿಸಿ ಮತ ಕೇಳುವಂತೆ ಸಲಹೆ ನೀಡಿದ್ದೇನೆ, 15ಕ್ಕೂ ಹೆಚ್ಚು ಸಮುದಾಯದ ಮುಖಂಡರು ಜೆಡಿಎಸ್ ಜತೆ ಗುರುತಿಸಿಕೊಂಡಿದ್ದಾರೆ ಎಂದರು.

    ಶಿರಾ ಕ್ಷೇತ್ರ ಮೊದಲಿಂದಲೂ ಜೆಡಿಎಸ್‌ನದ್ದೇ, ನಾನು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ 9 ಶಾಸಕರು ಆಯ್ಕೆ ಮಾಡಿ ನನಗೆ ಶಕ್ತಿ ನೀಡಿದ್ದರು, ಇತ್ತೀಚಿನ ದಿನಗಳಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ನಮ್ಮ ಶಕ್ತಿ ಕುಂದಿಸಿವೆ ಎಂದರು.

    ಕಳೆದೆರಡು ದಿನಗಳಲ್ಲಿ ಕಾರ್ಯಕರ್ತರ ಉತ್ಸಾಹ ಗಮನಿಸಿದ್ದೇನೆ, ಈ ಬಾರಿ ಗೆಲುವು ನಮ್ಮದೆ. ನನಗೆ ವಿಶ್ವಾಸವಿದೆ, ಬಿಜೆಪಿ ಮತ್ತು ಕಾಂಗ್ರೆಸ್ ಜತೆ ಸರ್ಕಾರ ರಚಿಸಿ ಸಂದರ್ಭದಲ್ಲಿ ಹೆಚ್ಚು ನಷ್ಟ ಉಂಟಾಗಿದ್ದು ಜೆಡಿಎಸ್‌ಗೆ ಎಂದು ಒಪ್ಪಿಕೊಂಡರು.
    ನಾನು ಹೋರಾಟಗಾರ ಎಲ್ಲವನ್ನು ಎದುರಿಸುವ ಶಕ್ತಿ ಇದೆ ಎಂದು ಇತರ ಪಕ್ಷಗಳಿಗೆ ಎಚ್ಚರಿಕೆ ಸವಾಲು ಎಸೆದರು.
    ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಬೆಮೆಲ್‌ಕಾಂತರಾಜು, ವಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು, ವಾಜಿ ಶಾಸಕ ವೈ.ಎಸ್.ವಿ.ದತ್ತ, ಕ್ಷೇತ್ರದಉಸ್ತುವಾರಿ ತಿಪ್ಪೇಸ್ವಾಮಿ, ತಿಮ್ಮರಾಯಪ್ಪ, ಆರ್.ರಾವೇಂದ್ರ ಇದ್ದರು.

    ಶಿರಾದಲ್ಲಿ ಜಮೀರ್ ಪ್ರಚಾರ: ಶಿರಾದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಪ್ರಚಾರ ನಡೆಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಚಂದ್ರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದು ಗೆಲುವು ಖಚಿತ ಎಂದರು. ಹೇವಾವತಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಹಾಗೂ ಅವರ ಅವಧಿಯಲ್ಲಿ 20 ಸಾವಿರ ಮನೆಗಳು ನಿರ್ವಾಣ ಮತು ್ತಕೈಗಾರಿಕಾ ವಲಯ ಮಂಜೂರು ವಾಡಿಸಿದರ ಪರಿಣಾಮ ಉದ್ಯೋಗ ಸೃಷ್ಟಿಯಾಗಲಿದೆ ಎಂದರು. ವಾಜಿ ಸಚಿವ ಜಿ.ಎ.ಭಾವ, ಶಕೀಲ್ ನವಾಜ್, ಕೆ.ಎಸ್.ಅಮೀರ್‌ಅಹಮದ್, ಅಯ್ಯೂಬ್‌ಖಾನ್, ಬಿ.ಕೆ.ಅಲ್ತಾಫ್‌ಖಾನ್ ಇದ್ದರು.

    ಕೈಗೆ ಅಧಿಕಾರ ಕೊಡಿ: ಶ್ರಮಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಲಕ್ಷಾಂತರ ಕುಟುಂಬಗಳಿಗೆ ಕಾಂಗ್ರೆಸ್ ಸರ್ಕಾರ ನೀಡಿದ ಯೋಜನೆಗಳು ಮರುಜಾರಿಯಾಗಲು ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ, ಕಾಮಗೊಂಡನಹಳ್ಳಿ, ವೀರಗಾನಹಳ್ಳಿ, ಗೌಡಗೆರೆ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಅನ್ನದಾತನಿಗೆ ಕೃಷಿ ಭಾಗ್ಯ, ಕ್ಷೀರಭಾಗ್ಯ, ಪಶುಭಾಗ್ಯದಂತ ಯೋಜನೆ ಜಾರಿಗೊಳಿಸಿ ಸರ್ವರಿಗೂ ಸಮಪಾಲು ಎಂಬ ಉತ್ತಮ ಆಡಳಿತ ನೀಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದರು. 3 ಸಾವಿರ ಕೋಟಿ ಅನುದಾನ ತಂದು ಶಿರಾ ಕ್ಷೇತ್ರ ಅಭಿವೃದ್ಧಿ ವಾಡಿದ್ದ ಜಯಚಂದ್ರರನ್ನು 2018ರಲ್ಲಿ ಸೋಲಿಸಿ, ಪಶ್ಚಾತ್ತಾಪ ಪಟ್ಟಿದ್ದೀರಿ ಮತ್ತೆ ಉಪ ಚುನಾವಣೆ ಬಂದಿದೆ, ಅತಿ ಹೆಚ್ಚು ಮತ ನೀಡಿ ಗೆಲ್ಲಿಸುವಂತೆ ಮನವಿ ವಾಡಿದರು. ವಾಜಿ ಸಚಿವರಾದ ಉವಾಶ್ರೀ, ಆಂಜನೇಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts